AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಜ್ಯೋತಿ ಗುಂಗಿನಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್ ಕಟ್ಟುವುದನ್ನೇ ಮರೆತ ಜನ, ಬೆಸ್ಕಾಂ ಬರಬೇಕಿದೆ ಕೋಟಿಗಟ್ಟಲೇ ಹಣ

ಭರವಸೆ ನೀಡಿದಂತೆ ಕಾಂಗ್ರೆಸ್ , ಕರ್ನಾಟಕದಲ್ಲಿ 200 ವರೆಗಿನ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ, ಜನರು ಗೃಹಜ್ಯೋತಿ ಗುಂಗಿನಲ್ಲಿ ಕರೆಂಟ್ ಬಿಲ್ ಕಟ್ಟುವುದನ್ನೇ ಮರೆತಿದ್ದಾರೆ. ನಿಗದಿಗಿಂತ ಹೆಚ್ಚು ವಿದ್ಯುತ್​ ಬಳಕೆ ಮಾಡಿದ ವಿದ್ಯುತ್​ ಬಿಲ್ ಪಾವತಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಬೆಸ್ಕಾಂಗೆ ಕೋಟಿಗಟ್ಟಲೇ ಬಾಕಿ ವಿದ್ಯುತ್​ ಬಿಲ್ ಹಣ ಬರಬೇಕಿದೆ. ಹಾಗಾದ್ರೆ, ಎಷ್ಟು ಜನ ವಿದ್ಯುತ್ ಬಾಕಿ ಕಟ್ಟಿಲ್ಲ| ಎಷ್ಟು ಹಣ ಬೆಸ್ಕಾಂಗೆ ಬರಬೇಕು ಎನ್ನುವ ವಿವರ ಇಲ್ಲಿದೆ.

ಗೃಹಜ್ಯೋತಿ ಗುಂಗಿನಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್ ಕಟ್ಟುವುದನ್ನೇ ಮರೆತ ಜನ, ಬೆಸ್ಕಾಂ ಬರಬೇಕಿದೆ ಕೋಟಿಗಟ್ಟಲೇ ಹಣ
Poornima Agali Nagaraj
Poornima Agali Nagaraj| Edited By: |

Updated on: Nov 05, 2023 | 11:27 AM

Share

ಬೆಂಗಳೂರು, (ನವೆಂಬರ್ 05): ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ 200 ಯುನಿಟ್​ ಉಚಿತ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ‌ ಜಾರಿಯಾಗಿದೆ. ಹಲವರು ಉಚಿತವಾಗಿ ವಿದ್ಯುತ್ ಉಪಯೋಗಿಸುತ್ತಿದ್ದಾರೆ. ಆದ್ರೆ, ಇನ್ನೂ ಕೆಲವರು ಕೆಲ ಕಾರಣಾಂತರಗಳಿಂದ ಉಚಿತ ವಿದ್ಯುತ್ ಅನ್ವಯಿಸಿಲ್ಲ. ಇನ್ನು ಈ ಫ್ರೀ ವಿದ್ಯುತ್ ಖುಷಿಯಲ್ಲಿ ಜನರು ಬಿಲ್ (electricity bill )ಕಟ್ಟುವುದನ್ನೇ ಮರೆತುಬಿಟ್ಟಿದ್ದಾರೆ. ಹೌದು..​..ಬೆಸ್ಕಾಂ(bescom) ವ್ಯಾಪ್ತಿಯಲ್ಲಿ ಇನ್ನೂ 10 ಲಕ್ಷ ಜನರು ಕರೆಂಟ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಗೃಹ ಜ್ಯೋತಿಯ ನಿಗದಿತ ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್​ ಬಳಸಿದ್ದಾರೆ. ಆದ್ರೆ  ಹೆಚ್ಚುವರಿಯಾಗಿ ಬಳಸಿದ್ದ ವಿದ್ಯುತ್​ ಬಿಲ್​ ಕಟ್ಟಿಲ್ಲ.

10 ಲಕ್ಷ ಜನರಿಂದ ಬೆಸ್ಕಾಂಗೆ ಬರೋಬ್ಬರಿ 147 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ಬಾಕಿ ಇದೆ. ಬೆಂಗಳೂರು ನಗರದಲ್ಲೇ 7.6 ಲಕ್ಷ ಜನರು ಬಿಲ್​ ಕಟ್ಟದಿರುವುದರಿಂದ ಬರೋಬ್ಬರಿ 113 ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಹೀಗಾಗಿ ಬೆಸ್ಕಾಂ, ಬಾಕಿ ಬಿಲ್ ಕಟ್ಟದಿದ್ದರೆ ವಿದ್ಯುತ್ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ವರ್ಷದ ವಿದ್ಯುತ್ ಬಳಕೆಯನ್ನ ಸರಾಸರಿಗೆ ಹೆಚ್ಚುವರಿ 10 ಯೂನಿಟ್ ವರೆಗೂ ಉಚಿತ ನೀಡಲಾಗುತ್ತ. ಅಂದರೆ ವರ್ಷದ ಸರಾಸರಿ ಬಳಕೆ 85 ಯೂನಿಟ್ ಇದ್ದಾರೆ 95 ಯೂನಿಟ್ ವರೆಗೂ ಬಿಲ್ ಕಟ್ಟುವುದು ಬೇಡ. ನಿಗದಿತ ಯೂನಿಟ್ ಗಿಂದ ಹೆಚ್ಚು ಬಳಸಿದರೆ ಮಾತ್ರ ಬಿಲ್ ಪಾವತಿಸಬೇಕು. ಉದಾಹರಣಗೆ ಒಂದು ಮನೆಯ ವಿದ್ಯುತ್​ 95 ಯೂನಿಟ್ ಸರಾಸರಿಯಿ ಇದೆ ಎಂದು ಇಟ್ಟುಕೊಳ್ಳಿ. ಆದ್ರೆ, 110 ಯೂನಿಟ್ ಬಳಸಿದ್ರೆ 10 ಯೂನಿಟ್ ಬಿಲ್ ಕಟ್ಟಬೇಕು. ಹೀಗಾಗಿ ಬೆಸ್ಕಾಂ ನಿಗದಿತ ಯೂನಿಟ್ ಗಿಂತ ಹೆಚ್ಚು ಬಳಸಿದವರಿಗೆ ಬಿಲ್ ನೀಡಿದೆ. ಹೆಚ್ಚುವರಿ ಬಳಕೆಗೆ 100 ರಿಂದ 200 ರೂಪಾಯಿ ಮಾತ್ರ ಬಿಲ್ ಬರುತ್ತಿದೆ. ಆದರೂ ಜನ ಹೆಚ್ಚುವರಿ ಯೂನಿಟ್ ಬಳಕೆಯ ಬಿಲ್ ಕಟ್ಟದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾದ್ರೆ, ಎಲ್ಲೆಲ್ಲಿ ಎಷ್ಟು ವಿದ್ಯುತ್ ಬಿಲ್ ಬಾಕಿ ಇದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಎಲ್ಲಿ ಎಷ್ಟು ವಿದ್ಯುತ್ ಬಿಲ್ ಬಾಕಿ?

  1.  ಬೆಂಗಳೂರು ನಗರ ಜನ: 7 ಲಕ್ಷದ 61 ಸಾವಿರದ 464 ಬಾಕಿ: 113 ಕೋಟಿ 67 ಲಕ್ಷದ 3 ಸಾವಿರದ 6 ರೂಪಾಯಿ
  2. 2. ಬೆಂಗಳೂರು ಗ್ರಾಮೀಣ ಜನ: 29 ಸಾವಿರದ 695 ಬಾಕಿ: 4ಕೋಟಿ 14 ಲಕ್ಷದ 86 ಸಾವಿರದ 753 ರೂ
  3. 3. ಚಿಕ್ಕಬಳ್ಳಾಪುರ ಜನ: 30 ಸಾವಿರದ 984 ಬಾಕಿ: 4 ಕೋಟಿ 52 ಲಕ್ಷದ 2 ಸಾವಿರದ 950 ರೂ
  4. 4. ಚಿತ್ರದುರ್ಗ ಜನ: 27 ಸಾವಿರದ 287 ಬಾಕಿ: 2 ಕೋಟಿ 9 ಲಕ್ಷದ 15 ಸಾವಿರದ 463 ರೂ
  5. 5. ದಾವಣಗೆರೆ ಜನ: 65 ಸಾವಿರದ 35 ಬಾಕಿ: 5 ಕೋಟಿ 59 ಲಕ್ಷದ 14 ಸಾವಿರದ 420 ರೂ
  6. 6. ರಾಮನಗರ ಜನ: 31 ಸಾವಿರದ 250 ಬಾಕಿ: 2 ಕೋಟಿ 67 ಲಕ್ಷದ 40 ಸಾವಿರದ 597 ರೂ
  7. 7. ತುಮಕೂರು ಜನ: 59 ಸಾವಿರದ 990 ಬಾಕಿ: 5 ಕೋಟಿ 77 ಲಕ್ಷದ 36 ಸಾವಿರದ 752 ರೂ
  8. 8. ಕೋಲಾರ ಜನ: 49 ಸಾವಿರದ 335 ಬಾಕಿ: 9 ಕೋಟಿ 36 ಲಕ್ಷದ 69 ಸಾವಿರದ 881 ರೂ

Follow Us
Poornima Agali Nagaraj
Poornima Agali Nagaraj
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!