ವೀಕೆಂಡ್ ಮಸ್ತಿ.. ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದಕ್ಕೆ ಸಿಕ್ತು ಬಿಸಿ ಬಿಸಿ ಕಜ್ಜಾಯ!

  • TV9 Web Team
  • Published On - 14:33 PM, 15 Jun 2020
ವೀಕೆಂಡ್ ಮಸ್ತಿ.. ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದಕ್ಕೆ ಸಿಕ್ತು ಬಿಸಿ ಬಿಸಿ ಕಜ್ಜಾಯ!

ಬೆಂಗಳೂರು: ವೀಕೆಂಡ್​ ಮಸ್ತಿಯಲ್ಲಿ ಭಾನುವಾರ ಅಡ್ಡಾದಿಡ್ಡಿಯಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದವನಿಗೆ ಸ್ಥಳೀಯರಿಂದ ಸಖತ್ತು ಗೂಸಾ ಬಿದ್ದ ಘಟನೆ RT ನಗರದಲ್ಲಿ ನಡೆದಿದೆ. ಗೂಸಾ ತಿಂದ ಇಬ್ಬರ ಹೆಸರು ತಿಳಿದು ಬಂದಿಲ್ಲ. ಆದರೆ, ಸ್ಥಳೀಯರ ಪ್ರಕಾರ ಇಬ್ಬರೂ RT ನಗರದ ಮರಿ ಪುಢಾರಿಗಳೆಂದು ಹೇಳಲಾಗ್ತಿದೆ.

ಗೆಳತಿಯರನ್ನ ಇಂಪ್ರೆಸ್​ ಮಾಡುವ ಭರದಲ್ಲಿ ಅಡ್ಡಾದಿಡ್ಡಿ​..
ಭಾನುವಾರವಾಗಿದ್ದ ನಿನ್ನೆ ಏರಿಯಾದಲ್ಲಿ ರಸ್ತೆಗಳು ಖಾಲಿ ಇದೆ ಅಂತಾ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರ್​ನಲ್ಲಿ ಗೆಳತಿಯರ ಜತೆ ಜಾಲಿ ರೈಡ್ ಹೊರಟಿದ್ದರು. ಇದೇ ವೇಳೆ ತಮ್ಮ ಜೊತೆಗಿದ್ದ ಗೆಳತಿಯರನ್ನ ಇಂಪ್ರೆಸ್​ ಮಾಡುವ ಭರದಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಲು ಶುರುಮಾಡಿದರಂತೆ. ಇದರಿಂದ ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಮತ್ತು ಸ್ಥಳೀರಿಗೆ ಬಹಳ ತೊಂದರೆಯಾಗಿ ಇಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ್ರು.

ಮಾತಿಗೆ ಮಾತು ಬೆಳೆದು ಕೊನೆಗೆ ಇಬ್ಬರನ್ನು ಕಾರಿನಿಂದ ಹೊರಗೆಳೆದು ಧರ್ಮದೇಟು ಸಹ ಕೊಟ್ಟರು. ಜತೆಗೆ ಈ ಪ್ರಸಂಗವನ್ನು ವಿಡಿಯೋ ಮಾಡಿ ಬೆಂಗಳೂರು ಪೊಲೀಸರಿಗೆ  ಟ್ವಿಟ್ಟರ್ ಮುಖಾಂತರ ಪೊಸ್ಟ್ ಮಾಡಿದ್ರು.

ಕಮಿಷನರ್ ಭಾಸ್ಕರ್ ರಾವ್​ರಿಂದ ಕ್ರಮಕ್ಕೆ ಸೂಚನೆ
ವಿಡಿಯೋ ಗಮನಿಸಿದ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರು ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಚಾರಿ ಉತ್ತರ ವಿಭಾಗದ ಡಿಸಿಪಿ ಸಾರ ಫಾತಿಮಾಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ವಿಡಿಯೋವನ್ನು ಪರಿಶೀಲಿಸಿರುವ ಸಂಚಾರಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.