ಹಾಲಿನ ಬೆಲೆ ಏರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ರೈತರ ಪ್ರತಿಭಟನೆ

ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಹೈನುಗಾರಿಕೆ ನಂಬಿಕೊಂಡ ರೈತರಿಗೆ ಕೂಡಲೇ ಸ್ಪಂದಿಸಬೇಕು. ಹಾಲು ಉತ್ಪಾದನೆಗೆ ಈಗಿರುವ ಬೆಲೆ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಫ್ರೀಡಂ ಪಾರ್ಕ್​ನಲ್ಲಿ 11 ಗಂಟೆಗೆ ಹಸುಗಳನ್ನು ತಂದು ಸ್ಥಳದಲ್ಲೇ ಹಾಲು ಕರೆದು ರೈತರು ಪ್ರತಿಭಟನೆ ನಡೆಸಿದ್ದಾರೆ.

  • TV9 Web Team
  • Published On - 12:46 PM, 1 Mar 2021
ಹಾಲಿನ ಬೆಲೆ ಏರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ರೈತರ ಪ್ರತಿಭಟನೆ
ಹಾಲಿನ ದರ ಏರಿಸುವಂತೆ ರೈತರ ಒತ್ತಾಯ

ಬೆಂಗಳೂರು: ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ನಿಗದಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಇಂದು ರೈತರು ಧರಣಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಶೇಕಡಾ 50ರಷ್ಟು ಜನರು ಹೈನೋದ್ಯಮ ನಂಬಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಫೀಡ್, ಬೂಸಾ, ಹಿಂಡಿ, ಚೆಕ್ಕೆ ಬೆಲೆಯೂ ಏರಿಕೆಯಾಗಿದೆ. ಆದರೆ ಕೆಎಂಎಫ್(ಹಾಲು ಉತ್ಪಾದಕರ ಸಂಘ) ಮಾತ್ರ ಒಂದು ಲೀಟರ್ ಹಾಲಿಗೆ 26 ರೂಪಾಯಿ ನೀಡುತ್ತಿದೆ. ಹೀಗಾಗಿ ಹಾಲಿನ ಬೆಲೆ ಹೆಚ್ಚು ಮಾಡಬೇಕು ಎಂದು ರೈತರಿಂದ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಬೇಸಿಗೆ ಆರಂಭ ಹಿನ್ನೆಲೆ ಹಸುಗಳಿಗೆ ಮೇವು ಸಿಗುವುದೂ ಕಷ್ಟವಾಗುತ್ತದೆ. ಹೀಗಾಗಿ ಹಸುಗಳಿಗೆ ಮೇವು ಖರೀದಿ ಮಾಡಬೇಕಾಗುತ್ತದೆ. ಕಡಿಮೆ ಹಾಲಿನ ಬೆಲೆಗೆ ಹೇಗೆ ಇವುಗಳನ್ನು ಸಂಭಾಳಿಸುವುದು ಎನ್ನುವುದು ಸದ್ಯ ರೈತರಲ್ಲಿ ಇರುವ ಗೊಂದಲವಾಗಿದೆ. ಇನ್ನೂ ಕೆಲವರಿಗೆ ಮಾತ್ರ 5 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ.ಇದರಿಂದ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಶೀಘ್ರವೇ ಹಾಲಿನ ಬೆಲೆಯನ್ನು 40 ರೂಪಾಯಿಗೆ ನಿಗದಿ ಮಾಡಿ ಎಂದು ರೈತರು ಒತ್ತಾಯಿಸಿದ್ದಾರೆ.

ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಹೈನುಗಾರಿಕೆ ನಂಬಿಕೊಂಡ ರೈತರಿಗೆ ಕೂಡಲೇ ಸ್ಪಂದಿಸಬೇಕು. ಹಾಲು ಉತ್ಪಾದನೆಗೆ ಈಗಿರುವ ಬೆಲೆ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಫ್ರೀಡಂ ಪಾರ್ಕ್​ನಲ್ಲಿ 11 ಗಂಟೆಗೆ ಹಸುಗಳನ್ನು ತಂದು ಸ್ಥಳದಲ್ಲೇ ಹಾಲು ಕರೆದು ರೈತರು ಪ್ರತಿಭಟನೆ ನಡೆಸಿದ್ದಾರೆ.

ಒಟ್ಟಾರೆಯಾಗಿ ದಿನ ಬಳಕೆ ವಸ್ತುಗಳ ಮೇಲೆ ಮತ್ತು ಪೆಟ್ರೋಲ್ ಹಾಗೂ ಡಿಸೇಲ್​ಗಳ ಮೇಲಿನ ಬೆಲೆ ಏರಿಕೆಯ ಬೆನ್ನಲೆ ರೈತರು ಹಾಲಿನ ಬೆಲೆಯನ್ನೂ ಏರಿಕೆ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಈ ಪ್ರತಿಭಟನೆಗೆ ಯಾವ ರೀತಿ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಚಾಮರಾಜನಗರ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ ಆರೋಪ: ಎಚ್ಚೆತ್ತುಕೊಂಡ ಸರ್ಕಾರ