ರಾಜಾಜಿನಗರ 6ನೇ ಬ್ಲಾಕ್ನಲ್ಲಿ 1 ವರ್ಷದಿಂದ ಕುಡಿಯಲು ನೀರು ಬರ್ತಿಲ್ಲ; ತಿಂಗಳಿಗೆ ನಾಲ್ಕೈದು ಸಾವಿರ ವಾಟರ್ ಟ್ಯಾಂಕರ್ಗೆ ಸುರಿಯುತ್ತಿರುವ ನಿವಾಸಿಗಳು
ಅದು ಸಿಲಿಕಾನ್ ಸಿಟಿ ಬೆಂಗಳೂರಿನ ಹಳೆಯ ಏರಿಯಾ. ಆದರೆ ಈ ಏರಿಯಾದ ಸುತ್ತಮುತ್ತಲಿನ ಬ್ಲಾಕ್ ಗಳಿಗೆ ಕುಡಿಯಲು ನೀರು ಬರುತ್ತಿದೆ. ಈ ಏರಿಯಾಗೆ ಮಾತ್ರ, ಸರಿಯಾಗಿ ನೀರು ಬಂದು ಒಂದು ವರ್ಷ ಆಗಿದೆ. ಇದರಿಂದ ಪ್ರತಿ ತಿಂಗಳು ವಾಟರ್ ಟ್ಯಾಂಕರ್ ಮೂಲಕ ನೀರು ಸಪ್ಲೈ ಮಾಡಿಸಿಕೊಳ್ಳಲು ನಾಲ್ಕರಿಂದ ಐದು ಸಾವಿರ ರುಪಾಯಿ ಖರ್ಚಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು, ಸೆ.23: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ-106ರ ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ, ಕಳೆದ ಒಂದು ವರ್ಷದಿಂದ ಸರಿಯಾಗಿ ಕುಡಿಯಲು ನೀರು ಬರ್ತಿಲ್ಲ (Drinking Water). ಈ ಹಿನ್ನೆಲೆಯಲ್ಲಿ ನಿನ್ನೆ ಸ್ಥಳೀಯ ನಿವಾಸಿಗಳು, ಮಹಿಳೆಯರು, ಮಕ್ಕಳು ಖಾಲಿ ಬಿಂದಿಗೆ, ಬಕೀಟ್ಗಳನ್ನಿಡಿದು ಬೇಕೆ ಬೇಕು ನೀರು ಬೇಕು ಎಂದು ಧಿಕ್ಕಾರ ಕೂಗಿ ತಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಏರಿಯಾದ ಯಾವ ಮನೆಯ ವಾಟರ್ ಸಂಪ್ ನೋಡಿದ್ರು ಖಾಲಿ ಖಾಲಿಯಾಗಿದೆ. ಇಡೀ ಏರಿಯಾಗೆ ಎರಡೋ, ಮೂರೋ ಬೋರ್ ವೆಲ್ ಗಳಿವೆ. ಆದರೆ ಯಾವ ಬೋರ್ ವೆಲ್ ನಲ್ಲೂ ಸರಿಯಾಗಿ ನೀರು ಬರೋದಿಲ್ಲ. ಈ ಏರಿಯಾಗೆ ಕಾವೇರಿ ನೀರು ಬಂದ್ರು ಅದು ಐದು ನಿಮಿಷ ಕೂಡ ಬರಲ್ಲ. ನೀರು ಬಂದ್ರು ಕೊಳಚೆ ನೀರು ಮಿಕ್ಸ್ ಆಗಿ ಬರ್ತಿದೆ, ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ರು ಸಮಸ್ಯೆ ಮಾತ್ರ ಬಗೆಹರಿತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಐದು ರುಪಾಯಿ ಕಾಯಿನ್ ನೀರು ತಂದು ವಾಷ್ ರೂಮ್ ಗೆ ಹೋಗುವ ದುಸ್ಥಿತಿ ಬಂದಿದೆ. ಸ್ನಾನ ಮಾಡಲು ಆಗ್ತಿಲ್ಲ, ಕುಡಿಯಲು ನೀರಿಲ್ಲ ಅಂತ ಹೇಳುವುದಕ್ಕೂ ಆಗಲ್ಲ, ಅಷ್ಟು ಸಮಸ್ಯೆ ಇದೆ ಎಂದು ಏರಿಯಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಏರಿಯಾದ ಮನೆಗಳಲ್ಲಿ ಇರುವುದು ಸಣ್ಣದಾದ ವಾಟರ್ ಟ್ಯಾಂಕ್ಗಳು, ಕುಡಿಯಲು ನೀರು ಬೇಕು ಅಂತ ವಾಟರ್ ಟ್ಯಾಂಕರ್ ಬುಕ್ ಮಾಡಿದ್ರೆ ಅರ್ಧಂಬರ್ದ ನೀರು ಹಾಕಿ ಫುಲ್ ಅಮೌಂಟ್ ತೆಗೆದುಕೊಂಡು ಹೋಗ್ತಾರೆ. ಇದನ್ನೂ ಓದಿ: Kamakshipalya: ಬೆಂಗಳೂರಿನಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ
ಆಫ್ ಚಾರ್ಜ್ ತೆಗೆದುಕೊಳ್ಳಿ ಎಂದರೆ ಕಿರಿಕ್ ಮಾಡ್ತಾರೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ, ಸುಮಾರು ವರ್ಷಗಳ ಕಾಲ ಈ ಏರಿಯಾ ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು, ಆದರೆ ಈ ಬಾರಿ ಎಲೆಕ್ಷನ್ ನಲ್ಲಿ ರಾಜಾಜಿನಗರ ಆರನೇ ಬ್ಲಾಕ್ ಅನ್ನು ಗೋವಿಂದರಾಜನಗರ ವಿಧಾನ ಕ್ಷೇತ್ರಕ್ಕೆ ಸೇರಿಸಿದ್ರು, ಅಂದಿನಿಂದ ನಮ್ಮನ್ನು ರಾಜಾಜಿನಗರ ಮತ್ತು ಗೋವಿಂದ ರಾಜನಗರದ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಕೃಷ್ಣ ತಿಳಿಸಿದ್ದಾರೆ.
ಒಟ್ನಲ್ಲಿ ಬೇಸಿಗೆ ಕಾಲದಲ್ಲಿ ಏನೋ ನಮ್ಮ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಬೆಂಗಳೂರಿನ ಜನರಿಗೆ ಸರಿಯಾಗಿ ಕುಡಿಯಲು ನೀರು ಕೊಡಲಿಲ್ಲ, ಆದರೆ ಮಳೆಗಾಲದಲ್ಲೂ ಕುಡಿಯಲು ನೀರು ಬಿಡ್ತಿಲ್ಲ ಅಂದರೆ ಏನ್ ಕಥೆ ಹೇಳಿ. ಕೂಡಲೇ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ