ಚೆನ್ನೈನಲ್ಲಿ ಚಂಡಮಾರುತ​: ಇವತ್ತು ಸಂಜೆ ಬೇಗ ಮನೆ ಸೇರಿಕೊಳ್ಳೋದು ಒಳ್ಳೇದು.. ‌

  • TV9 Web Team
  • Published On - 14:57 PM, 29 Oct 2020
ಚೆನ್ನೈನಲ್ಲಿ ಚಂಡಮಾರುತ​: ಇವತ್ತು ಸಂಜೆ ಬೇಗ ಮನೆ ಸೇರಿಕೊಳ್ಳೋದು ಒಳ್ಳೇದು.. ‌

ಬೆಂಗಳೂರು: ಸಿಲಿಕಾನ್ ‌ಸಿಟಿಗೆ ಸೈಕ್ಲೋನ್ ತಣ್ಣಗೆ ಕಾಡಲಿದೆ. ಸಂಜೆ ಬೇಗ ಮನೆ ಸೇರಿಳ್ಳೋದು ಒಳ್ಳೇದು.. ಎಂದು ಟಿವಿ9 ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚೆನ್ನೈನಲ್ಲಿ ಚಂಡಮಾರುತ ಬೀಸುತ್ತಿದ್ದು, ಭಾರಿ‌ ಮಳೆಯಾಗುತ್ತಿದೆ. ಅದರ ಎಫೆಕ್ಟ್ ಸಿಲಿಕಾನ್ ಸಿಟಿಗೂ ತಟ್ಟಲಿದೆ. ಬಂಗಾಳ ಕೊಲ್ಲಿಯಲ್ಲಿ ‌ಉಂಟಾಗಿರುವ ಚಂಡಮಾರುತದಿಂದ ‌ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗಾಗಿ, ಆ ಚಂಡಮಾರುತದ ಎಫೆಕ್ಟ್ ಬೆಂಗಳೂರಿನತ್ತಲೂ ಬೀಸಲಿದೆ. ಇನ್ನೆರಡು ದಿನಗಳ ‌ಕಾಲ‌ ಸಿಟಿಯಲ್ಲಿ ಮಳೆ ಮುನ್ಸೂಚನೆಯಿದೆ. ಚಂಡಮಾರುತದ ಸಮ್ಮುಖದಲ್ಲಿ ಹವಾಮಾನ ಇಲಾಖೆಯು ಹಗುರ ಮತ್ತು ಸಾಧಾರಣ ‌ಮಳೆ ಮುನ್ಸೂಚನೆ ನೀಡಿದೆ.