ಸಾಲ ಮಾಡಿ ಮೂರು ಲಕ್ಷ ಖರ್ಚು ಮಾಡಿದ್ರೂ ಉಳಿಯಲಿಲ್ಲ.. ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ

ಬೆಂಗಳೂರಿನ ಮೇಡಿ ಅಗ್ರಹಾರ ಚಿತಾಗಾರದ ಬಳಿ ಕುಟುಂಬವೊಂದು ತನ್ನ ಕಣ್ಣೀರ ಕಥೆ ಹೇಳಿಕೊಂಡಿದೆ. ಚಿಕಿತ್ಸೆಗೆಂದು ಬಡ್ಡಿಗೆ ದುಡ್ಡು ತಂದ್ರೂ ತಮ್ಮನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ವ್ಯಕ್ತಿ ಕಣ್ಣೀರು ಹಾಕಿದ್ದಾರೆ. 5% ಬಡ್ಡಿಗೆ 1 ಲಕ್ಷ ಕೈ ಸಾಲ‌ ಮಾಡಿ ಅಣ್ಣ-ತಮ್ಮಂದಿರೆಲ್ಲ ಸೇರಿ ಒಟ್ಟು 3 ಲಕ್ಷ ಹೊಂದಿಸಿ ತಮ್ಮನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನಪಟ್ರೂ 35 ವರ್ಷದ ತಮ್ಮನನ್ನು ಬದುಕಿಕೊಳ್ಳಲಾಗಲಿಲ್ಲ.

  • TV9 Web Team
  • Published On - 14:46 PM, 4 May 2021
ಸಾಲ ಮಾಡಿ ಮೂರು ಲಕ್ಷ ಖರ್ಚು ಮಾಡಿದ್ರೂ ಉಳಿಯಲಿಲ್ಲ.. ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ
ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ

ಬೆಂಗಳೂರು: ನಗರದಲ್ಲಿ ಕೊರೊನಾ ತಲೆ ಎತ್ತಿದೆ. ಸಾವಿನ ಮೃದಂಗ ಬಾರಿಸುತ್ತಿದೆ. ಚಿತಾಗಾರಗಳ ಮುಂದೆ ಶವಗಳನ್ನ ಹೊತ್ತು ಆ್ಯಂಬುಲೆನ್ಸ್ಗಳು ಕ್ಯೂ ನಿಂತಿವೆ. ಇದರ ನಡುವೆ ಲಕ್ಷ ಲಕ್ಷ ಸಾಲ ಮಾಡಿ ತಮ್ಮವರನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟುವರು ಕಣ್ಣೀರು ಹಾಕುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರು ಆಸ್ಪತ್ರೆಗೆ ಹೋದ ಸೋಂಕಿತರು ಗುಣಮುಖರಾಗಿ ಮನೆಗೆ ಬರುತ್ತಿಲ್ಲ. ಆಸ್ಪತ್ರೆಗಳು, ಆ್ಯಂಬುಲೆನ್ಸ್ ಸಿಬ್ಬಂದಿ ಎಲ್ಲರೂ ಸುಲಿಗೆ ಮಾಡಲು ನಿಂತಿದ್ದಾರೆ. ತಮ್ಮವರು ವಾಪಸ್ ಬರಲಿ ಎಂದು ಹಣ ಖರ್ಚು ಮಾಡಿದವರು ಕಣ್ಣೀರು ಹಾಕುತ್ತಿರುವಂತ ಪರಿಸ್ಥಿತಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಬೆಂಗಳೂರಿನ ಮೇಡಿ ಅಗ್ರಹಾರ ಚಿತಾಗಾರದ ಬಳಿ ಕುಟುಂಬವೊಂದು ತನ್ನ ಕಣ್ಣೀರ ಕಥೆ ಹೇಳಿಕೊಂಡಿದೆ. ಚಿಕಿತ್ಸೆಗೆಂದು ಬಡ್ಡಿಗೆ ದುಡ್ಡು ತಂದ್ರೂ ತಮ್ಮನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ವ್ಯಕ್ತಿ ಕಣ್ಣೀರು ಹಾಕಿದ್ದಾರೆ. 5% ಬಡ್ಡಿಗೆ 1 ಲಕ್ಷ ಕೈ ಸಾಲ‌ ಮಾಡಿ ಅಣ್ಣ-ತಮ್ಮಂದಿರೆಲ್ಲ ಸೇರಿ ಒಟ್ಟು 3 ಲಕ್ಷ ಹೊಂದಿಸಿ ತಮ್ಮನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನಪಟ್ರೂ 35 ವರ್ಷದ ತಮ್ಮನನ್ನು ಬದುಕಿಕೊಳ್ಳಲಾಗಲಿಲ್ಲ.

ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ವಿ. 97ರಷ್ಟು ಆ್ಯಕ್ಸಿಜೆನ್ ಇತ್ತು, ಊಟ ಮಾಡಿ‌ ಬರುವಷ್ಟರಲ್ಲಿ 70ಕ್ಕೆ ಬಂದು ತೀರಿಕೊಂಡಿದ್ದಾನೆ. ಶುಗರ್ ಇದೆ, ಯೂರಿನ್ ಇನ್ಫೆಕ್ಷನ್ ಇದೆ ಅಂತಾ ಡಾಕ್ಟರ್ ಹೇಳ್ತಿದ್ರು. ಆದ್ರೆ ನನ್ನ ತಮ್ಮನಿಗೆ ಜ್ವರ, ಕೆಮ್ಮು‌ ಬಿಟ್ರೆ ಬೇರೆ ತೊಂದರೆ ಇರಲಿಲ್ಲ. ಜನರಲ್ ವಾರ್ಡ್, ಐಸಿಯು ವಾರ್ಡ್ ಅಂತ 2 ಲಕ್ಷ 65 ಸಾವಿರ ಬಿಲ್ ಮಾಡಿದ್ದಾರೆ. ಬಿಲ್ ಕ್ಲಿಯರ್ ಮಾಡುವವರೆಗೂ ಮೃತ ದೇಹ ಕೊಡಲ್ಲ ಅಂದ್ರು. ಎಷ್ಟೇ ಪ್ರಯತ್ನ ಪಟ್ರೂ ತಮ್ಮನನ್ನ ಉಳಿಸಿಕೊಳ್ಳೋಕೆ ಆಗ್ಲಿಲ್ಲ ಎಂದು ಮೃತ ವ್ಯಕ್ತಿಯ ಅಣ್ಣ ಕಣ್ಣೀರು ಹಾಕಿದ್ದಾರೆ. ಮೃತನ ಕುಟುಂಬ ಓಡಿಶಾದಲ್ಲಿದ್ದು, 7 ವರ್ಷದ ಮಗನಿದ್ದಾನೆ. ಹಣ ಇದ್ರೆ ಏನು ಬೇಕಾದ್ರೂ ಮಾಡಬಹುದು ಎಂದುಕೊಳ್ಳುವ ಜನ ಪ್ರಾಣವನ್ನು ಮಾತ್ರ ಖರೀದಿ ಮಾಡೋಕೆ ಆಗಲ್ಲ. ಆದ್ರೆ ಲೋಟಿ ಮಾಡಲು ನಿಂತ ಆಸ್ಪತ್ರೆಗಳು ಹಣದ ಹಿಂದೆ ಬಿದ್ದಿವೆ.

ಇದನ್ನೂ ಓದಿ: Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್​ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು