ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಶಂಕಿತರ ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು

ವಿದೇಶದಲ್ಲಿ ಅರ್ಭಿಟಿಸುತ್ತಿರುವ ಮಂಕಿಪಾಕ್ಸ್ ಈಗ ಭಾರತಕ್ಕೂ ಕಾಲಿಟ್ಟಿದೆ. ಮೊದಲ ಪ್ರಕರಣ ದೇಶದಲ್ಲಿ ಕಂಡು ಬರುತ್ತಿದ್ದಂತೆಯೇ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಮುನ್ನೆಚ್ಚರಿಕೆ ದೃಷ್ಟಿಯಿಂದ ಟೆಸ್ಟಿಂಗ್- ಟ್ರ್ಯಾಕಿಂಗ್, ಸ್ಕ್ರೀನಿಂಗ್ ಆರಂಭಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತರ ಟೆಸ್ಟಿಂಗ್- ಟ್ರ್ಯಾಕಿಂಗ್, ಸ್ಕ್ರೀನಿಂಗ್ ಶುರುವಾಗಿದೆ.

ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಶಂಕಿತರ ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು
ಸಾಂದರ್ಭಿಕ ಚಿತ್ರImage Credit source: Getty Images
Follow us
Vinay Kashappanavar
| Updated By: Ganapathi Sharma

Updated on: Sep 13, 2024 | 7:17 AM

ಬೆಂಗಳೂರು, ಸೆಪ್ಟೆಂಬರ್ 13: ಮಂಕಿಪಾಕ್ಸ್ ಮತ್ತೆ ಬಾಲ ಬಿಚ್ಚಿದೆ. ನೂರಾರು ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿಪಡೆದಿರುವ ಹೆಮ್ಮಾರಿ ಮಂಕಿಪಾಕ್ಸ್ ಈಗ ಭಾರತಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ದಿನಗಳ ಹಿಂದೆ ಕೇಸ್ ವರದಿಯಾಗುತ್ತಿದ್ದಂತೆಯೇ ರಾಜ್ಯ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಆರಂಭದಲ್ಲಿಯೇ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ರಾಜಧಾನಿಯಲ್ಲಿ ಮಂಕಿಪಾಕ್ಸ್​​​ಗೆ ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ಶುರು ಮಾಡಲಾಗಿದೆ.

ಮಂಕಿಪಾಕ್ಸ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಪಾಸಿಟಿವ್ ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್​ಗೆ ಒಳಪಡಿಸಲು ತಿಳಿಸಿದೆ.‌ ಮಂಕಿಪಾಕ್ಸ್ ಗುಣಲಕ್ಷಣಗಳು ಇದ್ದರೆ ಐಸೊಲೇಷನ್​ನಲ್ಲಿ ಇಡಲು ತಿಳಿಸಲಾಗಿದೆ. ಸಿಲಿಕಾನ್ ಸಿಟಿಗೆ ದಿನನಿತ್ಯ ಬೇರೆ ದೇಶದಿಂದ ಬರುವ ನೂರಾರು ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಶಂಕಿತರ ಟ್ರ್ಯಾಕಿಂಗ್ ಮಾಡಲಾಗುತ್ತದೆ.

ಏರ್​ಪೋರ್ಟ್​ನಲ್ಲಿ ಕಣ್ಗಾವಲು ಅಧಿಕಾರಿ ನೇಮಕ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸರ್ವೈಲೆನ್ಸ್ ಆಫೀಸರ್​​ಗಳ (ಕಣ್ಗಾವಲು ಅಧಿಕಾರಿ) ನೇಮಕ ಮಾಡಿದ್ದು ಏರ್ ಪೋರ್ಟ್​​ನಲ್ಲಿ ಟೆಸ್ಟಿಂಗ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಮಂಕಿಪಾಕ್ಸ್ ಗುರುತಿಸಲು ಹಾಗೂ ಅದನ್ನ ಟ್ರಾಕಿಂಗ್ ಟೆಸ್ಟಿಂಗ್ ಮಾಡಲು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೂಡಾ ನೀಡಲಾಗುತ್ತಿದ್ದು, ಟಾಸ್ಕ್ ಫೋರ್ಸ್ ತಜ್ಞರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.

ಮಂಕಿಪಾಕ್ಸ್ ಶಂಕಿತರು ಕಂಡುಬಂದರೆ ಅಂತಹವರ ಮಾದರಿಯನ್ನು ಬಿಎಂಸಿ ಲ್ಯಾಬ್​ಗೆ ಕಳಿಸಲು ಆರೋಗ್ಯ ಇಲಾಖೆ ಸೂಚಿಸಿದ್ದು, ಪಾಸಿಟಿವ್ ಕಂಡುಬಂದರೆ 21 ದಿನಗಳ ಕ್ವಾರಂಟೈನ್ ಮಾಡಲು ಇಲಾಖೆ ಮುಂದಾಗಿದೆ. ಮೈ ಮೇಲೆ ದದ್ದು, ಜ್ವರ, ತೀವ್ರವಾದ ತಲೆನೋವು, ಬೆನ್ನುನೋವು, ಸ್ನಾಯು ಸೆಳೆತ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸುವಂತೆ ಇಂದಿರಾ ಗಾಂಧಿ ಆಸ್ಪತ್ರೆ ನಿರ್ದೇಶಕ, ತಜ್ಞ ವೈದ್ಯರಾದ ಡಾ ಸಂಜಯ್ ಸಲಹೆ ನೀಡಿದ್ದಾರೆ.

ಮಂಕಿಪಾಕ್ಸ್ ಗುಣಲಕ್ಷಣಗಳೇನು?

  • ದೇಹದ ಮೇಲೆ ಗುಳ್ಳೆ ಥರದ ದದ್ದುಗಳು
  • ಮೈ ಮೇಲೆ ಗುಳ್ಳೆಗಳ ಜತೆ ಜ್ವರ
  • ತೀವ್ರವಾದ ತಲೆನೋವು
  • ಬೆನ್ನು ನೋವು, ಸ್ನಾಯು ಸೆಳೆತ
  • 2 ವಾರದಿಂದ 4 ವಾರಗಳ ಕಾಲ ಬಾಧಿಸುವ ರೋಗ
  • ಅಂಗೈ, ಪಾದಗಳ ಮೇಲೆ ವ್ಯಾಪಕವಾದ ದದ್ದುಗಳು

ಇದನ್ನೂ ಓದಿ: ಮಂಕಿಪಾಕ್ಸ್ ವೈರಸ್ ನಿಂದ ಅಪಾಯವಿದೆಯೇ? ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ತಿಳಿದುಕೊಳ್ಳಿ

ಒಟ್ಟಿನಲ್ಲಿ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಾಗಿದೆ. ಹೀಗಾಗಿ ಜನರು ದೇಹದ ಮೇಲೆ ಗುಳ್ಳೆ ಥರದ ರಾಶ್, ಜ್ವರ, ತೀವ್ರವಾದ ತಲೆನೋವು, ಬೆನ್ನು ನೋವು, ಸ್ನಾಯು ಸೆಳೆತ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು. ಮಂಕಿಪಾಕ್ಸ್​​ಗೆ ನಿರ್ದಿಷ್ಟ ಚಿಕಿತ್ಸೆ ಜೊತೆಗೆ ಔಷಧಿ ಇಲ್ಲದ ಕಾರಣ ಮುನ್ನೆಚ್ಚರಿಕೆಯೇ ಇದಕ್ಕೆ ಕಡಿವಾಣ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ