ನೆಲಮಂಗಲದ ನವಯುಗ ಟೋಲ್ ಬಳಿ ಸಿಕ್ಕಾಪಟ್ಟೆ ಟ್ರಾಫಿಕ್​: ಮೈಲು​​ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು

ಪಟ್ಟಣದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಕಂಡುಬಂತು. ಇದರ ಪರಿಣಾಮವಾಗಿ ಕಿಲೋ ಮೀಟರ್​​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಹಾಗಾಗಿ, ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಅತ್ತ, ಪಟ್ಟಣದ ನವಯುಗ ಟೋಲ್ ರಸ್ತೆಯಲ್ಲೂ ಟ್ರಾಫಿಕ್​ ಜಾಮ್ ಕಂಡುಬಂತು.

  • TV9 Web Team
  • Published On - 21:54 PM, 7 Mar 2021
ನೆಲಮಂಗಲದ ನವಯುಗ ಟೋಲ್ ಬಳಿ ಸಿಕ್ಕಾಪಟ್ಟೆ ಟ್ರಾಫಿಕ್​: ಮೈಲು​​ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು
ನವಯುಗ ಟೋಲ್ ಬಳಿ ಸಿಕ್ಕಾಪಟ್ಟೆ ಟ್ರಾಫಿಕ್

ನೆಲಮಂಗಲ: ಪಟ್ಟಣದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಕಂಡುಬಂತು. ಇದರ ಪರಿಣಾಮವಾಗಿ ಕಿಲೋ ಮೀಟರ್​​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಹಾಗಾಗಿ, ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಅತ್ತ, ಪಟ್ಟಣದ ನವಯುಗ ಟೋಲ್ ರಸ್ತೆಯಲ್ಲೂ ಟ್ರಾಫಿಕ್​ ಜಾಮ್ ಕಂಡುಬಂತು.

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಸೋಫಾ ಅಂಗಡಿ
ಇತ್ತ, ಆಕಸ್ಮಿಕ ಬೆಂಕಿಗೆ ಸೋಫಾ ಅಂಗಡಿ ಒಂದು ಹೊತ್ತಿ ಉರಿದ ಪ್ರಸಂಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. 3 ಅಂಗಡಿಗಳಿಗೆ ಬೆಂಕಿ ಆವರಿಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಶೆಟರ್ ವೆಲ್ಡಿಂಗ್ ಮಾಡುವಾಗ ಅಂಗಡಿಗೆ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.

BNG SHOP FIRE 1

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಸೋಫಾ ಅಂಗಡಿ

ವೀರನಾರಾಯಣ ದೇಗುಲದ ಬಳಿ ಹೊತ್ತಿ ಉರಿದ ಸ್ಕೂಟಿ
ಆಕಸ್ಮಿಕ ಬೆಂಕಿಯಿಂದ ದ್ವಿಚಕ್ರ ವಾಹನವೊಂದು ಹೊತ್ತಿ ಉರಿದ ಘಟನೆ ಗದಗ ನಗರದ ವೀರನಾರಾಯಣ ದೇಗುಲದ ಬಳಿ ನಡೆದಿದೆ. ಅವಘಡದಲ್ಲಿ ಇಮಾಮ್​ಸಾಬ್ ಕರೆಕಾಯಿ ಎಂಬುವವರ ಸ್ಕೂಟಿ ಭಸ್ಮವಾಯಿತು. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

GDG BIKE FIRE 2

ವೀರನಾರಾಯಣ ದೇಗುಲದ ಬಳಿ ಹೊತ್ತಿ ಉರಿದ ಸ್ಕೂಟಿ

ಇದನ್ನೂ ಓದಿ: ‘ಅಧಿಕಾರದಲ್ಲಿದ್ದಾಗ ಕಾಂಗ್ರೆಸಿಗರು ಬ್ಲ್ಯಾಕ್‌ಮನಿ ಮಾಡುತ್ತಿದ್ರು.. ಈಗ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ’