ಸತತ ಒಂದು ಗಂಟೆಯಿಂದ ದಿನೇಶ್​ ಕಲ್ಲಹಳ್ಳಿ ವಿಚಾರಣೆ, ಪೊಲೀಸರ ಎದುರು ಸಿ.ಡಿ. ಗುಟ್ಟು ಬಿಟ್ಟುಕೊಟ್ಟ ಕಲ್ಲಹಳ್ಳಿ?

Ramesh Jarkiholi CD Controversy: ಸದ್ಯದ ಮಾಹಿತಿ ಪ್ರಕಾರ ಸಂತ್ರಸ್ಥೆ ಕುರಿತಾದ ಕೆಲ ಮಾಹಿತಿಯನ್ನು ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಖಾಕಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ದಿನೇಶ್, ವಿಡಿಯೋದಲ್ಲಿರುವ ಸಂತ್ರೆಸ್ಥೆ ಬಗ್ಗೆ ಒಂದಷ್ಟು ಗುಟ್ಟು ಬಿಟ್ಟುಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

  • TV9 Web Team
  • Published On - 15:03 PM, 5 Mar 2021
ಸತತ ಒಂದು ಗಂಟೆಯಿಂದ ದಿನೇಶ್​ ಕಲ್ಲಹಳ್ಳಿ ವಿಚಾರಣೆ, ಪೊಲೀಸರ ಎದುರು ಸಿ.ಡಿ. ಗುಟ್ಟು ಬಿಟ್ಟುಕೊಟ್ಟ ಕಲ್ಲಹಳ್ಳಿ?
ದಿನೇಶ್ ಕಲ್ಲಹಳ್ಳಿ

ಬೆಂಗಳೂರು: ರಮೇಶ್​ ಜಾರಕಿಹೊಳಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಬಿಡಿಗಡೆ ಮಾಡಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಯನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ=ಇನ್​ಸ್ಪೆಕ್ಟರ್ ಬಿ.ಮಾರುತಿ ಅವರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಸಂತ್ರಸ್ಥೆ ಕುರಿತಾದ ಕೆಲ ಮಾಹಿತಿಯನ್ನು ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಖಾಕಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ದಿನೇಶ್, ವಿಡಿಯೋದಲ್ಲಿರುವ ಸಂತ್ರಸ್ಥೆ ಬಗ್ಗೆ ಒಂದಷ್ಟು ಗುಟ್ಟು ಬಿಟ್ಟುಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಪೊಲೀಸ್ ಇನ್​ಸ್ಪೆಕ್ಟರ್​ ಬಿ.ಮಾರುತಿ ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ಮಾಡಿ ಮಾಹಿತಿ ಪಡೆಯುತ್ತಿದ್ದು, ಸತತ ಒಂದು ಗಂಟೆಗೂ ಹೆಚ್ಚು ಕಾಲದಿಂದ ವಿವರಣೆ ಪಡೆದುಕೊಳ್ಳುತ್ತಿದ್ದಾರೆ. ಈ ತನಿಖೆಯಲ್ಲಿ ದಿನೇಶ್ ಕಲ್ಲಹಳ್ಳಿ ಬಿಟ್ಟುಕೊಡುವ ಮಾಹಿತಿ ಪ್ರಕರಣಕ್ಕೆ ಅತಿ ಮುಖ್ಯವಾಗಲಿದ್ದು, ಯಾವೆಲ್ಲಾ ವಿಚಾರಗಳು ಹೊರಬರಲಿವೆ ಎಂಬುದು ಕುತೂಹಲ ಮೂಡಿಸಿದೆ.