ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 13 ಲಕ್ಷ ಮೌಲ್ಯದ ಚಿನ್ನ, ಫಾರಿನ್ ಸಿಗರೇಟ್ ಪತ್ತೆ

ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಫುಡ್ ಪ್ಯಾಕೆಟ್​ಗಳ ರೀತಿಯಲ್ಲಿ ಚಿನ್ನ ಮತ್ತು ಫಾರಿನ್ ಸಿಗರೇಟ್​ಗಳನ್ನು ಸಾಗಿಸುತ್ತಿದ್ದರು.

  • TV9 Web Team
  • Published On - 12:49 PM, 25 Jan 2021
ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 13 ಲಕ್ಷ ಮೌಲ್ಯದ ಚಿನ್ನ, ಫಾರಿನ್ ಸಿಗರೇಟ್ ಪತ್ತೆ
ವಶಕ್ಕೆ ಪಡೆದ ಚಿನ್ನ ಮತ್ತು ಫಾರಿನ್ ಸಿಗರೇಟ್

ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಸಿಗರೇಟ್​ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಫುಡ್ ಪ್ಯಾಕೆಟ್​ಗಳ ರೀತಿಯಲ್ಲಿ ಚಿನ್ನ ಮತ್ತು ಫಾರಿನ್ ಸಿಗರೇಟ್​ಗಳನ್ನು ಸಾಗಿಸುತ್ತಿದ್ದರು. ಲಗೇಜ್ ಸ್ಕ್ಯಾನ್ ಮಾಡಿದ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ₹ 13.02 ಲಕ್ಷ ಮೌಲ್ಯದ 165.89 ಗ್ರಾಂ ಚಿನ್ನ ಹಾಗೂ 12 ಸಾವಿರ ಗ್ರಾಂನಷ್ಟು ಸಿಗರೇಟ್ ಪತ್ತೆಯಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!