ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಡಾ ಸುಧಾಕರ್ ಅವರು ನಾಯಿ ಕಡಿತದಿಂದ ಬರುವ ರೇಬೀಸ್ ಕಾಯಿಲೆಯನ್ನು 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೇಬೀಸ್ ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ ಎಂದಿದ್ದಾರೆ

ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್
ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ: ಆರೋಗ್ಯ ಸಚಿವ ಸುಧಾಕರ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 07, 2022 | 3:33 PM

ಬೆಂಗಳೂರು: ನಾಯಿ ಕಡಿತದಿಂದ (dog bite) ಬರುವ ರೇಬೀಸ್ ಕಾಯಿಲೆಯನ್ನು (rabies) 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೇಬೀಸ್ ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ (health minister Dr K Sudhakar) ತಿಳಿಸಿದ್ದಾರೆ. ಈ ಕ್ರಮದಿಂದ ರೇಬೀಸ್ ಪ್ರಕರಣಗಳ ವರದಿ ಮತ್ತು ಕಣ್ಗಾವಲು ವ್ಯವಸ್ಥೆ ಬಲಗೊಳ್ಳಲಿದ್ದು ರೇಬೀಸ್ ಅನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ರೇಬೀಸ್ ಎಂಬುದು ಕ್ರೋಧೋನ್ಮತ್ತ ಪ್ರಾಣಿಗಳ (ಮುಖ್ಯವಾಗಿ ನಾಯಿಗಳು) ಕಚ್ಚುವಿಕೆಯ ಮೂಲಕ ಹರಡುವ ಮಾರಣಾಂತಿಕ ವೈರಸ್ ರೋಗ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಡಾ ಸುಧಾಕರ್ ಅವರು ನಾಯಿ ಕಡಿತದಿಂದ ಬರುವ ರೇಬೀಸ್ ಕಾಯಿಲೆಯನ್ನು 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೇಬೀಸ್ ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ಈ ಕ್ರಮದಿಂದ ರೇಬೀಸ್ ಪ್ರಕರಣಗಳ ವರದಿ & ಕಣ್ಗಾವಲು ವ್ಯವಸ್ಥೆ ಬಲಗೊಳ್ಳಲಿದ್ದು ರೇಬೀಸ್ ಅನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಲಿದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ರೇಬೀಸ್ ಅಧಿಸೂಚಿತ ಕಾಯಿಲೆ, ಏನು ಹಾಗೆಂದರೆ?

ರೇಬೀಸ್ ಅನ್ನು ಇನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿರುವುದರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು (ವೈದ್ಯಕೀಯ ಕಾಲೇಜುಗಳು ಸೇರಿದಂತೆ) ಎಲ್ಲಾ ಶಂಕಿತ, ಸಂಭವನೀಯ ಮತ್ತು ದೃಢಪಡಿಸಿದ ಮಾನವ ರೇಬೀಸ್ ಪ್ರಕರಣಗಳನ್ನು ರಾಜ್ಯ ಆರೋಗ್ಯ ಇಲಾಖೆಗೆ ವರದಿ ಮಾಡುವುದು ಈಗ ಕಡ್ಡಾಯವಾಗಿದೆ.

“ನಿರ್ದಿಷ್ಟ ಪ್ರದೇಶದಿಂದ ರೇಬೀಸ್‌ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ಮೂಲನೆಯನ್ನು ಸಬಲವಾದ ಕಣ್ಗಾವಲು ಮತ್ತು ರೋಗ-ವರದಿ ವ್ಯವಸ್ಥೆಗಳ ಮೂಲಕ ಮಾತ್ರ ಸಾಧಿಸಬಹುದು. ಅಧಿಸೂಚನೆಯು ಸಂಪರ್ಕ-ಪತ್ತೆಹಚ್ಚುವಿಕೆಯನ್ನು ಸುಗಮಗೊಳಿಸುತ್ತದೆ ಮತ್ತು ಅದೇ ಮೂಲಕ್ಕೆ ಒಡ್ಡಿಕೊಂಡ ಇತರ ಜನರಲ್ಲಿ ಸೋಂಕನ್ನು ತಡೆಗಟ್ಟಲು ರೋಗನಿರೋಧಕ ಕ್ರಮಗಳನ್ನು ನೀಡುತ್ತದೆ. ಆದ್ದರಿಂದ ಮಾನವ ರೇಬೀಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ ಎಂದು ಡಿಸೆಂಬರ್ 5 ರಂದು ಹೊರಡಿಸಲಾದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರೇಬೀಸ್ ಭಾರತದಲ್ಲಿ ಪ್ರತಿ ವರ್ಷ ಸುಮಾರು 20,000 ಜನರನ್ನು ಕೊಲ್ಲುತ್ತದೆ, 60 % ರಷ್ಟು ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತವೆ. ದೇಶದಲ್ಲಿ ರೇಬೀಸ್ ಸಮಸ್ಯೆಯನ್ನು ಪರಿಹರಿಸಲು, 12 ನೇ ಪಂಚವಾರ್ಷಿಕ ಯೋಜನೆಯಿಂದ ದೇಶದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮವನ್ನು (NRCP) ಜಾರಿಗೊಳಿಸಲಾಗಿದೆ. ರೇಬೀಸ್ ಅತ್ಯಂತ ಹಳೆಯ, ಗುರುತಿಸಲ್ಪಟ್ಟ ಝೂನೋಟಿಕ್ (zoonotic disease) ಕಾಯಿಲೆಯಾಗಿದೆ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ) ಅತ್ಯಂತ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿದೆ.

ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಸಾರಾಂಶ ಹೀಗಿದೆ: In order to completely eliminate rabies by 2030 in the state, rabies is now declared a notifiable disease under The Karnataka Epidemic Diseases Act. This will facilitate contact tracing and prophylactic measures by strengthening surveillance and disease reporting systems.

Published On - 1:58 pm, Wed, 7 December 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್