ರಾಘವೇಂದ್ರ ಸರ್ವಂ (Raghavendra Sarvam) ಎಂಬಾತ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾನೆ ಎಂದು ವಿಹೆಚ್ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಆರೋಪ ಮಾಡಿದ್ದರು. ಈ ಆರೋಪಗಳಿಗೆ ರಾಘವೇಂದ್ರ ಸರ್ವಂ ತಮ್ಮ ಫೇಸ್ಬುಕ್ನಲ್ಲಿ ವಿಡಿಯೋ ಸಂದೇಶ ನೀಡಿ, ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಸಮಾಜ ಸೇವೆ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದಿರುವ ವ್ಯಕ್ತಿ. ಫೆಬ್ರವರಿ 18ರಂದು ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಅಲೋಕ್ ಕುಮಾರ್ ಅವರು ಬೆಂಗಳೂರಿಗೆ ಆಗಮಿಸುವುದಕ್ಕೂ ಮುನ್ನ ಒಮ್ಮೆ ನಾನು ದೆಹಲಿ ಅಟ್ವೊಕೇಟ್ ಆಫೀಸ್ನಲ್ಲಿ ಅವರನ್ನು ಭೇಟಿ ಮಾಡಿದ್ದೆ. ಈ ವೇಳೆ ಅವರ ಜೊತೆ ನಮ್ಮ ಮಠದ ಬಗ್ಗೆ ಮತ್ತು ವಿನಯ್ ಗುರೂಜಿ ಅವರ ಬಗ್ಗೆ ಚರ್ಚೆ ನಡೆಸುವಾಗ ಅಲೋಕ್ ಕುಮಾರ್ ಬೆಂಗಳೂರಿನಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಬಳಿಕ ಫೆಬ್ರವರಿ 18ರಂದು ಅಲೋಕ್ ಕುಮಾರ್ ಏರ್ಪೋರ್ಟ್ಗೆ ಬಂದಿದ್ದರು. ಆಗ ನಾನು ಅವರನ್ನು ರಿಸೀವ್ ಮಾಡಲು ಹೋಗಿದ್ದೆ. ಕಾಕತಾಳಿಯವಾಗಿ ಅದೇ ದಿನ ಮಂಗಳೂರಿನಿಂದ ವಿನಯ್ ಗುರೂಜಿ ಸಹ ಬೆಂಗಳೂರಿಗೆ ಬಂದಿದ್ದರು. ಹೀಗಾಗಿ ನಾನು ಅಲೋಕ್ ಕುಮಾರ್ ಅವರಿಗೆ ಈ ವಿಷಯ ತಿಳಿಸಿದೆ. ಆಗ ಇಬ್ಬರೂ ಏರ್ಪೋರ್ಟ್ನಲ್ಲೇ ಭೇಟಿಯಾದ್ರು.
ಈ ವೇಳೆ ಅನಂತ್ ಪ್ರಭು ಅವರೂ ಸಹ ವಿನಯ್ ಗುರೂಜಿ ಅವರ ಜೊತೆ ಮಂಗಳೂರಿನಿಂದ ಬಂದಿದ್ದರು. ಅನಂತ್ ಪ್ರಭು ಗ್ಲೋರಿಯಸ್ ಭಾರತ ಎಂಬ ಪುಸ್ತಕವನ್ನು ಬರೆದಿದ್ರು. ಹಾಗೂ ಅವರು ಯಾವಾಗ ನಾನು RSS ಮುಖಂಡ ಮುಕುಂದ್ ಜೀ ಅವರ ಶಿಷ್ಯ ಹಾಗೂ ಈ ಪುಸ್ತಕ ಬರೆಯಲು ಅವರೇ ಸ್ಪೂರ್ತಿ ಎಂದು ಹೇಳಿದಾಗ ವಿನಯ್ ಗುರೂಜಿ ಈ ಪುಸ್ತಕವನ್ನು ಇಲ್ಲೇ ಬಿಡುಗಡೆ ಮಾಡೋಣ ಎಂದು ಹೇಳಿದ್ರು. ಆಗ ಅಲೋಕ್ ಕುಮಾರ್ ಒಂದು ಪುಸ್ತಕ, ವಿನಯ್ ಗುರೂಜಿ ಒಂದು ಪುಸ್ತಕ, ನಾನೊಂದು ಹಿಡಿದು ಅಲ್ಲೇ ಪುಸ್ತಕ ಬಿಡುಗಡೆ ಮಾಡಿದೆವು. ಇದಾದ ಬಳಿಕ ನಾನು ಏರ್ಪೋರ್ಟ್ನಿಂದ ಆಚೆ ಬಂದೆ ಆಗ ಬಸವರಾಜ ಅವರನ್ನು ಭೇಟಿ ಮಾಡಿದೆ.
ಆಗ ಬಸವರಾಜ, ಯಾಕೆ ಇಷ್ಟು ತಡ ಎಂದು ನನನ್ನು ಕೇಳಿದ್ರು. ಆಗ ನಾನು ಈ ರೀತಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಹೇಳಿದೆ. ಇನ್ನು ನಾಲ್ಕು ದಿನಗಳ ಬಳಿಕ ಬಸವರಾಜ ನನಗೆ ಕರೆ ಮಾಡಿ ಏನಯ್ಯ ರಾಘವೇಂದ್ರ ದೇವರ ಹೆಸರು ಇಟ್ಕೊಂಡು ಹೀಗಾ ಮಾಡೋದು? ಯಾರಯ್ಯ ವಿನಯ್ ಗುರೂಜಿ.. ಅವರೆಲ್ಲ ಜೆಡಿಎಸ್, ಕಾಂಗ್ರೆಸ್ಗೆ ಸ್ವಾಮಿಜೀ. ಅಂತಹವರನ್ನು ನಮ್ಮ ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರ ಜೊತೆ ನಿಲ್ಲಿಸಿ ಪುಸ್ತಕ ಬಿಡುಗಡೆ ಮಾಡಿಸಿದ್ದೀಯಲ್ಲ ಎಷ್ಟಯ್ಯ ಕೊಬ್ಬು ನಿನಗೆ ಎಂದು ಹಿಗ್ಗಾಮುಗ್ಗ ಬೈದರು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಮಾರು 10 ನಿಮಿಷಗಳ ಸ್ಪಷ್ಟನೆ ನೀಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹಾಗೂ ಬಸವರಾಜ ಅವರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.