ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ; ಬೆಂಗಳೂರಿನಲ್ಲಿ 28 ವರ್ಷದ ಯುವಕನ ಸಾವು

ಏಪ್ರಿಲ್ 12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಬಳಿಕ ಯುಗಾದಿ ಹಬ್ಬದ ನಂತರ ಚಳಿ, ಜ್ವರ ಕಾಣಿಸಿಕೊಂಡಿದ್ದು, ಮತ್ತೆ ವೈದ್ಯರರನ್ನ ಭೇಟಿ ಮಾಡಿ ತಪಾಸಣೆ ನಡೆಸಿದ ವೇಳೆ ಕೊರೊನಾ‌ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ; ಬೆಂಗಳೂರಿನಲ್ಲಿ 28 ವರ್ಷದ ಯುವಕನ ಸಾವು
ಸಾಗರ್ ಎ.ಜಿ (28)

ಬೆಂಗಳೂರು: ಮುಂದಿನ ತಿಂಗಳು ಮದುವೆ ಮಾಡಬೇಕು ಎಂಬ ಯೋಜನೆಯಲ್ಲಿದ್ದ ಕುಟುಂಬಕ್ಕೆ ಕೊರೊನಾ ಶಾಕ್ ನೀಡಿದ್ದು, ಬಾಳಿ ಬದುಕಬೇಕಾಗಿದ್ದ ಯುವಕ ಸಾವಿನ ಮನೆ ಸೇರಿದ್ದಾನೆ. ಸಾಗರ್ ಎ.ಜಿ (28) ಕೊರೊನಾಗೆ ಬಲಿಯಾದ ಯುವಕ. ಐಸಿಯು ಬೆಡ್ ಮತ್ತು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ. ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಸಾಗರ್ ಕಾರ್ಯನಿರ್ವಹಿಸುತ್ತಿದ್ದ.

ಕಳೆದ 2 ತಿಂಗಳ ಹಿಂದೆ ಸಾಗರ್ ಮದುವೆ ಬಗ್ಗೆ ಮಾತುಕತೆ ಕೂಡ ಆಗಿತ್ತು. ನಿಶ್ಚತಾರ್ಥ ಮಾಡದೆ ಕೇವಲ ಸರಳ ಮದುವೆಗೆ ಯೋಜನೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಸಾಗರ್​ಗೆ ಕೊರೊನಾಗೆ ಬಲಿಯಾಗಿದ್ದಾನೆ. ಏಪ್ರಿಲ್ 12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಬಳಿಕ ಯುಗಾದಿ ಹಬ್ಬದ ನಂತರ ಚಳಿ, ಜ್ವರ ಕಾಣಿಸಿಕೊಂಡಿದ್ದು, ಮತ್ತೆ ವೈದ್ಯರರನ್ನ ಭೇಟಿ ಮಾಡಿ ತಪಾಸಣೆ ನಡೆಸಿದ ವೇಳೆ ಕೊರೊನಾ‌ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಹಬ್ಬ ಕಳೆದ ಒಂದು ವಾರದ ಬಳಿಕ ಮಧ್ಯ ರಾತ್ರಿ ಸುಸ್ತು ಮತ್ತು ಬೇಧಿ ಪ್ರಾರಂಭವಾಯಿತು. ಗ್ಲೂಕೋಸ್ ಹಾಕಿಸಿಕೊಳ್ಳೋಕೆ ಆಸ್ಪತ್ರೆಗೆ ಹೋಗಿದ್ದೇವು. ನಂತರ ಸಿಟಿ ಸ್ಕ್ಯಾನಿಂಗ್ ಮಾಡಿಸಿದ್ವಿ, ನ್ಯುಮೋನಿಯಾ ಇದೆ ಅಂದ್ರು ತುಂಬಾ ಸೀರಿಯಸ್ ಆಗಿದೆ ಅಂದ್ರು, ಅಲ್ಲೆಲ್ಲೂ ಐಸಿಯು ಬೆಡ್ ಸಿಕ್ಕಿಲ್ಲ. ಆದರೆ ವಿಧಿಯಾಟ ಸಾಗರ್ ಕೊರೊನಾಗೆ ಬಲಿಯಾಗಿದ್ದಾನೆ. ನಮಗಾದ ರೀತಿ ಯಾರಿಗೂ ಆಗದಿರಲಿ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದ ವಿರುದ್ಧ ಮೃತನ ಕುಟುಂಬಸ್ಥರ ಆಕ್ರೋಶ
78 ವರ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾದಿಂದ‌ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. 28 ವರ್ಷದ ನಮ್ಮ ಪುತ್ರನಿಗೆ ಚಿಕಿತ್ಸೆ ಇಲ್ಲ. ಕನಿಷ್ಠ ಪಕ್ಷ ಬೆಡ್ ಕೂಡ ಸಿಗುತ್ತಿಲ್ಲ. ಬಿಬಿಎಂಪಿ ಮಾಹಿತಿ ಮೇರೆಗೆ ಹೋಂ ಐಸೋಲೇಷನ್ ಮಾಡಿದ್ದೇವು. ಆದರೂ ಸಾಗರ್​ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸಿಎಂ, ಮಿನಿಸ್ಟರ್, ಎಂಎಲ್​ಎಗಳಿಗೆ ಮಣಿಪಾಲ್ ಆಸ್ಪತ್ರೆ ನಮ್ಮಂತರವರು ಮಣ್ಣುಪಾಲು ಎಂದು ಸಾಗರ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಗರ್ಭಿಣಿ ವೈದ್ಯೆ ಕೊರೊನಾಗೆ ಬಲಿ

ಬೆಂಗಳೂರಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ, ದಿನಕ್ಕೆ 20-22 ಶವ ಬರ್ತಿದೆ ಎಂದ ಚಿತಾಗಾರ ಸಿಬ್ಬಂದಿ

(Groom aged 28 yrs died of Coronavirus infection in Bengaluru)