ಬೆಂಗಳೂರು ದೇವಾಲಯಗಳ ಪ್ರಸಾದದ ಹಿಂದಿದೆ ಇತಿಹಾಸ; ಅದರ ಕಥಾಸಾರ ಸವಿಯುವ ಭಾಗ್ಯ ನಗರವಾಸಿಗಳಿಗೆ ಪ್ರಾಪ್ತಿ

ಬೆಂಗಳೂರು ನಗರದ ದೇವಾಲಯಗಳಿಗೆ ಭೇಟಿ ಕೊಟ್ಟರೆ ಅಲ್ಲಿ ವಿತರಿಸುವ ಪ್ರಸಾದ ವಿಶೇಷವಾಗಿರುತ್ತದೆ. ಪುಳಿಯೋಗರೆ, ಕಡಲೆಕಾಯಿ, ಕೋಸಂಬರಿ, ಮೊಸರು ಅನ್ನ ಮತ್ತು ಸಕ್ಕರೆ ಪೊಂಗಲ್ ಇಂತಹ ಪ್ರಸಾದಗಳನ್ನು ಭಕ್ತರಿಗೆ ನೀಡಲಾಗುತ್ತದೆ. ಹೀಗೆ ವಿತರಿಸುವ ಪ್ರಸಾದಗಳ ಹಿಂದೆ ಕಥೆಯೂ ಅಡಗಿದೆ. ಈ ಬಗ್ಗೆ ಹೆಚ್ಚಿನ ನಗರವಾಸಿಗಳಿಗೆ ತಿಳಿದಿಲ್ಲ. ಹೀಗಾಗಿ ಭಾನುವಾರದಂದು ದೇವಾಲಯಗಳ ಪ್ರಸಾದಗಳ ಹಿಂದಿನ ಕಥೆಯನ್ನು ನಗರವಾಸಿಗಳಿಗೆ ತಿಳಿಸಿಕೊಡಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಂಗಳೂರು ದೇವಾಲಯಗಳ ಪ್ರಸಾದದ ಹಿಂದಿದೆ ಇತಿಹಾಸ; ಅದರ ಕಥಾಸಾರ ಸವಿಯುವ ಭಾಗ್ಯ ನಗರವಾಸಿಗಳಿಗೆ ಪ್ರಾಪ್ತಿ
ಬೆಂಗಳೂರು ದೇವಾಲಯಗಳ ಪ್ರಸಾದದ ಹಿಂದಿದೆ ಇತಿಹಾಸ; ಅದರ ಕಥಾಸಾರ ಸವಿಯುವ ಭಾಗ್ಯ ನಗರವಾಸಿಗಳಿಗೆ ಪ್ರಾಪ್ತಿ
Follow us
TV9 Web
| Updated By: Rakesh Nayak Manchi

Updated on: Mar 15, 2024 | 12:47 PM

ಬೆಂಗಳೂರು, ಮಾ.15: ನಗರದ (Bengaluru) ದೇವಾಲಯಗಳಿಗೆ ಭೇಟಿ ಕೊಟ್ಟರೆ ಅಲ್ಲಿ ವಿತರಿಸುವ ಪ್ರಸಾದ (Prasada) ವಿಶೇಷವಾಗಿರುತ್ತದೆ. ಪುಳಿಯೋಗರೆ, ಕಡಲೆಕಾಯಿ, ಕೋಸಂಬರಿ, ಮೊಸರು ಅನ್ನ ಮತ್ತು ಸಕ್ಕರೆ ಪೊಂಗಲ್ ಇಂತಹ ಪ್ರಸಾದಗಳನ್ನು ಭಕ್ತರಿಗೆ ನೀಡಲಾಗುತ್ತದೆ. ಹೀಗೆ ವಿತರಿಸುವ ಪ್ರಸಾದಗಳ ಹಿಂದೆ ಕಥೆಯೂ ಅಡಗಿದೆ. ಈ ಬಗ್ಗೆ ಹೆಚ್ಚಿನ ನಗರವಾಸಿಗಳಿಗೆ ತಿಳಿದಿಲ್ಲ. ಹೀಗಾಗಿ ಭಾನುವಾರದಂದು ದೇವಾಲಯಗಳ ಪ್ರಸಾದಗಳ ಹಿಂದಿನ ಕಥೆಯನ್ನು ನಗರವಾಸಿಗಳಿಗೆ ತಿಳಿಸಿಕೊಡಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

‘ದೈವಿಕ ಪ್ರಸಾದಗಳು’ ಎಂಬ ಕಾರ್ಯಕ್ರಮವನ್ನು ವೃತ್ತಿಪರ ಕಥೆಗಾರ್ತಿ ಅಪರ್ಣಾ ಜೈಶಂಕರ್ ನಡೆಸಿಕೊಡಲಿದ್ದಾರೆ. ಬಂದವರಿಗೆ ಪ್ರಸಾದದ ರುಚಿಯೂ ಸಿಗಲಿದೆ. ಅಟ್ಟ ಗಲಟ್ಟಾ ಎಂಬ ತಂಡವು ಪ್ರಸಾದಗಳನ್ನು ಸಿದ್ಧಪಡಿಸಲಿದೆ.

ಅಪರ್ಣಾ ಅವರು ವಿವಿಧ ಪ್ರಸಾದಗಳ ಪಾಕಶಾಲೆಯ ಪರಂಪರೆಯ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ, ಪ್ರಸಾದಗಳು ಭಾರತೀಯ ಪುರಾಣ ಮತ್ತು ಜಾನಪದಕ್ಕೆ ಹೊಂದಿರುವ ಸಂಬಂಧಗಳ ಬಗ್ಗೆ ಬಿಚ್ಚಿಡಲಿದ್ದಾರೆ. ಹೆಚ್ಚಾಗಿ, ನಾವು ಭಾರತೀಯ ಪುರಾಣಗಳನ್ನು ಧರ್ಮ ಮತ್ತು ಪ್ರಾರ್ಥನೆಗಳೊಂದಿಗೆ ಮಾತ್ರ ಸಂಯೋಜಿಸುತ್ತೇವೆ. ಆದರೆ ನಾನು ನಮ್ಮ ಪುರಾಣವನ್ನು ಕಥೆಗಳ ಮೂಲವಾಗಿ ನೋಡುತ್ತೇನೆ. ದೇವಸ್ಥಾನಗಳಲ್ಲಿ ನೀಡುವ ರುಚಿಕರವಾದ ಪ್ರಸಾದವನ್ನು ಎಲ್ಲರೂ ಸವಿಯುತ್ತಾರೆ. ಆದರೆ ಈ ಪ್ರಸಾದಗಳ ಹಿಂದಿನ ಕಥೆ ಅನೇಕರಿಗೆ ತಿಳಿದಿಲ್ಲ ಎಂದು ಅಪರ್ಣಾ ಹೇಳಿದ್ದಾಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಕೋಲಾರ: ಭಕ್ತರು ನೀಡುವ ಕಾಣಿಕೆ ಮೂಲಕ ಶಾಲೆ ನಿರ್ಮಿಸಿದ ದೇವಾಲಯದ ಟ್ರಸ್ಟ್; ಇಲ್ಲಿದೆ ವಿವರ

ಅಪರ್ಣಾ ಅವರು ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಐದು ವಿವಿಧ ಪ್ರಸಾದಗಳ ಮೇಲೆ ಕೇಂದ್ರೀಕರಿಸಲಿದ್ದಾರೆ. ಅವುಗಳೆಂದರೆ; ಪುಳಿಯೋಗರೆ, ಕಡಲೆಕಾಯಿ, ಕೋಸಂಬರಿ (ಬೇಳೆಕಾಳುಗಳು ಮತ್ತು ತರಕಾರಿಗಳಿಂದ ಮಾಡಿದ ಸಲಾಡ್), ಮೊಸರು ಅನ್ನ ಮತ್ತು ಸಕ್ಕರೆ ಪೊಂಗಲ್ (ಬೆಲ್ಲ ಮತ್ತು ಅನ್ನದಿಂದ ಮಾಡಿದ ಸಿಹಿ ಭಕ್ಷ್ಯ).

“ಪ್ರತಿಯೊಂದು ದೇವಾಲಯವು ನಿರ್ದಿಷ್ಟ ಪ್ರಸಾದವನ್ನು ನೀಡುತ್ತದೆ ಮತ್ತು ಪ್ರತಿಯೊಂದಕ್ಕೂ ಅದರದೇ ಆದ ಹಿನ್ನೆಲೆ ಇದೆ. ಉದಾಹರಣೆಗೆ, ಬಸವನಗುಡಿಯಲ್ಲಿ ನಡೆಯುವ ಐತಿಹಾಸಿ ಕಡಲೆಕಾಯಿ ಪರಿಷೆ ಸಮಯದಲ್ಲಿ ದೇವರಿಗೆ ಕಡೆಲೆಕಾಯಿಗಳನ್ನು ಅರ್ಪಿಸಲಾಗುತ್ತದೆ. ಇದರ ಹಿಂದಿನ ಕಥೆಯು ಸಾಕಷ್ಟು ಜನಪ್ರಿಯವಾಗಿದೆ” ಎಂದು ಅಪರ್ಣಾ ಹೇಳಿದರು.

ಕೋಸಂಬರಿ ಮತ್ತೊಂದು ವಿಶಿಷ್ಟವಾದ ಪ್ರಸಾದವಾಗಿದ್ದು, ಇದನ್ನು ಬನಶಂಕರಿ ಮತ್ತು ಶಾಕಂಬರಿಯ ದೇವಾಲಯಗಳಲ್ಲಿ ಹೆಚ್ಚಾಗಿ ನೀಡಲಾಗುತ್ತದೆ. ಬನಶಂಕರಿ ಫಲವತ್ತತೆ, ಬೆಳವಣಿಗೆ ಮತ್ತು ಕೃಷಿಯ ದೇವತೆಯಾಗಿರುವುದರಿಂದ ಈ ದೇವಾಲಯಗಳಲ್ಲಿ ಕೋಸಂಬರಿಯನ್ನು ಅರ್ಪಿಸಲಾಗುತ್ತದೆ. ತಮಿಳುನಾಡು ಮತ್ತು ಕೇರಳದ ದೇವಿ ದೇವಾಲಯಗಳಲ್ಲಿ ನೀವು ಇದನ್ನು ಅಪರೂಪವಾಗಿ ಕಾಣಬಹುದು ಎಂದು ಹೇಳಿದ್ದಾರೆ.

ನಗರದ ದೇವಾಲಯಗಳಲ್ಲಿ ಅತ್ಯಂತ ಸಾಮಾನ್ಯವಾದ ಪ್ರಸಾದವೆಂದರೆ ಪುಳಿಯೋಗರೆ. ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದಕ್ಕೆ ಹೆಚ್ಚು ಬೇಡಿಕೆಯಿದೆ. ಅದೇ ರೀತಿ, ಮೊಸರು ಅನ್ನವನ್ನು ಅನೇಕ ಶಿವ ದೇವಾಲಯಗಳಲ್ಲಿ ಕಾಣಬಹುದು ಎಂದು ಅವರು ವಿವರಿಸುತ್ತಾರೆ.

ಪ್ರಸಾದದ ಆಯ್ಕೆಯು ಅನೇಕ ಇತರ ಅಂಶಗಳ ಮೇಲೆ ಅವಲಂಬಿತವಾಗಿದೆ. “ಬೇಸಿಗೆ ತಿಂಗಳುಗಳಲ್ಲಿ, ಹೆಚ್ಚಿನ ದೊಡ್ಡ ದೇವಾಲಯಗಳು ಶಾಖವನ್ನು ನಿಭಾಯಿಸಲು ಬೆಳಿಗ್ಗೆ ಮತ್ತು ಮಧ್ಯಾಹ್ನ ಮೊಸರು ಅನ್ನವನ್ನು ನೀಡುತ್ತವೆ ಮತ್ತು ನಂತರ ಸಂಜೆಯ ಹೊತ್ತಿಗೆ ಪುಳಿಯೋಗರೆ ಅಥವಾ ಚಿತ್ರಾನ್ನ ವಿತಿಸುತ್ತಾರೆ. ಅನೇಕ ದೊಡ್ಡ ದೇವಾಲಯಗಳು ಪೌಷ್ಠಿಕ ಭರಿತ ಊಟವನ್ನು ಪ್ರಸಾದವಾಗಿ ನೀಡುತ್ತವೆ ಎಂದು ಹೇಳಿದ್ದಾಗಿ ವರದಿ ಮಾಡಲಾಗಿದೆ.

ಪ್ರಸಾದದ ಕಥೆ ಹಾಗೂ ಸವಿಯುವ ಕಾರ್ಯಕ್ರಮ

ಪ್ರಸಾದದ ಹಿಂದಿನ ಕಥೆಗಳು ಹಾಗೂ ಪ್ರಸಾದ ಸವಿಯುವ ಕಾರ್ಯಕ್ರಮವನ್ನು ಇಂದಿರಾನಗರದ ಅಟ್ಟ ಗಲಟ್ಟಾದಲ್ಲಿ ಮಾರ್ಚ್ 17 ರಂದು ಮಧ್ಯಾಹ್ನ 1.30 ಗಂಟೆಗೆ ಆಯೋಜಿಸಲಾಗಿದೆ. ಇದರ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ ಎಂದು ವರದಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ