Happy Birthday HD Deve Gowda: ಮೈಸೂರು ರಾಜರ ಪ್ರಭಾವವಿದ್ದ ದೇಶ-ಕಾಲದಲ್ಲಿ ಜನಿಸಿದ ಹೆಚ್​ ಡಿ ದೇವೇಗೌಡರು ಮುಂದೆ ದೇಶವನ್ನೇ ಆಳಿದರು!

Former PM HD Deve Gowda Birthday: ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ರೈತಾಪಿ ಬಡ ಕುಟುಂಬದಲ್ಲಿ ಜನಿಸಿದವರು ಹೆಚ್​ ಡಿ ದೇವೇ ಗೌಡ. ಇಲ್ಲಿ ಮೈಸೂರು ರಾಜರ ಆಳ್ವಿಕೆಯನ್ನು ಯಾಕೆ ಪ್ರಸ್ತಾಪ ಮಾಡಲಾಗಿದೆಯೆಂದರೆ ಹೆಚ್​ ಡಿ ದೇವೇ ಗೌಡರು ಜನಿಸಿದ್ದು ಮೈಸೂರಿನ (ಹಾಸನವೂ ಅಲ್ಲ) ಹರದನಹಳ್ಳಿಯಲ್ಲಿ. ಅದಿನ್ನೂ ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಮೈಸೂರು ಸಂಸ್ಥಾನದ ಸಾಮ್ರಾಜ್ಯದಲ್ಲಿತ್ತು.

Happy Birthday HD Deve Gowda:  ಮೈಸೂರು ರಾಜರ ಪ್ರಭಾವವಿದ್ದ ದೇಶ-ಕಾಲದಲ್ಲಿ ಜನಿಸಿದ ಹೆಚ್​ ಡಿ ದೇವೇಗೌಡರು ಮುಂದೆ ದೇಶವನ್ನೇ ಆಳಿದರು!
ಮೈಸೂರು ಸಂಸ್ಥಾನದ ರಾಜರ ಕಾಲದಲ್ಲಿ ಜನಿಸಿದ ದೇವೇಗೌಡರು ಮುಂದೆ ದೇಶವನ್ನೇ ಆಳಿದರು!
Follow us
| Edited By: ಸಾಧು ಶ್ರೀನಾಥ್​

Updated on:May 18, 2022 | 1:39 PM

ಅದು ದಕ್ಷಿಣ ಭಾರತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ (1902-1940) ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನ (1399 – 1947) ಸುಭಿಕ್ಷವಾಗಿದ್ದ ಕಾಲವದು. (ಮುಂದೆ.. ಅವರಾದ ಮೇಲೆ ಜಯಚಾಮರಾಜ ಒಡೆಯರು ರಾಜ್ಯಭಾರ ಮಾಡಿದರು. ಅದು ಮುಗಿಯುತ್ತಿದ್ದಂತೆ ದೇಶ ಸ್ವಾತಂತ್ರ್ಯ ಗಳಿಸಿತು) ಈ ಮಧ್ಯೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ರೈತಾಪಿ ಬಡ ಕುಟುಂಬದಲ್ಲಿ ಜನಿಸಿದವರು ಹರದನಹಳ್ಳಿ ದೊಡ್ಡೇಗೌಡ ದೇವೇ ಗೌಡ (Haradanahalli Doddegowda Deve Gowda). ಇಲ್ಲಿ ಮೈಸೂರು ರಾಜರ ಆಳ್ವಿಕೆಯನ್ನು ಯಾಕೆ ಪ್ರಸ್ತಾಪ ಮಾಡಲಾಗಿದೆಯೆಂದರೆ ಹೆಚ್​ ಡಿ ದೇವೇ ಗೌಡರು (HD Deve Gowda Birthday) ಜನಿಸಿದ್ದು ಮೈಸೂರಿನ (ಹಾಸನವೂ ಅಲ್ಲ) ಹರದನಹಳ್ಳಿಯಲ್ಲಿ. ಅದಿನ್ನೂ ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಮೈಸೂರು ಸಂಸ್ಥಾನದ ಸಾಮ್ರಾಜ್ಯದಲ್ಲಿತ್ತು. ಆಗಿನ್ನೂ ಅದು ವಿಶಾಲ ಕರ್ನಾಟಕವೂ ಆಗಿರಲಿಲ್ಲ. ಮೈಸೂರು ರಾಜರ ಪ್ರಭಾವವಿದ್ದ ದೇಶ-ಕಾಲವದು. ಆ ಕಾಲಘಟ್ಟದಲ್ಲಿ ಹೆಚ್​ ಡಿ ದೇವೇ ಗೌಡರು ಜನಿಸಿದರು. ಹಾಗಾದರೆ ದೇವೇ ಗೌಡರ ಆ ದಿನಗಳು ಅಂದರೆ, ಮೈಸೂರು ರಾಜರ ಆಳ್ವಿಕೆಯನ್ನು ಹತ್ತಿರದಿಂದ ನೋಡಿದ್ದು, ಅವರ ಮೇಲೆ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ಪ್ರಭಾವ ಬೀರಿ ಅವರನ್ನು ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನಕ್ಕೆ ಕರೆದೊಯ್ದಿತಾ!? 1933ರ ಮೇ 18 ರಂದು ಅಂದರೆ ಇಂದಿಗೆ ಸರಿಯಾಗಿ 90 ವರ್ಷದ ಹಿಂದೆ ಹರದನಹಳ್ಳಿಯಲ್ಲಿ ಜನಿಸಿದ ದೇವೇ ಗೌಡರು ದೇಶದ ರಾಜಕಾಣದಲ್ಲಿ (HD Deve Gowda Political career) ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ಹೊಳೆನರಸೀಪುರ ತಾಲೂಕು ಪಂಚಾಯತ್​​ ನಿಂದ ​​ಆರಂಭವಾಗಿ ಪ್ರಧಾನ ಮಂತ್ರಿಯಾಗಿ (1996ರ ಜೂನ್ ನಿಂದ 1997ರ ಏಪ್ರಿಲ್​ವರೆಗೂ) ದೇಶದ ಚುಕ್ಕಾಣಿ ಹಿಡಿದರು. ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿಯಾಗಿ (1994 ರಿಂದ 1996) ವಿಶಿಷ್ಟವಾಗಿ ರಾಜ್ಯಭಾರ ಮಾಡಿದವರು (Haradanahalli Deve Gowda).

ಒಕ್ಕಲಿಗರ ಕುಟುಂಬದಲ್ಲಿ ಜನಿಸಿದ ದೇವೇ ಗೌಡರು ಸಹಜವಾಗಿಯೇ ಮನೆತನಕ್ಕೆ ಒಲಿದುಬಂದಿದ್ದ ಒಕ್ಕಲುತನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದು ಮುಂದೆ ಅವರಿಗೆ ಮಣ್ಣಿನ ಮಗ ಎಂಬ ಬಿರುದನ್ನೂ ತಂದುಕೊಟ್ಟಿತು. ಅಷ್ಟರಮಟ್ಟಿಗೆ ಅವರು ಸ್ವತಃ ಕೃಷಿಯಲ್ಲಿ ತೊಡಗಿದರು. ಸ್ವತಃ ಅವರು ಕೃಷಿ ಮಾಡುವುದರ ಜೊತೆಗೆ, ರಾಜ್ಯದ ರೈತಾಪಿ ವರ್ಗದ ಜೊತೆ ಗುರುತಿಸಿಕೊಳ್ಳುತ್ತಾ, ಕನ್ನಂಬಾಡಿ ಕಟ್ಟೆಯಿಂದ ಪ್ರೇರೇಪಣೆ ಪಡೆದು, ಕೃಷಿ ನೀರಾವರಿಗೆ ಒತ್ತು ಕೊಟ್ಟರು. ಈ ಮಧ್ಯೆ ಮೈಸೂರು ರಾಜ್ಯದ ಹಾಸನದಲ್ಲಿದ್ದ ಎಲ್​ ವಿ ಪಾಲಿಟೆಕ್ನಿಕ್​ ನಲ್ಲಿ 1955ರಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು. ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಂತೆ ಗುತ್ತಿಗೆದಾರರಾಗಿ ಜೀವನ ರೂಪಿಸಿಕೊಳ್ಳತೊಡಗಿದರು.

ದೇವೇ ಗೌಡರು ರಾಜಕೀಯ ಆರಂಗೇಟ್ರಂ ಕೊಟ್ಟಿದ್ದು ಕಾಂಗ್ರೆಸ್​ ಮೂಲಕ! 1953 ರಿಂದ 1962 ವರೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು. ಕೊನೆಗೆ 1962ರಲ್ಲಿಯೇ ಕಾಂಗ್ರೆಸ್ ಪಕ್ಷದಿಂದ ವಿಮುಖರಾದ ದೇವೇ ಗೌಡರು ಸ್ವತಂತ್ರ ಅಭ್ಯರ್ಥಿಯಾಗಿ, ಮೈಸೂರು ರಾಜ್ಯ ಶಾಸಕಾಂಗ ಸಭೆಗೆ ಆಯ್ಕೆಯಾದರು. ಅಲ್ಲಿಂದ ಎಂದಿಗೂ ಹಿಂದಿರುಗಿ ನೋಡದ ದೇವೇ ಗೌಡರು ನಿರಂತರವಾಗಿ ನಾಲ್ಕು ಬಾರಿ ರಾಜ್ಯ ಅಸೆಂಬ್ಲಿಗೆ ಚುನಾಯಿತರಾದರು. ಆ ಸಂದರ್ಭದಲ್ಲಿ ಅವರು ಶೋಷಿತರ ಮತ್ತು ರೈತಾಪಿ ಜನರ ಏಳಿಗೆಗಾಗಿ ದುಡಿಯುತ್ತಾ ಬಂದರು.

ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ (1975–77) ದೇವೇ ಗೌಡರು ಜೈಲುವಾಸ ಅನುಭವಿಸಿದರು. ಆ ಕಹಿ ಕಾಲಘಟ್ಟದ ಬಳಿಕ 1980ರಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ನೂತನ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸಿದರು. 1991ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ, ಮೊದಲ ಬಾರಿಗೆ ಸಂಸದರಾದರು. ಸಂಸತ್ತಿಗೆ ಆಯ್ಕೆಯಾದ ಬಳಿಕ ರೈತರಿಗೆ ಮತ್ತಷ್ಟು ಹತ್ತಿರವಾದರು ದೇವೇಗೌಡರು. 1994ರಲ್ಲಿ ಜನತಾ ದಳ ಪಕ್ಷದ ಚುಕ್ಕಾಣಿ ಹಿಡಿದ ದೇವೇಗೌಡರು ರಾಮನಗರ ಅಸೆಂಬ್ಲಿ ಕ್ಷೇತ್ರದಿಂದ ಗೆದ್ದು, ರಾಜ್ಯದ 14ನೇ ಮುಖ್ಯಮಂತ್ರಿಯಾದರು.

1996ರಲ್ಲಿ ಜನತಾ ದಳದ ಸಾರಥ್ಯದಲ್ಲಿ 13 ಪಕ್ಷಗಳ ಮಹಾ ಸಂಗಮದೊಂದಿಗೆ ಭಾರತದ ಪ್ರಧಾನ ಮಂತ್ರಿಯಾದರು. ಜಾತ್ಯಾತೀತ ಮನೋಭಾವದ ದೇವೇಗೌಡರು ಹೆಚ್ಚು ಸ್ಥಾನ ಗಳಿಸಿ, ಅಧಿಕಾರಕ್ಕೆ ಹತ್ತಿರವಾಗಿದ್ದರೂ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಅವಕಾಶ ನೀಡಬಾರದು ಎಂದು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಜಾರಿದರು. ಕಾಂಗ್ರೆಸ್​ ಬೆಂಬಲದೊಂದಿಗೆ, ಅನಿರೀಕ್ಷಿತವಾಗಿ ದೇಶದ 11ನೇ ಪ್ರಧಾನಿ ಪಟ್ಟ ಅಲಂಕರಿಸಿದರು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. 1997ರ ಏಪ್ರಿಲ್​ 11 ರಂದು ಬಹುಮತ ಕಳೆದುಕೊಂಡು, ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರು.

ಅದಾದ ಮೇಲೆ ರಾಷ್ಟ್ರಮಟ್ಟದ ರಾಜಕೀಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದರು. ಅನೇಕ ಬಾರಿ ಲೋಕಸಭೆಗೂ ಆಯ್ಕೆಯಾದರು. ಒಮ್ಮೆ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡರು. ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿದ್ದಾರೆ.

ದೇವೇಗೌಡರ ಖಾಸಗಿ ಬುದುಕು: 1954ರಲ್ಲಿ ಚೆನ್ನಮ್ಮ ಅವರನ್ನು ಮದುವೆಯಾದರು. ದಂಪತಿಗೆ ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಗ ಇದ್ದಾರೆ.

Published On - 6:06 am, Wed, 18 May 22

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ