ಹುಳಿಮಾವು ಬಳಿ ಕುಡುಕನ ರಂಪಾಟ: ಸಿಗರೇಟ್​ಗಾಗಿ ಕಿರಿಕ್.. ಪೊಲೀಸರ ಮುಂದೆ ಅಸಭ್ಯ ವರ್ತನೆ

ಪೊಲೀಸ್ ಕಾನ್‌ಸ್ಟೇಬಲ್ ಚಂದ್ರೇಗೌಡ ಮತ್ತು ASI ಶಿವಕುಮಾರ್​ಗೆ ವ್ಯಕ್ತಿ ಧಮ್ಕಿ ಹಾಕಿದ್ದಾನೆ. ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪೊಲೀಸರನ್ನು ತಳ್ಳಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಎಎಸ್‌ಐಗೆ ಕಾಲಿನಿಂದ ಒದ್ದು, ಕೊರಳಪಟ್ಟಿ ಹಿಡಿದು ಎಳೆದಾಡಿ ಬೀದಿ ರಂಪ ಮಾಡಿದ್ದಾನೆ.

  • TV9 Web Team
  • Published On - 8:30 AM, 1 Mar 2021
ಹುಳಿಮಾವು ಬಳಿ ಕುಡುಕನ ರಂಪಾಟ: ಸಿಗರೇಟ್​ಗಾಗಿ ಕಿರಿಕ್.. ಪೊಲೀಸರ ಮುಂದೆ ಅಸಭ್ಯ ವರ್ತನೆ
ಕುಡಿದು ಟೈಟ್​ ಆಗಿದ್ದ ನಾಗೇಶ್ ಬೀದಿಯಲ್ಲಿ ರಂಪಾಟ ಮಾಡಿದ್ದಾನೆ.

ಬೆಂಗಳೂರು: ಮದ್ಯದ ಅಮಲಿನಲ್ಲಿ ಬೇಕರಿ ಮಾಲೀಕನ ಜೊತೆ ಕುಡುಕನೋರ್ವ ಕಿರಿಕ್ ಮಾಡಿಕೊಂಡಿದ್ದು ಪೊಲೀಸರ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೆಬ್ರವರಿ 26ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಡಿದು ಟೈಟ್​ ಆಗಿದ್ದ ನಾಗೇಶ್ ಎಂಬ ವ್ಯಕ್ತಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನ ಪತ್ನಿಗೆ ಎಚ್ಚರಿಕೆ ನೀಡಿದ್ದಾರೆ.

ಹೊಮ್ಮದೇವನಹಳ್ಳಿ ನಿವಾಸಿ ನಾಗೇಶ್(37) ಫೆಬ್ರವರಿ 26ರ ರಾತ್ರಿ ಕುಡಿದು ಫುಲ್ ಟೈಟ್ ಆಗಿದ್ದ. ಈ ವೇಳೆ ಬಸವನಪುರ ವೃತ್ತದ ಬಳಿಯಿದ್ದ ಬೇಕರಿಗೆ ಬಂದು ಸಿಗರೇಟ್ ವಿಚಾರವಾಗಿ ಬೇಕರಿ ಮಾಲೀಕನ ಜೊತೆ ಜಗಳ ಮಾಡಿಕೊಂಡಿದ್ದ. ಮಾಲೀಕ ಹರೀಶ್ ಮಾಹಿತಿ ಆಧರಿಸಿ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ವ್ಯಕ್ತಿಯ ವರ್ತನೆ ನೋಡಿ ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಬಂಧಿಸಲು ಹೋದ ಪೊಲೀಸರ ಮುಂದೆ ಕುಡುಕ ಗಂಡ ಹಾಗೂ ಹೆಂಡತಿಯ ಹೈಡ್ರಾಮಾ ಶುರುವಾಗಿದೆ.

ಪೊಲೀಸ್ ಕಾನ್‌ಸ್ಟೇಬಲ್ ಚಂದ್ರೇಗೌಡ ಮತ್ತು ASI ಶಿವಕುಮಾರ್​ಗೆ ವ್ಯಕ್ತಿ ಧಮ್ಕಿ ಹಾಕಿದ್ದಾನೆ. ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪೊಲೀಸರನ್ನು ತಳ್ಳಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಎಎಸ್‌ಐಗೆ ಕಾಲಿನಿಂದ ಒದ್ದು, ಕೊರಳಪಟ್ಟಿ ಹಿಡಿದು ಎಳೆದಾಡಿ ಬೀದಿ ರಂಪ ಮಾಡಿದ್ದಾನೆ. ಪತ್ನಿಗೆ ಕರೆ ಮಾಡಿ ಮಕ್ಕಳ ಜೊತೆ ಸ್ಥಳಕ್ಕೆ ಬಂದು ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಮಲಗುವಂತೆ ತಿಳಿಸಿದ್ದಾನೆ. ಪತಿಯ ಮಾತಿನಂತೆ ಸ್ಥಳಕ್ಕೆ ಬಂದ ಮಹಿಳೆ ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾಳೆ. ಗಂಡನನ್ನ ಕರೆದೊಯ್ದರೆ, ಪೊಲೀಸರ ವಿರುದ್ಧವೇ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಹಾಗೂ ಆರೋಪಿ ನಾಗೇಶ್ ಪತ್ನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಡ್ರೈವರ್​ಗೆ ಕುಡುಕರ ಕಿರಿಕ್, ಯುವಕರ ನಶೆ ಇಳಿಸಿದ ಪ್ರಯಾಣಿಕರು