ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಕಣ್ಣಿನ ಸಮಸ್ಯೆ; ಪರೀಕ್ಷೆ ಒತ್ತಡ, ನಿರಂತರ ಓದು ಕಾರಣ ಎಂದು ತಜ್ಞರು
ನಾರಾಯಣ ನೇತ್ರಾಲಯದವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿದ್ದು ಕಣ್ಣಿನ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ SSLC & PUC ಮಕ್ಕಳೇ ಹೆಚ್ಚು. ದಿನಕ್ಕೆ 8 ರಿಂದ 10 SSLC ಮತ್ತು PUC ಮಕ್ಕಳು ಕಣ್ಣಿನ ವಿವಿಧ ಚಿಕಿತ್ಸೆಗೆ ಬರ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು. ಪರೀಕ್ಷಾ ಸಮಯದಲ್ಲಿ ಮಕ್ಕಳು ಒತ್ತಡದಲ್ಲಿ ಇರುತ್ತಾರೆ. ಮಕ್ಕಳ ಕಲಿಕಾ ಒತ್ತಡದಿಂದ ಕಣ್ಣಿಗೆ ಒತ್ತಡ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು, ಫೆ.09: ಸಾಲು ಸಾಲು ಪರೀಕ್ಷೆಗಳು (Exams) ಬರುವ ಹೊತ್ತಲ್ಲೇ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ (Eye Issue) ಕಾಣಿಸಿಕೊಂಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿವೆ. ಇದರಿಂದ ಪೋಷಕರಲ್ಲಿ ಆತಂಕ ಉಂಟಾಗಿದೆ. ಪರೀಕ್ಷೆ ಸಮಯದಲ್ಲಿ ಮಕ್ಕಳು ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಲಿಕೆ ಮೇಲೆ ಪ್ರಭಾವ ಬೀಳುತ್ತಿದೆ. ಈ ಹಿನ್ನಲೆ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಎದುರಿಸುವ, ದೃಷ್ಟಿಗೆ ಸಂಬಂಧಿಸಿದ ಸವಾಲುಗಳ ಕುರಿತು ನಾರಾಯಣ ನೇತ್ರಾಲಯದವತಿಯಿಂದ (Narayana Nethralaya Eye Hospital) ಪತ್ರಿಕಾಗೋಷ್ಠಿ ನಡೆಸಲಾಯಿತು. ಪೋಷಕರಿಗೆ ಕೆಲವು ಮಾಹಿತಿಯನ್ನು ನೀಡಲಾಯಿತು.
ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ಡಾ. ನರೇನ್ ಶೆಟ್ಟಿ, ನೇತ್ರ ತಜ್ಞೆ ಮತ್ತು ಮೆಳ್ಳಗಣ್ಣಿನ ವಿಶೇಷ ತಜ್ಞೆ ಡಾ. ಜ್ಯೋತಿ, ಡಾ. ಸುಮಿತಾ ಮುತ್ತುರವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ, ಕಣ್ಣಿನ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ SSLC & PUC ಮಕ್ಕಳೇ ಹೆಚ್ಚು. ದಿನಕ್ಕೆ 8 ರಿಂದ 10 SSLC ಮತ್ತು PUC ಮಕ್ಕಳು ಕಣ್ಣಿನ ವಿವಿಧ ಚಿಕಿತ್ಸೆಗೆ ಬರ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.
ಇದನ್ನೂ ಓದಿ: ಗದಗ ಜೀಮ್ಸ್ ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು, ಪೇಶೆಂಟ್ ಜಸ್ಟ್ ಮೋಯಾ.. ಮೋಯಾ: ವಿದ್ಯಾರ್ಥಿಗಳ ರೀಲ್ಸ್ ವೈರಲ್
ಮಹಾಮಾರಿ ಕೊರೊನಾ ಬಳಿಕ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿವೆ. ಪರೀಕ್ಷಾ ಸಮಯದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ವರ್ಷದ ಇತರೆ ಸಮಯದಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ಸಮಸ್ಯೆಗಳಿಗೂ ಪರೀಕ್ಷಾ ಸಮಯದಲ್ಲಿ ಕಂಡು ಬರುತ್ತಿರುವ ಸಮಸ್ಯೆಗೂ ವ್ಯತ್ಯಾಸ ಇದೆ. ಪರೀಕ್ಷಾ ಸಮಯದಲ್ಲಿ ಮಕ್ಕಳು ಒತ್ತಡದಲ್ಲಿ ಇರುತ್ತಾರೆ. ಮಕ್ಕಳ ಕಲಿಕಾ ಒತ್ತಡದಿಂದ ಕಣ್ಣಿಗೆ ಒತ್ತಡ ಹೆಚ್ಚಾಗುತ್ತಿದೆ. ಪರೀಕ್ಷಾ ಸಮಯದಲ್ಲಿನ ನಿರಂತರ ಓದು, ಕಲಿಕೆ ಕಣ್ಣಿಗೆ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ. ಪರೀಕ್ಷೆ ಒತ್ತಡ ಹಾಗೂ ಮಕ್ಕಳಿಗೆ ಪರೀಕ್ಷಾ ಡೆಡ್ ಲೈನ್ ಕಣ್ಣಿನ ಸಮಸ್ಯೆಗೆ ಕಾರಣವಾಗಿದೆ.
ಮಕ್ಕಳು ಬೌಧಿಕವಾಗಿ ಜಾಣರಾಗಿದ್ದರೂ ಕಣ್ಣಿನ ಸಮಸ್ಯೆಗಳು, ತೊಂದರೆಗಳು ಮಕ್ಕಳ ಕಲಿಕೆಯಲ್ಲಿ ಹಿಂದೆ ಬೀಳಲು ಕಾರಣವಾಗುತ್ತಿವೆ. ಕಣ್ಣಿನ ಸಮಸ್ಯೆಯಿಂದ ಮಕ್ಕಳು ಪರೀಕ್ಷೆ ಇದ್ದಾಗ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಪರೀಕ್ಷಾ ಸಮಯದಲ್ಲಿ ಕಣ್ಣಿನ ಮೇಲಿನ ಒತ್ತಡ ನಿಯಂತ್ರಿಸದೇ ಇದ್ದರೆ, ಲೈಫ್ ನಲ್ಲಿ ಮಕ್ಕಳಿಗೆ ಇದೇ ಮುಂದುವರೆಯಬಹುದಾಗಿದೆ. ಮಕ್ಕಳ ಭವಿಷ್ಯ ಕಲಿಕೆ ದೃಷ್ಠಿಯಿಂದ ಈ ಒತ್ತಡ ಕಂಡು ಬಂದಾಗ ಸಲಹೆ ಪಡೆಯಬೇಕಿದೆ ಎಂದು ನೇತ್ರ ತಜ್ಞ ರೋಹಿತ್ ಮಾಹಿತಿ ನೀಡಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ