ಕೊವಿಡ್ ಪ್ರಕರಣ ಏರಿಕೆ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿರ್ಬಂಧ ಜಾರಿ

Section 144 in Bengaluru City: ಸಾರ್ವಜನಿಕರ ಸುರಕ್ಷೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿದೆ.

  • TV9 Web Team
  • Published On - 17:26 PM, 7 Apr 2021
ಕೊವಿಡ್ ಪ್ರಕರಣ ಏರಿಕೆ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿರ್ಬಂಧ ಜಾರಿ
ಬೆಂಗಳೂರಿನಲ್ಲಿ ಸ್ವಾಬ್ ಟೆಸ್ಟಿಂಗ್

ಬೆಂಗಳೂರು: ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಸಿಆರ್​ಪಿಸಿ ಸೆಕ್ಷನ್ 144 ನಿರ್ಬಂಧ ಹೇರಿದೆ. ಸಾರ್ವಜನಿಕರ ಸುರಕ್ಷೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್ ವಸತಿ ಸಮುಚ್ಚಯದಲ್ಲಿರುವ ಈಜುಕೊಳ, ಜಿಮ್, ಪಾರ್ಟಿ ಹಾಲ್ ಮೊದಲಾದವುಗಳ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹಿ ಹಾಕಿರುವ ಆದೇಶದವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ಕಳುಹಿಸಿಕೊಡಲಾಗಿದೆ.

ರಾಜ್ಯದಲ್ಲಿ ಮಂಗಳವಾರ 6,000ಕ್ಕಿಂತಲೂ ಹೆಚ್ಚು ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.


ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ 12 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ ಎಂದು ಕೇಂದ್ರ ಆರೋಗ್ಯ ಸಚಿವರು ಬುಧವಾರ ಹೇಳಿದ್ದಾರೆ. ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಶೇಕಡಾ 5.35 ಪ್ರಕರಣಗಳು ಕರ್ನಾಟಕದಲ್ಲಿದೆ ಎಂದು ಸಚಿವರು ಹೇಳಿದ್ದಾರೆ.


ಕೊವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದು ಮತ್ತು ಇತರ ಚಟುವಟಿಕೆಗಳಿಗೆ ಈ ಮೊದಲೇ ನಿರ್ಬಂಧ ವಿಧಿಸಿದೆ.

ಏಪ್ರಿಲ್ 20ರವರೆಗೆ ನಗರದಾದ್ಯಂತ ಮೆರವಣಿಗೆ, ಯಾವುದೇ ಗುಂಪುಗಳಿಂದ ಯಾವುದೇ ಉದ್ದೇಶದಿಂದ ಕೂಡಿದ ಪ್ರತಿಭಟನೆಗೆ ಅವಕಾಶವಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳು, ಸಮೂಹ ಪ್ರಾರ್ಥನೆ ಮತ್ತು ಆರಾಧನಾಲಯಗಳಲ್ಲಿ ಯಾವುದೇ ಸಮಾರಂಭಗಳನ್ನು ಏಪ್ರಿಲ್ 20ರ ವರೆಗೆ ನಡೆಸುವಂತಿಲ್ಲ ಎಂದು ಪಂತ್ ಹೇಳಿದ್ದಾರೆ.

ಭಾನುವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಭಾನುವಾರ ಹೊರಡಿಸಿದ ಸುತ್ತೋಲೆ ಪ್ರಕಾರ ಜಿಮ್, ಈಜುಕೊಳ ಮೊದಲಾದವುಗಳಲ್ಲಿ ಶೇ 50ರಷ್ಟು ಜನರು ಭಾಗವಹಿಸಲು ಅನುಮತಿ ಇದೆ. ಗುಂಪು ಸೇರದಂತೆ ನೋಡಿಕೊಳ್ಳಬೇಕು ಮತ್ತು ಶಾರೀರಿಕ ಅಂತರ ಕಾಪಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.

ಪಬ್ , ಬಾರ್, ಕ್ಲಬ್, ರೆಸ್ಟೊರೆಂಟ್​ಗಳಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಸ್ಯಾನಿಟೈಜರ್ ಬಳಸಬೇಕು, ಥರ್ಮಲ್ ಸ್ಕ್ರೀನಿಂಗ್ ಇರಬೇಕು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಶೇ 50ರಷ್ಟು ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಹೊಸದಾಗಿ 6,150 ಮಂದಿಗೆ ಕೊರೊನಾ ದೃಢ

ಉದ್ಯೋಗದ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡಲು ಕೇಂದ್ರದ ಅನುಮತಿ: ಭಾನುವಾರದಿಂದ ಜಾರಿ ಸಾಧ್ಯತೆ

( Covid-19 case surge Karnataka state imposes restrictions under Section 144 in Bengaluru city limits)