IISc ಸಂಶೋಧನೆಯಲ್ಲಿ ತಿಳಿಯಿತು ಬೆಳ್ಳಂದೂರು ಕೆರೆಯ ನೊರೆಗೆ ಕಾರಣ, ಇಲ್ಲಿದೆ ಮಾಹಿತಿ

ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸುದೀರ್ಘ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು ಪ್ರಮುಖವಾಗಿ 3 ಕಾರಣಗಳನ್ನು ತಿಳಿಸಿದ್ದಾರೆ.

IISc ಸಂಶೋಧನೆಯಲ್ಲಿ ತಿಳಿಯಿತು ಬೆಳ್ಳಂದೂರು ಕೆರೆಯ ನೊರೆಗೆ ಕಾರಣ, ಇಲ್ಲಿದೆ ಮಾಹಿತಿ
ಬೆಳ್ಳಂದೂರು ಕೆರೆ ನೊರೆ
Follow us
ವಿವೇಕ ಬಿರಾದಾರ
|

Updated on:Jun 07, 2023 | 8:01 AM

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ (Bellandur Lake) ನೊರೆ (foam) ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯ (IISc) ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸುದೀರ್ಘ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು ಪ್ರಮುಖವಾಗಿ 3 ಕಾರಣಗಳನ್ನು ತಿಳಿಸಿದ್ದಾರೆ. ಒಂದು ಅತಿಯಾದ ಮಳೆ, ಎರಡು ಕರೆಗೆ ಸೇರುವ ಸಂಸ್ಕರಿಸದ ಕೊಳಚೆ ನೀರು, ಮೂರನೇಯದ್ದು, ನಿರ್ದಿಷ್ಟ ಬ್ಯಾಕ್ಟೀರಿಯಾವನ್ನು ಹೊಂದಿರುವ ಘನವಸ್ತುಗಳು ಕೆರೆ ಸೇರುವುದರಿಂದ ನೊರೆ ನಿರ್ಮಾಣವಾಗುತ್ತಿದೆ ಇದೆ ಎಂದು ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್ (CST), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋಧಕರು ತಿಳಿಸಿದ್ದಾರೆ. ಆದರೆ ತಂಡದ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಮನೆಯಲ್ಲಿ ತೊಳೆಯಲು ಬಳಸುವ ಸೋಪ್​ಪೌಡರ್​ ಮತ್ತು ಶಾಂಪುಗಳಿಂದ ನೊರೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ನೊರೆ ಬರುವುದನ್ನು ತಡೆಯುವ ಒಂದು ಮಾರ್ಗವೆಂದರೆ, ಸಂಸ್ಕರಣೆ ಮಾಡದ ಕೊಳಚೆ ನೀರನ್ನು ಕೆರೆಗೆ ಬಿಡುವುದನ್ನು ನಿಲ್ಲಿಸುವುದು, ಜೊತೆಗೆ ಮಳೆಗಾಲದ ಮೊದಲು ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವುದು.

ಇದನ್ನೂ ಓದಿ: ಜೂನ್ 11ರಂದು ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಅಧಿಕ ಮಳೆ ಸಾಧ್ಯತೆ

ಕೆಸರು ಹೇಗೆ ಸಂಗ್ರಹಗೊಳ್ಳುತ್ತದೆ

ಸಂಸ್ಕರಣೆ ಮಾಡದ ಕೊಳಚೆನೀರು ಕೆರೆಗೆ ಸೇರಿ ಕೆಸರಾಗಿ ಬದಲಾಗುತ್ತಿದೆ. ಹೀಗಾಗಿ ಸಂಸ್ಕರಣೆ ಮಾಡದ ಕೊಳಚೆನೀರನ್ನು ಕೆರೆಗೆ ಬಿಡುವುದನ್ನು ನಿಲ್ಲಿಸಬೇಕು. ಕೆರೆಗೆ ಕೊಳಚೆನೀರು ಸೇರಿ 10-15 ದಿನಗಳ ನಂತರ ಹೂಳಾಗಿ ಬದಲಾಗುತ್ತದೆ IISc ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಕೊಳಚೆನೀರು ಹರಿಯುವುದರಿಂದ ಅದರ ಒಂದು ಭಾಗವು ಕೆಸರಿಗೆ ಸಡಿಲವಾಗಿ ಅಂಟಿಕೊಳ್ಳುತ್ತದೆ. ಪರಿಣಾಮವಾಗಿ, ಅದರ ಸಾಂದ್ರತೆಯು ಹೆಚ್ಚಾಗುತ್ತದೆ. “ಕೆಲವು ಸಂದರ್ಭಗಳಲ್ಲಿ, ಮೂಲ ಸಾಂದ್ರತೆಯ 200 ಪಟ್ಟು ಹೆಚ್ಚು ಸರೋವರವನ್ನು ಪ್ರವೇಶಿಸುತ್ತದೆ” ಎಂದು CST ಯ ಮುಖ್ಯ ಸಂಶೋಧನಾ ವಿಜ್ಞಾನಿ ಮತ್ತು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಚಾಣಕ್ಯ ಹೆಚ್​​ ತಿಳಿಸಿದ್ದಾರೆ.

ನೊರೆಗೆ ಮತ್ತೊಂದು ಕಾರಣವೆಂದರೇ ಮಳೆಗಾಲದಲ್ಲಿ ಕೆರೆಗೆ ಒಳ ಹರಿವು ಹೆಚ್ಚುವುದರಿಂದ ನಗರದ ಹೊಲಸು ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತದೆ. ಈ ಹೆಚ್ಚಿನ ಪ್ರಮಾಣದ ಒಳಹರಿವಿನ ಮೂಲಕ ಬಂದ ಸರ್ಫ್ಯಾಕ್ಟಂಟ್ ನೊರೆಗೆ ಮುಖ್ಯ ಕಾರಣವಾಗಿದೆ. ಮಳೆಯಿಂದಾಗಿ ಕೆರೆಯಲ್ಲಿ ನೀರಿನ ಮಟ್ಟವು ಹೆಚ್ಚಾದಂತೆ, ಹೆಚ್ಚಿನ ಪ್ರಮಾಣದ ಸರ್ಫ್ಯಾಕ್ಟಂಟ್‌ ಸೇರಿಕೊಂಡು ಕೆರೆಯ 25 ಅಡಿ ಆಳದವರೆಗು ತಲುಪುತ್ತದೆ ಎಂದು ಸಸ್ಟೈನಬಲ್ ಟೆಕ್ನಾಲಜೀಸ್ ಸೆಂಟರ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಲೇಖಕರಲ್ಲಿ ಒಬ್ಬರಾದ ಲಕ್ಷ್ಮೀನಾರಾಯಣ ರಾವ್ ಹೇಳಿದರು.

ಈ ಎರಡು ಅಂಶಗಳ ಜೊತೆಗೆ, ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಬೇಡವಾದ ಘನವಸ್ತುಗಳು ನೊರೆಗೆ ಕಾರಣವಾಗಿರಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ ಎಂದು IISc ಹೇಳಿದೆ. ನೊರೆ ರಚನೆಯನ್ನು ಅಧ್ಯಯನ ಮಾಡಲು, ಸಂಶೋಧಕರು ಆಯಾ ಕಾಲದಲ್ಲಿ ನೀರು, ನೊರೆ ಸಂಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 am, Wed, 7 June 23

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ