ದೇವನಹಳ್ಳಿ ಏರ್​​ಪೋರ್ಟ್​​ನಲ್ಲಿ ಕಸ್ಟಮರಿ ಕಾರ್ಯಾಚರಣೆ; ದುಬೈನಿಂದ ರಾಡ್, ಸ್ಕ್ರೂನಲ್ಲಿ ತಂದಿದ್ದ 360 ಗ್ರಾಂ ಚಿನ್ನ ಜಪ್ತಿ

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​​ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ತಂದಿದ್ದ 360 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

  • TV9 Web Team
  • Published On - 14:38 PM, 4 Mar 2021
ದೇವನಹಳ್ಳಿ ಏರ್​​ಪೋರ್ಟ್​​ನಲ್ಲಿ ಕಸ್ಟಮರಿ ಕಾರ್ಯಾಚರಣೆ; ದುಬೈನಿಂದ ರಾಡ್, ಸ್ಕ್ರೂನಲ್ಲಿ ತಂದಿದ್ದ 360 ಗ್ರಾಂ ಚಿನ್ನ ಜಪ್ತಿ
ಸಾಂದರ್ಭಿಕ ಚಿತ್ರ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​​ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ತಂದಿದ್ದ 360 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮಕಬುಲ್ ಮೊಹಮದ್ ಉಪಾಯ ಮಾಡಿ ರಾಡ್, ಸ್ಕ್ರೂಗಳಲ್ಲಿ ಅಕ್ರಮವಾಗಿ ಚಿನ್ನ ತಂದಿದ್ದರು. ಬ್ಯಾಗೇಜ್ ಚೆಕಿಂಗ್ ವೇಳೆ ಅನುಮಾನಗೊಂಡು ಪರಿಶೀಲಿಸಿದಾಗ ಚಿನ್ನ ವಶಕ್ಕೆ ಪಡೆಯಲಾಗಿದೆ.

ಒಟ್ಟು 42 ಸ್ಕ್ರೂಗಳಲ್ಲಿ ಆರೋಪಿ ಮಕಬುಲ್ ಮೊಹಮದ್ ಚಿನ್ನ ತುಂಬಿಕೊಂಡು ಬಂದಿದ್ದನು. 17 ಲಕ್ಷ 14 ಸಾವಿರದ 219 ರೂಪಾಯಿ ಮೌಲ್ಯದ 360. ಗ್ರಾಂ ಚಿನ್ನವನ್ನು ಬ್ಯಾಗ್​ ಚೆಕ್ಕಿಂಗ್​ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಲಾಗಿದೆ. ಸ್ಕ್ರೂ ಮತ್ತು ರಾಡ್​ಗಳಲ್ಲಿ ಅಡಗಿಸಿಕೊಂಡಿದ್ದ ಚಿನ್ನವನ್ನು ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!

ಇದನ್ನೂ ಓದಿ: ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನ ವಶ, ವಿಮಾನ ನಿಲ್ದಾಣ ಯಾವುದು?