ಮಸಾಜ್ ಪಾರ್ಲರ್‌ ಹೆಸರಿನಲ್ಲಿ ಸುಲಿಗೆ: 6 ಆರೋಪಿಗಳ ಬಂಧನ

ಮಸಾಜ್​ ಪಾರ್ಲರ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ, ಮನುಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

  • TV9 Web Team
  • Published On - 11:18 AM, 22 Jan 2021
ಮಸಾಜ್ ಪಾರ್ಲರ್‌ ಹೆಸರಿನಲ್ಲಿ ಸುಲಿಗೆ: 6 ಆರೋಪಿಗಳ ಬಂಧನ
ರಘು, ಮೈಕಲ್ ರಾಜ್, ಶಿವಕುಮಾರ್, ಮನುಕುಮಾರ್ ಬಂಧಿತ ಆರೋಪಿಗಳು.

ಬೆಂಗಳೂರು: ಮಸಾಜ್​ ಪಾರ್ಲರ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ ಮತ್ತು ಮನುಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಮಸಾಜ್​ ಪಾರ್ಲರ್​ ತೆರೆದು, ಜನರನ್ನು ಸೆಳೆಯುತ್ತಿದ್ದರು. ಪಾರ್ಲರ್​ಗೆ ಬರುತ್ತಿದ್ದ ಯುವತಿಯರ ಜೊತೆ ಅಶ್ಲೀಲ ಫೋಟೋ ತೆಗೆದು ಹೆದರಿಸುತ್ತಿದ್ದರು. ಗ್ರಾಹಕನಾಗಿ ಬಂದ ಯುವಕನೊಬ್ಬನಿಗೆ ಹೆದರಿಸಿ, 4.75 ಸಾವಿರ ರೂ. ಹಣ ಹಾಗೂ ಚಿನ್ನಾಭರಣ ದೋಚಿದ್ದರು. ಈ ನಿಟ್ಟಿನಲ್ಲಿ ಯುವಕ, ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ತನಿಖೆ ನಡೆಸಿ 6 ಜನರನ್ನು ಬಂಧಿಸಿದ್ದಾರೆ.

ಸುಲಿಗೆ, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ