ಬಿಜೆಪಿ ಸಂಸದನ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ ಪ್ರಕರಣ: ಕೇಸ್ ಮೈಸೂರಿಗೆ ವರ್ಗಾಯಿಸಲು ತಯಾರಿ
ಬಳ್ಳಾರಿ ಸಂಸದ ದೇವೆಂದ್ರಪ್ಪನ ಪುತ್ರನ ವಿರುದ್ಧ ಲವ್, ಸೆಕ್ಸ್ ದೋಖ ಮಾಡಿದ ಆರೋಪ ಕೇಸ್ ಸಂಬಂಧ ಬೆಂಗಳೂರಿನ ವಿಜಯ ನಗರದ ನಿವಾಸಿ 24 ವರ್ಷದ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಿದ್ದಾರೆ. ಸದ್ಯ ಈ ಕೇಸನ್ನು ಮೈಸೂರಿಗೆ ವರ್ಗಾಯಿಸಲು ತಯಾರಿ ನಡೆಯುತ್ತಿದೆ.

ಬೆಂಗಳೂರು, ನ.18: ಬಳ್ಳಾರಿ ಸಂಸದ (Bellary MP) ದೇವೆಂದ್ರಪ್ಪನ ಪುತ್ರ ರಂಗನಾಥ್ ವಿರುದ್ಧ ಲವ್, ಸೆಕ್ಸ್ ದೋಖ (Love Sex Aur Dhokha) ಮಾಡಿದ ಆರೋಪ ಕೇಳಿ ಬಂದಿದ್ದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ವಿಜಯ ನಗರದ ನಿವಾಸಿ 24 ವರ್ಷದ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಿದ್ದಾರೆ. ಸದ್ಯ ಈ ಕೇಸನ್ನು ಮೈಸೂರಿಗೆ ವರ್ಗಾಯಿಸಲು ತಯಾರಿ ನಡೆಯುತ್ತಿದೆ. ಮೈಸೂರಿನ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಬಸವನಗುಡಿ ಮಹಿಳಾ ಪೊಲೀಸರು ಮುಂದಾಗಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಲೈಂಗಿಕ ಸಂಪರ್ಕ ಆರೋಪ ಕೇಳಿ ಬಂದಿದೆ. ಜೊತೆಗೆ ಉಪನ್ಯಾಸಕ ರಂಗನಾಥ್ ಹಾಗೂ ಸಂತ್ರಸ್ತೆ ಯುವತಿ ಹೆಚ್ಚು ಒಡನಾಟವಿದ್ದದ್ದು ಮೈಸೂರಿನಲ್ಲಿ. ಬೆಂಗಳೂರಿನಲ್ಲಿ ಆರೋಪ ಸಂಬಂಧ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆ ಕೇಸ್ ವರ್ಗಾವಣೆ ಮಾಡಲು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಮುಂದಾಗಿದ್ದಾರೆ.
ಘಟನೆ ಹಿನ್ನೆಲೆ
ಸಂಸದ ದೇವೆಂದ್ರಪ್ಪನ ಪುತ್ರ ಹಾಗೂ ಮೈಸೂರಿನ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ರಂಗನಾಥ್ ವಿರುದ್ಧ ಲವ್, ಸೆಕ್ಸ್ ದೋಖ ವಂಚನೆ ಆರೋಪ ಕೇಳಿ ಬಂದಿದೆ. 2022ರಲ್ಲಿ ರಂಗನಾಥ್ ಪಾರ್ಟಿಯೊಂದರಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಿದ್ದರು. ಅದಾದ ಬಳಿಕ ರಂಗನಾಥ್ ಈಕೆಗೆ ಕರೆ ಮಾಡಿ ಹತ್ತಿರವಾಗಿದ್ದು, ಪ್ರೀತಿಸುವ ನೆಪದಲ್ಲಿ ಹತ್ತಿರವಾಗಿದ್ರು. ಬಳಿಕ ತಂದೆಯನ್ನು ಭೇಟಿ ಮಾಡಿಸೊ ನೆಪದಲ್ಲಿ ಮೈಸೂರಿಗೆ ಕರೆದು ದೈಹಿಕವಾಗಿ ಬಳಸಿಕೊಂಡಿದ್ದು, ಮದುವೆಯಾಗೊದಾಗಿ ಮೊದಲು ಹೇಳಿ, ಈಗ ಎಲ್ಲಾ ಮುಗಿದ ಮೇಲೆ ತನನ್ನು ಅವಾಯ್ಡ್ ಮಾಡುತಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪ ಮಾಡಿದ್ದರು. ಆರು ತಿಂಗಳ ಹಿಂದೆ ಮದುವೆಯಾಗೊದಾಗಿ ಹೇಳಿ, ಈಗ ವಂಚನೆ ಮಾಡಿದ್ದಾರೆಂದು ಆರೋಪಿಸಿ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಗೆ ಎಫ್ ಐಆರ್ ದಾಖಲು ಮಾಡಿದ್ದರು. ಸದ್ಯ ಈ ಕೇಸನ್ನು ಮೈಸೂರಿಗೆ ಶಿಫ್ಟ್ ಮಾಡಲು ತಯಾರಿ ನಡೆಯುತ್ತಿದೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಎಂಪಿ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ: ದೂರು ದಾಖಲಿಸಿದ ಯುವತಿ
ಇನ್ನು ಮತ್ತೊಂದು ಕಡೆ ಯುವತಿ ಬೆಂಗಳೂರಿನಲ್ಲಿ ದೂರು ನೀಡಿದ ಬಳಿಕ ಮೈಸೂರುನಲ್ಲಿ ರಂಗನಾಥ್ ಈಕೆ ವಿರುದ್ಧವೇ ಬ್ಲ್ಯಾಕ್ ಮೇಲ್ ಮಾಡಿ ಆರೋಪ ಮಾಡಿ ಎಫ್ ಐಆರ್ ದಾಖಲಿಸಿದ್ದಾರೆ. ಇನ್ನು ಈ ಸಂಬಂಧ ಸಹ ಪ್ರತಿಕ್ರಿಯೆ ನೀಡಿರುವ ಆಕೆ, ನನ್ನ ಪ್ರೀತಿಸಿದ ಬಳಿಕ ಅವರು ನನ್ನನ್ನು ಚೆನ್ನಾಗೆ ನೋಡಿಕೊಳ್ಳುತಿದ್ರು. ನನ್ನ ಮನೆಗೆ ಅಂತ ಒಂದಿಷ್ಟು ಹಣ ಕೂಡ ನೀಡಿದ್ದಾರೆ. ಆದ್ರೆ ಜಗಳವಾದ ಬಳಿಕ ನಾನು ಅವರಿಂದ ಹಣ ಪಡೆದಿಲ್ಲಾ. ಬೇರೆಯವರ ಕಡೆಗಳಿಂದ ಹಣ ತನ್ನ ಖಾತೆಗೆ ಹಾಕಿಸಿ ಡಿಮ್ಯಾಂಡ್ ಮಾಡುತಿದ್ದೇನೆ ಅಂತ ಸೃಷ್ಟಿಸುತಿದ್ದಾರೆ. ಈ ವಿಚಾರ ಅವರ ತಂದೆಯ ಗಮನಕ್ಕೆ ತಂದರೂ ಸಹ ನನಗೆ ನ್ಯಾಯ ಸಿಕ್ಕಿಲ್ಲ ಅಂತ ಆರೋಪಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ