ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಬಿಎಂಟಿಸಿ ಕಲೆಕ್ಷನ್ಗೆ ಹೊಡೆತ
ಬಿಎಂಟಿಸಿಯ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಶೇ 50 ಕ್ಕಿಂತ ಹೆಚ್ಚಿನ ಪ್ರಯಾಣಿಕರು ಕೇವಲ 4 ಕಿಮೀ ಪ್ರಯಾಣಿಸಲು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಶೇ 80 ರಷ್ಟು ಜನ ಪ್ರಯಾಣಿಕರು 10 ಕಿಮೀ ಅಥವಾ ಅದಕ್ಕಿಂತ ಕಡಿಮೆ ಪ್ರಯಾಣಿಸಲು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ.
ಬೆಂಗಳೂರು ನ.07: ನಮ್ಮ ಮೆಟ್ರೋ (Namma Metro) ಮಾರ್ಗ ವಿಸ್ತರಣೆಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಹೊಡೆತ ಬೀಳುತ್ತಿದೆ. ಬಿಎಂಟಿಸಿ ಬಸ್ಗಳು ನಗರದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುತ್ತವೆ. ಮೊದಲು ದೂರದ ಪ್ರಯಾಣಕ್ಕಾಗಿ ಜನರು ಬಿಎಂಟಿಸಿಯನ್ನು ಅವಲಂಬಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಾಗುತ್ತಿರುವುದರಿಂದ ದೂರದ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಬಿಎಂಟಿಸಿಯ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಶೇ 50 ಕ್ಕಿಂತ ಹೆಚ್ಚಿನ ಪ್ರಯಾಣಿಕರು ಕೇವಲ 4 ಕಿಮೀ ಪ್ರಯಾಣಿಸಲು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಶೇ 80 ರಷ್ಟು ಜನ ಪ್ರಯಾಣಿಕರು 10 ಕಿಮೀ ಅಥವಾ ಅದಕ್ಕಿಂತ ಕಡಿಮೆ ಪ್ರಯಾಣಿಸಲು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಊದಾಹರಣೆಗೆ: ಮೊದಲು ಕೆಂಗೆರಿಯಿಂದ ಬೈಯಪ್ಪನಹಳ್ಳಿವರೆಗೆ ಮಾತ್ರ ನೇರಳೆ ಮಾರ್ಗ ಕಾರ್ಯನಿರ್ವಹಿಸುತ್ತಿತ್ತು. ಕಾಡುಗೋಡಿ (ವೈಟ್‌ಫೀಲ್ಡ್)ಗೆ ತೆರಳುವ ಜನರು ಬೈಯಪ್ಪನಹಳ್ಳಿಯಲ್ಲಿ ಇಳಿದುಕೊಂಡು ಬಿಎಂಟಿಸಿ ಬಸ್ನಲ್ಲಿ ಹೋಗುತ್ತಿದ್ದರು. ಪ್ರಯಾಣದ ದೂರ 15 ಕಿಮೀ ಆಗಿದೆ. ಆದರೆ ಇದೀಗ ಚಲ್ಲಘಟ್ಟದಿಂದ ಕಾಡುಗೋಡಿಗೆ (ವೈಟ್‌ಫೀಲ್ಡ್) ಸಂಪೂರ್ಣ ನೇರಳೆ ಮಾರ್ಗವು ಕಾರ್ಯಾರಂಭ ಮಾಡಿದೆ. ಇದರಿಂದ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಟಿಕೆಟ್ ಕಲೆಕ್ಷನ್ಗೆ ಹೊಡೆತ ಬಿದ್ದಿದೆ.
ಈ ಬಗ್ಗೆ ಬಿಎಂಟಿಸಿ ಅಧಿಕಾರಿ ವಿಶ್ವನಾಥ್ ಕೆಆರ್ ಮಾತನಾಡಿ, ಹೊಸ ಮಾರ್ಗ ಆರಂಭವಾಗಿದ್ದರಿಂದ ಜನರು ದೂರದ ಪ್ರಯಾಣಕ್ಕಾಗಿ ಮೆಟ್ರೊ ಅವಲಂಬಿಸಿದ್ದಾರೆ ಮತ್ತು ಕಡಿಮೆ ದೂರದ ಪ್ರಯಾಣಕ್ಕಾಗಿ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಿದ್ದಾರೆ. ನಾವು ಎರಡೂ ಸಾರ್ವಜನಿಕ ಸಾರಿಗೆಗಳು ಒಂದಕ್ಕೊಂದು ಪೂರಕವಾಗುವಂತೆ ಫೀಡರ್ ಸೇವೆಗಳನ್ನು ನಡೆಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಅಗತ್ಯವಿರುವ ಮಾರ್ಗಗಳಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸಲು ಚಿಂತಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆಯಿಂದ ಗ್ರೀನ್ ಸಿಗ್ನಲ್
ಹಂತ ವಾರು: (ಒಂದು ಹಂತವು ಸರಿಸುಮಾರು 2 ಕಿಮೀ ದೂರ) ಶೇ 25.3 ರಷ್ಟು ಪ್ರಯಾಣಿಕರು 2 ಕಿಮೀ ದೂರವನ್ನು ಪ್ರಯಾಣಿಸಲು ರೂ 5 ಪಾವತಿಸಿದರೆ, ಶೇ 26.1 ರಷ್ಟು ಜನರು 4 ಕಿಮೀ ವರೆಗೆ ಪ್ರಯಾಣಿಸಲು ರೂ 10 ಪಾವತಿಸುತ್ತಾರೆ. ಶೇ 13.3 ರಷ್ಟು ಜನರು 6 ಕಿಮೀ ವರೆಗೆ ಪ್ರಯಾಣಿಸಲು 15 ರೂ. ಪಾವತಿಸುತ್ತಾರೆ. BMTCಯ ಹಂತ 2 ರಿಂದ ಹಂತ 36 ರವರೆಗೆ (2ಕಿಮೀ ನಿಂದ 72 ಕಿಮೀ) ಬಸ್‌ಗಳನ್ನು ನಿರ್ವಹಿಸುತ್ತದೆ. ಪ್ರಯಾಣ ದರ 5 ರಿಂದ 30 ರೂ. ಆಗಿದೆ ಎಂದರು.
ಸುಮಾರು 90 ರಷ್ಟು ಪ್ರಯಾಣಿಕರು 20 ರೂ. ಟಿಕೆಟ್ ದರವನ್ನು ಪಾವತಿಸುವ ಮೂಲಕ ಗರಿಷ್ಠ 14 ಕಿಮೀ ದೂರವನ್ನು ಪ್ರಯಾಣಿಸುತ್ತಾರೆ. 25ಕ್ಕಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನು ಖರೀದಿಸುವ ಜನರ ಪ್ರಮಾಣವು ಶೇ 10 ರಷ್ಟು ಮಾತ್ರ ಇದೆ ಎಂದು ಅಧಿಕಾರಿ ಹೇಳಿದರು.
ಮೆಟ್ರೋ ಸವಾರರ ಸಂಖ್ಯೆ ಹೆಚ್ಚಿದ್ದರಿಂದ ಬಿಎಂಟಿಸಿ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಗಮನಾರ್ಹ ಪರಿಣಾಮ ಬೀರಿಲ್ಲ. ಬಸ್ ಪಾಸ್ ಹೊಂದಿರುವವರು ಸೇರಿದಂತೆ ಪ್ರತಿದಿನ 43 ಲಕ್ಷ ಪ್ರಯಾಣಿಕರು ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ನಮ್ಮ ಮೆಟ್ರೋ 73 ಕಿಮೀ ಕಾರ್ಯಾಚರಣೆಯ ಜಾಲವನ್ನು ಹೊಂದಿದೆ ಮತ್ತು ಸಂಪೂರ್ಣ ನೇರಳೆ ಮಾರ್ಗವನ್ನು ತೆರೆದ ನಂತರ ಅದರ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷದ ಗಡಿಯನ್ನು ದಾಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ