ಸೋಂಕು ದೃಢಪಡುತ್ತಿದ್ದಂತೆ ಡಯಾಲಿಸಿಸ್​ಗಾಗಿ ಬಂದಿದ್ದ ಮಹಿಳೆಯನ್ನೇ ಹೊರದಬ್ಬಿದ ಮಲ್ಯ ಆಸ್ಪತ್ರೆ ಸಿಬ್ಬಂದಿ

ಕೊರೊನಾ ಸೋಂಕಿತ ಮಹಿಳೆ ಮಲ್ಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ತಿದ್ದರು. ವಾರಕ್ಕೆರಡು ಬಾರಿ ಆಸ್ಪತ್ರೆಗೆ ಡಯಾಲಿಸಿಸ್​ಗಾಗಿಯೇ ಬರುತ್ತಿದ್ರು. ಈ ಬಾರಿ ಕೊರೊನಾ ಹಿನ್ನೆಲೆ ಮಲ್ಯ ಆಸ್ಪತ್ರೆ ವೈದ್ಯರು ಮಹಿಳೆಗೆ ಮೊನ್ನೆ ಕೊವಿಡ್ ಟೆಸ್ಟ್ ಮಾಡಿದ್ದಾರೆ. ನಿನ್ನೆ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

  • TV9 Web Team
  • Published On - 13:52 PM, 13 Apr 2021
ಸೋಂಕು ದೃಢಪಡುತ್ತಿದ್ದಂತೆ ಡಯಾಲಿಸಿಸ್​ಗಾಗಿ ಬಂದಿದ್ದ ಮಹಿಳೆಯನ್ನೇ ಹೊರದಬ್ಬಿದ ಮಲ್ಯ ಆಸ್ಪತ್ರೆ ಸಿಬ್ಬಂದಿ
ಮಲ್ಯ ಆಸ್ಪತ್ರೆ ಮುಂದೆ ನರಳುತ್ತಿರುವ ಸೋಂಕಿತೆ

ಬೆಂಗಳೂರು: ಕೊರೊನಾ ಸೋಂಕಿತ ಮಹಿಳೆಗೆ ಬೆಡ್‌ ನೀಡದೆ ಆಸ್ಪತ್ರೆಯಿಂದ ಹೊರ ಹಾಕಿರುವ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಮಲ್ಯ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರಂತೆ. ಚಿಕಿತ್ಸೆ ಸಿಗದೆ ಉರಿ ಬಿಸಿಲಿನಲ್ಲಿ ಇಡೀ ದಿನ ಫುಟ್ ಪಾತ್ ಮೇಲೆಯೇ 58 ವರ್ಷದ ಸೋಂಕಿತ ಮಹಿಳೆ ನರಳಾಡಿದ್ದಾರೆ.

ಕೊರೊನಾ ಸೋಂಕಿತ ಮಹಿಳೆ ಮಲ್ಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ವಾರಕ್ಕೆರಡು ಬಾರಿ ಆಸ್ಪತ್ರೆಗೆ ಡಯಾಲಿಸಿಸ್​ಗಾಗಿಯೇ ಬರುತ್ತಿದ್ರು. ಈ ಬಾರಿ ಕೊರೊನಾ ಹಿನ್ನೆಲೆ ಮಲ್ಯ ಆಸ್ಪತ್ರೆ ವೈದ್ಯರು ಮಹಿಳೆಗೆ ಮೊನ್ನೆ ಕೊವಿಡ್ ಟೆಸ್ಟ್ ಮಾಡಿದ್ದಾರೆ. ನಿನ್ನೆ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಸೋಂಕು ದೃಢವಾಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನ ಆಸ್ಪತ್ರೆಯೊಳಗೇ ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ನಾನ್ ಕೊವಿಡ್ ಆಸ್ಪತ್ರೆಯೆಂದು ಒಳಗೆ ಸೇರಿಸದೆ ಹೊರಹಾಕಿದ್ದಾರೆ. ಇಷ್ಟೆಲ್ಲಾ ಆಗಿ ಮಹಿಳೆ ಆಸ್ಪತ್ರೆ ಮುಂದೆ ಫುಟ್‌ಪಾತ್‌ ಮೇಲೆ ಇಡೀ ದಿನ ಪರದಾಡಿದ್ದಾರೆ ಹಾಗೂ ಮಹಿಳೆಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು ಮಹಿಳೆಗೆ ಕನಿಷ್ಠ ಚಿಕಿತ್ಸೆ ಸಹ ಮಲ್ಯ ಆಸ್ಪತ್ರೆ ವೈದ್ಯರು ನೀಡಿಲ್ಲ. ಡಯಾಲಿಸಿಸ್ ಕೂಡಾ ಮಾಡದೇ ಹೊರಹಾಕಿದ್ದಾರೆ.

ಊಟ, ನೀರು ಇಲ್ಲದೆ ಏಕಾಂಗಿಯಾಗಿ ಮಹಿಳೆ ಪರದಾಡುತ್ತಿದ್ದಾರೆ. ನಮ್ದು ನಾನ್ ಕೊವಿಡ್ ಆಸ್ಪತ್ರೆಯೆಂದು ಹೊರ ಹಾಕಿದ್ರು. ತೀವ್ರ ಜ್ವರವಿದೆ. ಡಯಾಲಿಸಿಸ್ ಕೂಡಾ ಮಾಡಿಲ್ಲ. ಬಿಬಿಎಂಪಿ ಸಿಬ್ಬಂದಿ, 108 ಸಿಬ್ಬಂದಿಗೆ ಕರೆ ಮಾಡಿದ್ರೂ ನಿರ್ಲಕ್ಷ್ಯ ತೋರಿದ್ದಾರೆ. ಕಾಲಿಗೆ ಪೆಟ್ಟಾಗಿದ ಕಾರಣ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಉರಿ ಬಿಸಿಲಲ್ಲಿ ಫುಟ್​ಪಾತ್ ಮೇಲೆ ಇಡೀ ದಿನ ಕಳೆದ ಮಹಿಳೆ ಕಣ್ಣೀರಿಡುತ್ತ ಬೇಸರ ವ್ಯಕ್ತಡಿಸಿದ್ದಾರೆ.

Mallya Hospital

ಮಲ್ಯ ಆಸ್ಪತ್ರೆ ಮುಂದೆ ನರಳುತ್ತಿರುವ ಸೋಂಕಿತೆ

ಇದನ್ನೂ ಓದಿ: 15 ಆಸ್ಪತ್ರೆ ಸುತ್ತಿದರೂ ಸಿಗ್ಲಿಲ್ಲ ಚಿಕಿತ್ಸೆ, ಆಸ್ಪತ್ರೆಗಳ ಅಮಾನವೀಯ ನಡೆಗೆ ವೃದ್ಧೆ ಬಲಿ

(Mallya Hospital Staff Sent Corona Positive Patient Out and Behaved like Inhumanity in Bengaluru)