12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ – ಸಂಸದ ತೇಜಸ್ವಿ ಸೂರ್ಯ
Bengaluru Hospital Beds: ಬಿಬಿಎಂಪಿಯ ಅಧಿಕಾರಿಗಳ ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆ ವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5,000 ಬೆಡ್ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಬೆಂಗಳೂರು: ಬಿಬಿಎಂಪಿ ಕೊವಿಡ್ ವಾರ್ ರೂಂನಲ್ಲಿ ಏಜೆನ್ಸಿಯವರು ಹೋಂ ಐಸೋಲೇಶನ್ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ. ಬೆಡ್ನ ಕೃತಕ ಅಭಾವ ಸೃಷ್ಟಿಸಿ 4 ಸಾವಿರಕ್ಕೂ ಹೆಚ್ಚು ಬೆಡ್ಗಳ ಅವ್ಯವಹಾರ ಬೆಂಗಳೂರಿನಾದ್ಯಂತ ನಡೆಯುತ್ತಿದೆ. ಓರ್ವ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ಕಿಂಗ್ ಆಗಿದೆ. ರಾತ್ರೋರಾತ್ರಿ ಈ ಅವ್ಯವಹಾರ ನಡೆಯುತ್ತಿದೆ. ಇದು ಭ್ರಷ್ಟಾಚಾರ ಅಲ್ಲ, ಕೊಲೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.
ಬೆಂಗಳೂರಿನಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂಬುದು ಖಚಿತವಾದ ತಕ್ಷಣ ಬಿಯು ನಂಬರ್ ವಾರ್ ರೂಂಗೆ ಬರುತ್ತದೆ. ಉದಾಹರಣೆಗೆ ಬಸವನಗುಡಿ ನಿವಾಸಿಗೆ ಸೋಂಕು ಖಚಿತವಾದ ತಕ್ಷಣ ಬೆಂಗಳೂರು ಸೌತ್ ವಾರ್ ರೂಂಗೆ ವಿವರ ಹೋಗುತ್ತೆ. ತಕ್ಷಣ ವಾರ್ ರೂಂನಿಂದ ಸೋಂಕಿತರಿಗೆ ಕರೆ ಮಾಡಿ ಕೊರೊನಾ ಲಕ್ಷಣಗಳು ಇವೆಯೇ ಎಂದು ವಿಚಾರಿಸಲಾಗುತ್ತದೆ. ಹೋಂ ಐಸೋಲೆಶನ್ನಲ್ಲಿ ಇರುವವರ ಹೆಸರಲ್ಲಿ ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತ ಅಧಿಕಾರಿಗಳು ಆಸ್ಪತ್ರೆಗಳ ಬೆಡ್ಗಳನ್ನು ಬ್ಲಾಕ್ ಮಾಡ್ತಾರೆ. ಅವರ್ಯಾರೂ ಸರ್ಕಾರಿ ಅಧಿಕಾರಿಗಳಲ್ಲ. ಯಾವುದೋ ಏಜೆನ್ಸಿಯವರು. ಹೋಂ ಐಸೋಲೇಶನ್ನಲ್ಲಿ ಇರುವವರ ಹೆಸರಲ್ಲಿ ಬೆಡ್ ಬ್ಲಾಕ್ ಮಾಡಿದ ತಕ್ಷಣ ಸಾರ್ವಜನಿಕರಿಗೆ ಬೆಡ್ ಇಲ್ಲ ಎಂದು ವೆಬ್ಸೈಟ್ನಲ್ಲಿ ತೋರಿಸುತ್ತದೆ. ಆದರೆ ನಿಜಕ್ಕೂ ಆ ಬೆಡ್ ಖಾಲಿ ಇರುತ್ತೆ. ಹೀಗೆ ಬೆಡ್ ಅವ್ಯವಸ್ಥೆ ಇದೆ ಎಂದು ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಅವರು ದೂರಿದರು.
ಕೃತಕ ಅಭಾವ ಸೃಷ್ಟಿ ಹೇಗೆ? ಎ ಸಿಂಪ್ಟಮ್ಯಾಟಿಕ್ ಬಂದಿರುವ ವ್ಯಕ್ತಿಯ ಹೆಸರಿನಲ್ಲಿ ಬೆಡ್ ಬುಕ್ ಮಾಡಲಾಗುತ್ತೆ. 12 ಗಂಟೆಗಳ ನಡುವೆ ಯಾರ ಹೆಸರಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಆ ಬೆಡ್ ಅವರ ಹೆಸರಿಂದ ಅನ್ ಬ್ಲಾಕ್ ಆಗುತ್ತೆ. ಆದರೆ 12 ಗಂಟೆಯ ಒಳಗೆ ವಾರ್ ರೂಂನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿ ಅಂಥವರಿಗೆ ಬೆಡ್ ಕೊಡ್ತಾರೆ. ಎ ಸಿಂಪ್ಟಮ್ಯಾಟಿಕ್ ಇರುವ ವ್ಯಕ್ತಿಯ ಹೆಸರಲ್ಲಿ ಬೆಡ್ ಬುಕ್ ಆಗಿರುವ ಕುರಿತು ಅಂತಹ ವ್ಯಕ್ತಿಗೇ ತಿಳಿದಿರುವುದಿಲ್ಲ. ಅಂತಹ ಹಲವು ದಾಖಲೆಗಳು ನಮ್ಮಲ್ಲಿವೆ. ಓರ್ವ ವ್ಯಕ್ತಿಗೆ ಕೊರೊನಾ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಾರ್ ರೂಂ ಏಜೆನ್ಸಿಗಳು ಬೆಡ್ಗಲ ಕೃತಕ ಅಭಾವ ಸೃಷ್ಟಿಸುತ್ತಿವೆ ಎಂದು ಅವರು ದೂರಿದರು.
ಬಿಬಿಎಂಪಿಯ ಅಧಿಕಾರಿಗಳ ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆ ವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5,000 ಬೆಡ್ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಮೆರಿಟ್ ಆಧಾರದ ಮೇಲೆ ಎಸ್ಓಪಿ ಕಡಿಮೆ ಆದ ರೋಗಿಗೆ ಆದ್ಯತೆ ಕೊಡಬೇಕು. ಒಬ್ಬ ಸಂಸದನಾಗಿ ನಾನು ಒಂದು ಬೆಡ್ ಕೊಡಿಸುವೆ ಎಂದು ನಾನು ಹೇಳಲು ಆಗುತ್ತಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ದೂರವಾಣಿ ಮೂಲಕ ವಿವರಿಸಿದ್ದೇನೆ. ಈ ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕಿದೆ. ಸಿಎಂ ಯಡಿಯೂರಪ್ಪ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿವರಿಸಿದರು.
ಅಮಿತ್ ಎಂಬಾತ್ ಮೇಲ್ಮಟ್ಟದ ಅಪೀಸ್ ಜತೆ ಮಾತಾಡಿ ಹೇಳ್ತಿನಿ ಅಂತಾನೆ. 25 ಸಾವಿರ ಹಣ ಗೂಗಲ್ ಪೇ ಮಾಡಿಸಿಕೊಳ್ತಾನೆ. ಅಮಿತ್ ಎಂಬಾತನನ್ನು ಈಗಾಗಲೇ ಪೋಲಿಸರು ಬಂಧಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಈಗಾಗಲೇ 780 ವೆಂಟಿಲೇಟರ್ಗಳು ಬಂದಿವೆ. ಆದರೂ ಅವುಗಳು ಉಪಯೋಗವಾಗುತ್ತಿಲ್ಲ ಎಂದು ಶಾಸಕರಾದ ಉದಯ ಗರುಡಾಚಾರ್ ಮತ್ತು ಸತೀಶ್ ರೆಡ್ಡಿ ವಿವರಿಸಿದರು.
ಇದನ್ನೂ ಓದಿ: ಹೈದರಾಬಾದ್ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು
ರಾಜ್ಯದಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆ; ಬೆಂಗಳೂರು, ಚಿತ್ರದುರ್ಗದ ಆಸ್ಪತ್ರೆಗಳಲ್ಲಿ ತಲೆದೋರಿದ ಸಮಸ್ಯೆ (MP Tejasvi Surya accused BBMP war room officers to artificial bed deprivation)