ರಾಜ್ಯಾದ್ಯಂತ ಸಂಪೂರ್ಣ ಬಂದ್; ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ಕಳೆದರು ಪ್ರಯಾಣಿಕರಿಗಿಲ್ಲ ಕೊರತೆ

ಸೋಂಕಿನ ಅರಿವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತರಾಗಿ ನಿನ್ನೆ ರಾತ್ರಿಯಿಂದ ರೈಲ್ವೆ ನಿಲ್ದಾಣದಲ್ಲಿರುವ ಪ್ರಯಾಣಿಕರು ರೈಲಿಗಾಗಿ ಕಾಯುತ್ತ ಗುಂಪು ಗುಂಪಾಗಿ ಮಲಗಿದ್ದಾರೆ.

ರಾಜ್ಯಾದ್ಯಂತ ಸಂಪೂರ್ಣ ಬಂದ್; ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ಕಳೆದರು ಪ್ರಯಾಣಿಕರಿಗಿಲ್ಲ ಕೊರತೆ
ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ಕಳೆದರು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರು: 10 ಗಂಟೆಯಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಂಪೂರ್ಣ ಬಂದ್ ಮಾಡಲು ಸೂಚಿಸಲಾಗಿತ್ತು. ಆದರೆ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ಕಳೆದರು ಪ್ರಯಾಣಿಕರ ಸಂಖ್ಯೆ ಸ್ವಲ್ಪವೂ ಕಡಿಮೆಯಾಗಿಲ್ಲ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬೆಂಗಳೂರಿನಿಂದ ಹೊರಟ ಜನ ಡೆಲ್ಲಿ, ಆಂಧ್ರ ಪ್ರದೇಶ ,ಕೇರಳ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಿಗೆ ತೆರಳುತ್ತಿದ್ದಾರೆ.

ಸೋಂಕಿನ ಅರಿವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತರಾಗಿ ನಿನ್ನೆ ರಾತ್ರಿಯಿಂದ ರೈಲ್ವೆ ನಿಲ್ದಾಣದಲ್ಲಿರುವ ಪ್ರಯಾಣಿಕರು ರೈಲಿಗಾಗಿ ಕಾಯುತ್ತ ಗುಂಪು ಗುಂಪಾಗಿ ಮಲಗಿದ್ದಾರೆ. ಬಹುತೇಕ ರೈಲುಗಳು ರಾತ್ರಿ 7 ರಿಂದ 9 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಆ ಮೂಲಕ ಗಂಟೆಗೆ ಒಂದರಂತೆ ರೈಲು ಪ್ರಯಾಣ ಇರಲಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮರೆವಣಿಗೆ
ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ದಿಗಂಭರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ ಅವರು ಕೋವಿಡ್ ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮರೆವಣಿಗೆ ನಡೆಸಿದ್ದಾರೆ. ಪ್ರತಿ ದವನದ ಹುಣ್ಣಿಮೆಗೆ ಜರಗುವ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಜಾತ್ರೋತ್ಸವದಲ್ಲಿ ಈ ಘಟನೆ ನಡೆದಿದೆ. ಜಾತ್ರೋತ್ಸವ ಹಿನ್ನೆಲೆ ಬುಧವಾರ ಕಲ್ಲಿನಾಥ ಸ್ವಾಮೀಜಿ ಪಟ್ಟಣದಲ್ಲಿ ಭಕ್ತರನ್ನು ಕರೆದುಕೊಂಡು ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮರೆವಣಿಗೆ ಹೊರಟಿದ್ದಾರೆ.

ತಹಶಿಲ್ದಾರ್ ಹಾಗೂ ಪೊಲೀಸರು ಜಾತ್ರೆ ನಡೆಸದಂತೆ ತಿಳಿ ಹೇಳಿದರೂ ನಿಯಮ ಮೀರಿ ಸದರಿ ಸ್ವಾಮೀಜಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಕಲ್ಲಿನಾಥ ಸ್ವಾಮೀಜಿಯಿಂದ ಪಲ್ಲಕ್ಕಿ ಮೆರವಣಿಗೆ ನಡೆದಿದೆ. ಪಲ್ಲಕ್ಕಿಯಲ್ಲಿ ಸ್ವತಃ ಕೂತು ಭಕ್ತರಿಂದ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಕಲ್ಲಿನಾಥ ಸ್ವಾಮೀಜಿ.

ಇದನ್ನೂ ಓದಿ:

ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ

ಕೃಷಿ ಕಾಯ್ದೆ ಖಂಡಿಸಿ ಭಾರತ್ ಬಂದ್ : 32 ಸ್ಥಳಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿ, 4 ಶತಾಬ್ದಿ ರೈಲು ರದ್ದು

(Karnataka full lockdown but passengers still waiting for train to return their native)