ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿದ ದುಷ್ಕರ್ಮಿಗಳಿಂದ ಹಣಕ್ಕೆ ಡಿಮ್ಯಾಂಡ್

ನಿವೃತ್ತ ಡಿಜಿ & ಐಜಿಪಿ ಶಂಕರ್ ಬಿದರಿ ಇ-ಮೇಲ್ ಐಡಿಯನ್ನು ಹ್ಯಾಕ್ ಮಾಡಲಾಗಿದೆ. ದುಷ್ಕರ್ಮಿಗಳು ಇ-ಮೇಲ್ ಐಡಿ ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಕಳಿಸಿದ್ದಾರೆ.

  • TV9 Web Team
  • Published On - 7:13 AM, 28 Feb 2021
ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿದ ದುಷ್ಕರ್ಮಿಗಳಿಂದ ಹಣಕ್ಕೆ ಡಿಮ್ಯಾಂಡ್
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿವೃತ್ತ ಡಿಜಿ & ಐಜಿಪಿ ಶಂಕರ್ ಬಿದರಿ ಇ-ಮೇಲ್ ಐಡಿಯನ್ನು ಹ್ಯಾಕ್ ಮಾಡಲಾಗಿದೆ. ದುಷ್ಕರ್ಮಿಗಳು ಇ-ಮೇಲ್ ಐಡಿ ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಕಳಿಸಿದ್ದಾರೆ. ಖಾಸಗಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಕಳಿಸಿ ಹಣ ಕಳಿಸಲು ಇ-ಮೇಲ್ ಐಡಿ ಶೇರ್ ಮಾಡಿದ್ದಾರೆ. ಶಂಕರ್ ಬಿದರಿಯೇ ಕೇಳಿದ್ದಾರೆಂದು ತಿಳಿದು ಸ್ನೇಹಿತರೊಬ್ಬರಿಂದ ₹25 ಸಾವಿರ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆ ಮಾಡಿದ ಬಳಿಕ ಶಂಕರ್ ಬಿದರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಇ-ಮೇಲ್ ಐಡಿ ಹ್ಯಾಕ್ ಆಗಿರುವುದು ಶಂಕರ್ ಬಿದರಿ ಅವರ ಗಮನಕ್ಕೆ ಬಂದಿದೆ. ನಂತರ ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇ-ಮೇಲ್ ಐಡಿ ಹ್ಯಾಕ್ ಮಾಡಿದವರನ್ನ ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ಹಿಂದೆ ಗದಗ ಶಹರ ಠಾಣೆ ಸಿಪಿಐ ಪಿ.ವಿ. ಸಾಲಿಮಠ ಹೆಸರಲ್ಲಿ ನಕಲಿ ಫೆಸ್ಬುಕ್ ಖಾತೆಯನ್ನು ಸೃಷ್ಟಿ ಮಾಡಿದ ಠಕ್ಕರು ಅವರ ಗೆಳೆಯರಿಂದ ಹಣ ವಸೂಲಿ ಮಾಡಿರುವ ವಿಚಿತ್ರವಾದರೂ ಸತ್ಯವಾದ ಘಟನೆ ಗದಗದಲ್ಲಿ ನಡೆದಿತ್ತು.

ಪಂಚಾಕ್ಷರಿ ಸಾಲಿಮಠ ಹೆಸರಿನಲ್ಲಿ ನಕಲಿ ಪೇಸ್ಬುಕ್ ಅಕೌಂಡ್​ ಕ್ರಿಯೇಟ್ ಮಾಡಿದ ನಂತರ ಕಳ್ಳರು ಅರ್ಜೆಂಟಾಗಿ ಹಣದ ಅವಶ್ಯಕತೆ ಇದೆ ಎಂದು ಸಾಲಿಮಠ ಅವರ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ವಸೂಲಿ ಮಾಡಿದ್ದರು. ವಿಷಯ ಗೊತ್ತಾದ ಕೂಡಲೇ ಖುದ್ದು ಸಿಪಿಐ ಸಾಲಿಮಠ, ತ‌ಮ್ಮ ಸ್ಟೇಟಸ್ ಮೂಲಕ ಸ್ನೇಹಿತರಿಗೆ ಸಂದೇಶ ನೀಡಿ, ’ನನ್ನ ಫೇಸ್ಬುಕ್ ಹ್ಯಾಕ್ ಆಗಿದೆ ಯಾರೂ ಹಣ ಹಾಕಬೇಡಿ’ ಅಂತ ಸಂದೇಶ ಪೋಸ್ಟ್ ಮಾಡಿದ್ದರು. ಆಮೇಲೆ ಅವರು ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಸೈಬರ್ ಕ್ರೈಂ ಗೆ ದೂರು ನೀಡಿದ್ದರು. ಜನ ಸಾಮಾನ್ಯರಿಗೆ ಆಗುತ್ತಿದ್ದ ಹ್ಯಾಕಿಂಗ್ ಸಮಸ್ಯೆಯನ್ನು ಈಗ ಪೊಲೀಸ್ ಅಧಿಕಾರಿಗಳಿಗೂ ಆಗುತ್ತಿದೆ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: Food Department website: ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ