ಬೆಂಗಳೂರಿನಲ್ಲಿ ಅನ್​ಲಾಕ್​ ಆದರೂ ಸಾರಿಗೆ ಸಂಚಾರ ಡೌಟ್

ಜೂನ್ 14ರ ನಂತರ ಕೇವಲ ಅಗತ್ಯವಸ್ತುಗಳ ಖರೀದಿ ಸಮಯ ವಿಸ್ತರಣೆ ಮಾಡಲಾಗುತ್ತೆ. ಅಂದುಕೊಂಡಂತೆ ಕೊವಿಡ್ ಪಾಸಿಟಿವಿಟಿ ದರ ಕಡಿಮೆಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಡೌಟ್ ಆಗಿದೆ. ಕೇವಲ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಅನ್​ಲಾಕ್​ ಆದರೂ ಸಾರಿಗೆ ಸಂಚಾರ ಡೌಟ್
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಮಹಾಮಾರಿ ಕೊರೊನಾ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಲಾಕ್​ಡೌನ್ ಹೇರಲಾಗಿತ್ತು. ಸದ್ಯ ಈಗ ಕೊರೊನಾ ಸೋಂಕಿನ ಸಾವು-ನೋವು ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜೂನ್ 14ರ ಬಳಿಕ ಹಂತ ಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ಚಿಂತಿಸಿದೆ. ಆದರೆ ಅನ್​ಲಾಕ್ ಆದ ಬಳಿಕ ಸಾರಿಗೆ ಸಂಚಾರ ಶುರುವಾಗಲಿದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಸರ್ಕಾರ ಶಾಕ್ ಕೊಡಲಿದೆ. ಅನ್​ಲಾಕ್​ ಆದರೂ ಬೆಂಗಳೂರಿನಲ್ಲಿ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಡೌಟ್ ಆಗಿದೆ.

ಜೂನ್ 14ರ ನಂತರ ಕೇವಲ ಅಗತ್ಯವಸ್ತುಗಳ ಖರೀದಿ ಸಮಯ ವಿಸ್ತರಣೆ ಮಾಡಲಾಗುತ್ತೆ. ಅಂದುಕೊಂಡಂತೆ ಕೊವಿಡ್ ಪಾಸಿಟಿವಿಟಿ ದರ ಕಡಿಮೆಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಡೌಟ್ ಆಗಿದೆ. ಕೇವಲ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಬಟ್ಟೆ, ಚಿನ್ನದಂಗಡಿಗೆ ವಾರದಲ್ಲಿ 3 ದಿನ ಅವಕಾಶ ಸಿಗುವ ಸಾಧ್ಯತೆ ವ್ಯಕ್ತವಾಗಿದೆ. ಬೆಂಗಳೂರಿನ ನಾಲ್ಕು ವಲಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಶೇಕಡಾ 5ಕ್ಕಿಂತ ಮೇಲಿದೆ. ಹೀಗಾಗಿ ಬಿಎಂಟಿಸಿ ಬಸ್ ಸಂಚಾರ ಬೇಡ ಎಂಬ ಚರ್ಚೆ ಶುರುವಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಶೇಕಡಾ 5.2ಇದೆ. ಪೂರ್ವ ವಲಯದಲ್ಲಿ ಶೇಕಡಾ 5..3, ಮಹಾದೇವಪುರ ವಲಯ-5.6, ಆರ್ ಆರ್ ನಗರ- 5.4 ಇದೆ. ಕಳೆದ ಹತ್ತು ದಿನದಲ್ಲಿ ಈ ವಲಯಗಳಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗಿಲ್ಲ. ಹೀಗಾಗಿ ಆಟೋ, ಓಲಾ, ಉಬರ್​ಗೆ ಅವಕಾಶ ಕೊಟ್ಟು ಬಸ್ ಸೇವೆ ಬೇಡ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬೆಂಗಳೂರು ಅನ್​ಲಾಕ್​ಗೆ ಅಧಿಕಾರಿಗಳಿಂದ ನೀಲನಕ್ಷೆ ಸಿದ್ಧ
ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಕುರಿತು ಚರ್ಚೆ ನಡೆದಿದೆ. ಬೆಳಗ್ಗೆ 6-12 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಬಾರ್-ರೆಸ್ಟೋರೆಂಟ್​ಗಳಲ್ಲಿ ಸಂಜೆಯವರೆಗೆ ಪಾರ್ಸೆಲ್ ನೀಡುವುದಕ್ಕೆ ಅನುಮತಿ ನೀಡಲಾಗುತ್ತೆ. ಪಾರ್ಕ್​ಗಳಲ್ಲಿ ಬೆಳಗ್ಗೆ 5ರಿಂದ 8 ಗಂಟೆಯವರೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಜನಸಂದಣಿ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧ. ಜೂನ್ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಜಾರಿಯಾಗಬಹುದು. ಷರತ್ತುಬದ್ಧ ಅನ್​ಲಾಕ್ ಪ್ರಕ್ರಿಯೆಗೆ ಅಧಿಕಾರಿಗಳ ಪ್ರಸ್ತಾಪಿಸಿದ್ದು ನಿನ್ನೆ ಸಚಿವ ಅಶೋಕ್ ನೇತೃತ್ವದಲ್ಲಿ ಪೂರ್ವಭಾವಿ ಚರ್ಚೆ ನಡೆದಿದೆ.

ಇದನ್ನೂ ಓದಿ: CM on Lockdown Relaxation : ಶೇ.5ಕ್ಕಿಂತ ಪಾಸಿಟಿವಿಟಿ ರೇಟ್ ಬರೋ ಜಿಲ್ಲೆಗಳಲ್ಲಿ ಅನ್​ಲಾಕ್..?