ಬೆಂಗಳೂರು ಪೊಲೀಸರಿಂದ ಡೆಹರಾಡೂನ್​ನಲ್ಲಿ ರಾಘವೇಂದ್ರ ಸರ್ವಂ – ರಾಜೇಶ್ ವಂಚಕ ಜೋಡಿಯ ಅರೆಸ್ಟ್

420 ರಾಘವೇಂದ್ರ ಸರ್ವಂ ಹಾಗೂ ರಾಜೇಶ್ ಎಂಬುವವರನ್ನು ಡೆಹರಾಡೂನ್‌ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೆಂಗಳೂರು ಪೊಲೀಸರಿಂದ ಖತರ್ನಾಕ್ ವಂಚಕರು ಸೆರೆಯಾಗಿದ್ದಾರೆ.

  • TV9 Web Team
  • Published On - 14:53 PM, 19 Feb 2021
ಬೆಂಗಳೂರು ಪೊಲೀಸರಿಂದ ಡೆಹರಾಡೂನ್​ನಲ್ಲಿ ರಾಘವೇಂದ್ರ ಸರ್ವಂ - ರಾಜೇಶ್ ವಂಚಕ ಜೋಡಿಯ ಅರೆಸ್ಟ್
ರಾಘವೇಂದ್ರ ಸರ್ವಂ

ಬೆಂಗಳೂರು: ರಾಘವೇಂದ್ರ ಸರ್ವಂ ಹಾಗೂ ರಾಜೇಶ್ ಎಂಬುವವರನ್ನು ಡೆಹರಾಡೂನ್‌ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೆಂಗಳೂರು ಪೊಲೀಸರಿಗೆ ಖತರ್ನಾಕ್ ವಂಚಕರು ಸೆರೆಸಿಕ್ಕಿದ್ದು, ಈ ವಂಚಕರು ಮೋಸ ಮಾಡಲು ಟಿವಿ9 ಸುದ್ದಿ ವಾಹಿನಿಯ ಹೆಸರು ಹೇಳುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಈ ಹಿಂದೆ ಟಿವಿ9 ಹೆಸರು ಹೇಳಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಬಸವರಾಜ್‌ಗೆ ಇವರಿಬ್ಬರೂ ಧಮ್ಮಿ ಹಾಕಿದ್ದರಂತೆ.

ಪ್ರಕರಣದ ಹಿನ್ನೆಲೆ:
ರಾಘವೇಂದ್ರ ಸರ್ವಂ ಹಾಗೂ ರಾಜೇಶ್ ಎಂಬ ವಂಚಕ ಜೋಡಿ ನಾವು ಕೇಂದ್ರ ಸರ್ಕಾರದ ನಿಗಮ ಮಂಡಳಿಗಳ ಸದಸ್ಯ, ನಮಗೆ ಹೈಪ್ರೊಫೈಲ್ ಲಿಂಕ್ ಇದೆ ಎಂದು ಹೇಳಿಕೊಳ್ಳುತ್ತಿದ್ದರಂತೆ. ಹಾಗೂ ಟಿವಿ9 ಕನ್ನಡ ಸುದ್ದಿವಾಹಿನಿ ಹೆಸರು ಬಳಸಿಕೊಂಡು ವಂಚನೆ ಮಾಡುತ್ತಿದ್ದರಂತೆ. ಈ ಬಗ್ಗೆ ಕೆಲ ದಿನಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಬಸವರಾಜ್ ದೂರು ನೀಡಿದ್ದರು. ಶಂಕರಪುರಂ ಠಾಣೆಯಲ್ಲಿ ಇವರ ವಿರುದ್ಧ ವಂಚನೆಯ ಕೇಸ್ ಸಹ ದಾಖಲಾಗಿತ್ತು. ಟಿವಿ9 ಹೆಸರು ಹೇಳಿ ಬಸವರಾಜ್‌ಗೆ ಧಮ್ಮಿ ಹಾಕಿದ್ದಾರೆಂದು ಬಸವರಾಜ್ ದೂರಲ್ಲಿ ಉಲ್ಲೇಖಿಸಿದ್ದರು. ಸದ್ಯ ಈಗ ರಾಘವೇಂದ್ರ ಸರ್ವಂ ಹಾಗೂ ರಾಜೇಶ್​ನನ್ನು ಡೆಹರಾಡೂನ್‌ನಲ್ಲಿ ಪೊಲೀಸರು ಬಂಧಿಸಿದ್ದು ಬೆಂಗಳೂರಿಗೆ ಕರೆತಂದಿದ್ದಾರೆ.

ರಾಘವೇಂದ್ರ ಸರ್ವಂ (Raghavendra Sarvam) ಎಂಬಾತ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ವಿಹೆಚ್​ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಎಂಬುವವರು ದೂರು ನೀಡಿದ್ದಾರೆ. ಇದೇ ಫೆಬ್ರವರಿ 18ರಂದು ವಿಹೆಚ್​ಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್​ ಕುಮಾರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಮಾಹಿತಿ ಪಡೆದು ಬಸವರಾಜಗೆ ರಾಘವೇಂದ್ರ ಕರೆ ಮಾಡಿದ್ದ. ತಾನು ಅಲೋಕ ಕುಮಾರ್ ಅವರನ್ನು ಭೇಟಿ ಆಗಬೇಕು. ಅಲೋಕ್ ಕುಮಾರ್ ಅವ್ರ ಫೋನ್ ನಂಬರ್ ಬೇಕು ಎಂದು ಕೇಳಿದ್ದಾನೆ. ಈ ವೇಳೆ ನಂಬರ್ ಕೊಡಲಾಗುವುದಿಲ್ಲ ಎಂದು ಬಸವರಾಜ ನಯವಾಗಿ ತಿರಸ್ಕರಿಸಿದ್ದಾರೆ.

ಆದರೂ ಬೆಂಬಿಡದ ರಾಘವೇಂದ್ರ ಸರ್ವಂ ನಿಮ್ಮ ರಾಷ್ಟ್ರೀಯ ಅಧ್ಯಕ್ಷರೇ ಏರ್​ಪೋರ್ಟ್​ಗೆ ಬರಲು ಹೇಳಿದ್ದಾರೆ. ಏರ್​ಪೋರ್ಟ್​ನಲ್ಲಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಅದಾದ ಬಳಿಕ ಅಲೋಕ್ ಕುಮಾರ್ ಅವ್ರಿಗೆ ವಿನಯ್ ಗುರೂಜಿ ಅವ್ರ ಭೇಟಿ ಮಾಡಿಸಬೇಕು ಎಂದೂ ಹೇಳಿದ್ದಾನೆ. ಈ ವೇಳೆ ಬಸವರಾಜ ಫೋನ್ ಕಟ್ ಮಾಡಿದ್ದರು. ಇಷ್ಟೆಲ್ಲಾ ಆದ ಬಳಿಕ ರಾಘವೇಂದ್ರ ಸರ್ವಂ ಏರ್​ಪೋರ್ಟ್​ಗೆ ತೆರಳಿ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾನೆ.

ಅಲೋಕ್ ಕುಮಾರ್ ಭೇಟಿಗೆ ರಾಘವೇಂದ್ರ ಸರ್ವಂ ಸುಳ್ಳು ಐಡೆಂಟಿಟಿ ಕಾರ್ಡ್​​ ಕೊಟ್ಟಿದ್ದ ಎಂಬುದು ಗಮನಾರ್ಹ. ವಿಹಿಂಪ ಮತ್ತು ಕೇಂದ್ರ ಸರ್ಕಾರದ ಹಿಂದೂ ಸಲಹೆಗಾರ ಸಮಿತಿಯ ಸದಸ್ಯ ಎಂದು ಹೇಳಿಕೊಂಡಿದ್ದ. ಇದೇ ಐಡೆಂಟಿಟಿ ಬಳಸಿ, ಏರ್​ಪೋರ್ಟ್ ಪ್ರವೇಶ ಮಾಡಿ ಅಲೋಕ್ ಕುಮಾರರನ್ನು ಭೇಟಿ ಮಾಡಿ, ಪರಿಚಯ ಮಾಡಿಕೊಂಡಿದ್ದ.

ಇದನ್ನೂ ಓದಿ:
Raghavendra Sarvam Fraud Case ಯುವರಾಜನ ಹಾದಿಯಲ್ಲೇ ಮತ್ತೊಬ್ಬ ಸೆಲೆಬ್ರಿಟಿ ವಂಚಕನ ವಿರುದ್ಧ ಶಂಕರಪುರ ಠಾಣೆಯಲ್ಲಿ ಕೇಸ್ ದಾಖಲು

Raghavendra Sarvam Fraud Case ವಿಹೆಚ್​ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಆರೋಪ ತಳ್ಳಿ ಹಾಕಿದ ರಾಘವೇಂದ್ರ