Kempegowda 513th Jayanti 2022: ಇಂದು (ಜೂನ್ 27) ವಿಧಾನಸೌಧದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ಪ್ರದಾನ
ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ಆಯ್ಕೆ ಆಗಿದ್ದಾರೆ.
ಬೆಂಗಳೂರು: ರಾಜ್ಯ ಇಂದು ನಾಡಪ್ರಭು ಕೆಂಪೇಗೌಡ (KempeGowda) ರ 513ನೇ ಜಯಂತಿ ಆಚರಿಸುತ್ತಿದೆ. ಹದಿನಾರನೇ ಶತಮಾನದಲ್ಲಿ ಬೆಂಗಳೂರು ನಗರವನ್ನು ಸೃಷ್ಟಿಸಿದ ಮಹಾಪುರಷನ ಸ್ಮರನಾರ್ಥವಾಗಿ ರಾಜ್ಯ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನ ಬೆಂಗಳೂರು ಹಬ್ಬ ಎಂದು ಘೋಷಣೆ ಕೂಡ ಮಾಡಿದೆ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಮೊದಲನೆಯ ಕೆಂಪೇಗೌಡರು ಯಲಹಂಕದಲ್ಲಿ ಜನಿಸಿದರು. ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುತ್ತಿರುತ್ತಾರೆ. ಬಾಲಕ ಕೆಂಪಯ್ಯನನ್ನು ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸುತ್ತಿರುತ್ತಾರೆ.
ಇದನ್ನೂ ಓದಿ: Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
ಇಂದು ಮೂವರಿಗೆ ಅಂತಾರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ಪ್ರದಾನ
ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಸರಕಾರವು ಕೊಡಮಾಡುವ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ (KempeGowda International Award) ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ಆಯ್ಕೆ ಆಗಿದ್ದು, ಇಂದು ಜೂನ್ 27ರಂದು ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮೂವರಿಗೂ ತಲಾ 5 ಲಕ್ಷ ರೂಪಾಯಿ ನಗದುಸಹಿತ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿಲಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಸಚಿವರಾದ ಡಾ. ಅಶ್ವಥ್ ನಾರಾಯಣ, ಆರ್. ಅಶೋಕ್, ಸುನೀಲ್ ಕುಮಾರ್, ಮುನಿರತ್ನ, ಗೋಪಾಲಯ್ಯ, ಸಂಸದರಾದ ತೇಜಸ್ವಿ ಸೂರ್ಯ, ಜಗ್ಗೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಗೋವಿಂದರಾಜ್, ಅ. ದೇವೇಗೌಡ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಕೃಷ್ಣಪ್ಪ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಬೆಂಗಳೂರು ನಿರ್ಮಾಣ:
ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ಬೆಂಗಳೂರನ್ನು ನಿರ್ಮಿಸಿದರು. ಕೆಂಪೇಗೌಡರ ತಾಯಿ ಕೆಂಪಾಂಬೆ ಮತ್ತು ಪತ್ನಿ ಚೆನ್ನಮಾಂಬೆ(ಸೋದರ ಮಾವನ ಮಗಳು) ಇಬ್ಬರೂ ಹಳೆ ಬೆಂಗಳೂರಿನವರು. ಹಾಗಾಗಿ ಇಬ್ಬರ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರಿಟ್ಟಿರೆಂಬುದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಈಗ ಬೆಂಗಳೂರು ನಗರ ಕರ್ನಾಟಕ ರಾಜ್ಯದಕೆಂಪೇಗೌಡರ ಕಾಲದಲ್ಲೂ ಬೆಂಗಳೂರು ವಾಣಿಜ್ಯ ಕೇಂದ್ರವಾಗಿತ್ತು. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ ಹೀಗೆ ಮುಂತಾಗಿ 54 ಪೇಟೆಗಳನ್ನು ನಾಡಪ್ರಭು ಕೆಂಪೇಗೌಡರು ಅಂದು ಅವರು ನಿರ್ಮಿಸಿದ್ದರು. ಈ ಪೈಕಿ ದೊಡ್ಡ ಪೇಟೆ ರಾಜಕಾರಣಕ್ಕೆ, ಚಿಕ್ಕಪೇಟೆ ವ್ಯಾಪಾರಕ್ಕೆ ಮೀಸಲಾಗಿದ್ದವು. ಈಗಲೂ ಈ ಕೆಲವು ಪೇಟೆಗಳ ಹೆಸರುಗಳನ್ನು ಗಮನಿಸಬಹುದು. ಕಾಲಕ್ಕೆ ತಕ್ಕಂತೆ ಪೇಟೆಯ ಸ್ವರೂಪ ಮತ್ತು ಚಟುವಟಿಕೆಗಳು ಬದಲಾಗಿವೆ.
ಇದನ್ನೂ ಓದಿ:Bhuvneshwar Kumar: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಚೆಂಡೆಸೆದ ಭುವಿ: ಫ್ಯಾನ್ಸ್ ಶಾಕ್..!
Published On - 12:10 pm, Mon, 27 June 22