ಮಾನಸಿಕ‌ ಖಿನ್ನತೆ: ಜೀವನದಲ್ಲಿ ಗೆಲ್ಲಲು ಆಗಲಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಏಕಲವ್ಯ ಪ್ರಶಸ್ತಿ ವಿಜೇತೆ

ಮಾನಸಿಕವಾಗಿ ನೊಂದು ಹೋಗಿದ್ದ ಶಿಲ್ಪಾ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಜೀವನದಲ್ಲಿ ಗೆಲ್ಲಲು ಆಗಲಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

  • TV9 Web Team
  • Published On - 12:35 PM, 11 Apr 2021
ಮಾನಸಿಕ‌ ಖಿನ್ನತೆ: ಜೀವನದಲ್ಲಿ ಗೆಲ್ಲಲು ಆಗಲಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಏಕಲವ್ಯ ಪ್ರಶಸ್ತಿ ವಿಜೇತೆ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಾನಸಿಕ‌ ಖಿನ್ನತೆಗೆ ಒಳಗಾಗಿ ಏಕಲವ್ಯ ಪ್ರಶಸ್ತಿ ವಿಜೇತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಕಲವ್ಯ ಪ್ರಶಸ್ತಿ ವಿಜೇತೆ ಶಿಲ್ಪಾ(41) ಡೆತ್​​ನೋಟ್ ಬರೆದಿಟ್ಟು ಮನೆಯ‌ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಶಿಲ್ಪಾ ಹಾಗೂ ಬಾಲರಾಜ್ ದಂಪತಿಗೆ ಮದುವೆಯಾಗಿ ವರ್ಷಗಳೇ ಕಳೆದರೂ ಮಕ್ಕಳಾಗಿರಲಿಲ್ಲ. ಈ ಸಮಸ್ಯೆ ಶಿಲ್ಪಾರನ್ನು ಕುಗ್ಗಿಸಿತ್ತು. ಇದರ ಜೊತೆಗೆ 4 ತಿಂಗಳ ಹಿಂದೆ ತಾಯಿ‌ಯ ಸಾವು ಮತ್ತಷ್ಟು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ಹಾಗೂ ಶಾಲೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾ ಕೊರೊನಾ ಲಾಕ್​ಡೌನ್​ನಿಂದಾಗಿ ಕೆಲಸವನ್ನೂ ಕಳೆದುಕೊಂಡಿದ್ದರು. ಇದೆಲ್ಲಾ ಕಾರಣದಿಂದ ಮಾನಸಿಕವಾಗಿ ನೊಂದು ಹೋಗಿದ್ದ ಶಿಲ್ಪಾ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಜೀವನದಲ್ಲಿ ಗೆಲ್ಲಲು ಆಗಲಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ: ಲಾಡ್ಜ್​ನಲ್ಲಿ ವಿಷಸೇವಿಸಿ ತಾಯಿ ಆತ್ಮಹತ್ಯೆ, ಮಗನ ಸ್ಥಿತಿ ಗಂಭೀರ

(Ekalavya Award Winner Woman Commits To Suicide in Bengaluru)