Kisan Samman Yojana | ಯೋಜನೆಯಲ್ಲಿ ಭಾರಿ ಅಕ್ರಮ, 85 ಸಾವಿರ ಖಾತೆಗಳು ಕಂಪ್ಲೀಟ್ ಬ್ಲಾಕ್, ಬೆಂಗಳೂರು ಸೈಬರ್​ ಠಾಣೆಗೆ ದೂರು

Kisan Samman Yojana | ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್​ ತೆರೆದು ವಂಚನೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯ ಪೋರ್ಟಲ್​ನಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ.

  • TV9 Web Team
  • Published On - 10:03 AM, 15 Feb 2021
Kisan Samman Yojana | ಯೋಜನೆಯಲ್ಲಿ ಭಾರಿ ಅಕ್ರಮ, 85 ಸಾವಿರ ಖಾತೆಗಳು ಕಂಪ್ಲೀಟ್ ಬ್ಲಾಕ್, ಬೆಂಗಳೂರು ಸೈಬರ್​ ಠಾಣೆಗೆ ದೂರು
ಕಿಸಾನ್ ಸಮ್ಮಾನ್​ ಯೋಜನೆ

ಬೆಂಗಳೂರು: ಕಿಸಾನ್ ಸಮ್ಮಾನ್​ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್​ ತೆರೆದು ವಂಚನೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯ ಪೋರ್ಟಲ್​ನಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ.

ವಂಚಕರ ಅಕ್ರಮ ಬಯಲು
ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್​ ತೆರೆದು ಕಿಸಾನ್​ ಸಮ್ಮಾನ್​ ಯೋಜನೆ ಪೋರ್ಟಲ್​ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಚಿತ್ರದುರ್ಗ, ಬೀದರ್ ವ್ಯಾಪ್ತಿಯಲ್ಲಿ ರುಬಿಯಾ ಖಾತುನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇದರ ಮೂಲಕ ಸಾವಿರಾರು ಬಾರಿ ಕೃಷಿ ಇಲಾಖೆಗೆ ಹಣಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಹೊರ ರಾಜ್ಯದ ಬ್ಯಾಂಕ್​ ಅಕೌಂಟ್ ಪತ್ತೆಯಾಗಿದೆ. ಪ.ಬಂಗಾಳದ ದಿನಾಜ್​ಪುರ್ ಖಾತೆ, ಐಎಫ್​ಎಸ್​ಸಿ ಕೋಡ್, ಬಿಹಾರದ ಪೂರ್ನಿಯಾದ ಖಾತೆ, ಐಎಫ್​ಎಸ್​ಸಿ ಕೋಡ್ ಪತ್ತೆಯಾಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 85 ಸಾವಿರ ಖಾತೆಗಳು ನಕಲಿ?
ಇನ್ನು ಸುಮಾರು 85 ಸಾವಿರ ಖಾತೆಗಳ ಮೇಲೆ ಕೃಷಿ ಇಲಾಖೆಗೆ ಶಂಕೆ ವ್ಯಕ್ತವಾಗಿದೆ. ಕೂಡಲೇ ಈ ಬಗ್ಗೆ ಬೆಂಗಳೂರಿನ ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 85 ಸಾವಿರ ಶಂಕಿತ ಖಾತೆಗಳು ಕಂಪ್ಲೀಟ್ ಬ್ಲಾಕ್ ಮಾಡಲಾಗಿದೆ. ಬಿಹಾರ, ಉತ್ತರಪ್ರದೇಶ, ಬಂಗಾಳದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಅನುಮಾನ ಅಧಿಕಾರಿಗಳು ಹುಟ್ಟಿದೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಕೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಅರ್ಧದಷ್ಟು ರೈತರಿಗೆ ಮಾತ್ರವೇ ಕಿಸಾನ್ ‘ಸಮ್ಮಾನ್’! ಏನಾಯ್ತು ಮೋದಿ ಮಹತ್ವಾಕಾಂಕ್ಷೆ ಯೋಜನೆ?