ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಐಸಿಯುನಲ್ಲಿರುವವರನ್ನ ಸ್ಥಳಾಂತರಿಸುವ ಅನಿವಾರ್ಯತೆ

ಬೆಂಗಳೂರಿನ ಪರಿಸ್ಥಿತಿ ಅಕ್ಷರಶಃ ಬಿಗಡಾಯಿಸಿದೆ. ಒಂದ್ಕಡೆ ಸಾಯೋರ ಸಂಖ್ಯೆ ಏರ್ತಾನೇ ಇದ್ರೆ, ಮತ್ತೊಂದ್ಕಡೆ ಬದೋಕದಕ್ಕೂ ಹೋರಾಟ ಮಾಡ್ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರೆತೆ ಕಾಡ್ತಾ ಇದ್ದು, ದೊಡ್ಡ ಮೆಡಿಕಲ್ ಡಿಸಾಸ್ಟರ್ ನಡೆದರೂ ನಡೀಬಹುದಾದ ಸನ್ನಿವೇಶ ನಿರ್ಮಾಣವಾಗಿದೆ.

  • TV9 Web Team
  • Published On - 7:11 AM, 18 Apr 2021
ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಐಸಿಯುನಲ್ಲಿರುವವರನ್ನ ಸ್ಥಳಾಂತರಿಸುವ ಅನಿವಾರ್ಯತೆ
ಆಕ್ಸಿಜನ್ ಸಿಲಿಂಡರ್ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕೊರೊನಾ ಸೋಂಕಿನ ಸ್ಫೋಟದ ಬೆನ್ನಲ್ಲೇ ಈಗ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗೆ ತತ್ವಾರ ಶುರುವಾಗಿದೆ. ಹೆಮ್ಮಾರಿ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದವರು, ಸಾವು ಬದುಕಿನ ಮಧ್ಯೆ ಹೊರಾಡ್ತಿದ್ದಾರೆ. ಉಸಿರಾಡೋಕೆ ಆಗದೇ, ಒದ್ದಾಡ್ತಿದ್ದಾರೆ. ಇದಕ್ಕೆಲ್ಲ ಕಾರಣ, ಒನ್ಸ್ ಅಗೇನ್ ಆಕ್ಸಿಜನ್ ಸಿಗದೇ ಇರೋದು.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ
ನಿಜ, ಬೆಂಗಳೂರಿನಲ್ಲಿ ಕೊರೊನಾ ಸೃಷ್ಟಿಸಿರುವ ಹಾವಳಿ ಅಷ್ಟಿಷ್ಟಲ್ಲ. ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ಡಿಮಾಂಡ್‌ ಹೆಚ್ಚಾಗಿದೆ. ಅದರಲ್ಲೂ ಕೆಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ಪರದಾಟ ಶುರುವಾಗಿದೆ. ಇದ್ರಿಂದಾಗಿ ತಮ್ಮ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತೊಂದೆಡೆ ಆಕ್ಸಿಜನ್‌ ಸಪ್ಲೈ ಮಾಡುವವರ ಬಳಿಗೆ ಹೋಗಿ ಕೇಳಿದ್ರೆ, ಅಲ್ಲಿ ಆಕ್ಸಿಜನ್‌ ಸಿಲಿಂಡರ್‌ಗಳು ಸಾಲುಗಟ್ಟಿ ನಿಂತಿವೆ. ಆದ್ರೆ ಬೇಡಿಕೆ ಬರುತ್ತಿರುವಷ್ಟು ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗದೆ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಯಿರುವಾಗ ಬೇರೆ ರಾಜ್ಯಗಳಿಂದಲೂ ಆಕ್ಸಿಜನ್‌ ಸಪ್ಲೈ ಆಗುವುದು ಅನುಮಾನ. ಸರ್ಕಾರ ಸ್ಟೀಲ್‌ ಕಂಪನಿಗಳಿಂದ ಆಕ್ಸಿಜನ್‌ ತರಿಸಿಕೊಳ್ಳಬಹುದು ಎಂಬ ಸಲಹೆಯನ್ನು ಗ್ಯಾಸ್‌ ಏಜೆನ್ಸಿಯವರು ನೀಡುತ್ತಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಸಿಲಿಂಡರ್​ ಕೊರತೆ ಬಗ್ಗೆ ಸಚಿವ ಸುಧಾಕರ್​ಗೆ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಅಸೋಸಿಯೇಷನ್ ತುರ್ತು ಪತ್ರ ಬರೆದಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಾಡುತ್ತಿದೆ. ಆಕ್ಸಿಜನ್ ಸಪ್ಲೈಯರ್ಸ್​ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ಸರ್ಕಾರಿ ಕೊವಿಡ್ ಬೆಡ್​ ಭರ್ತಿಯಾಗಿದ್ದು, ಲೈಫ್ ಸೇವಿಂಗ್ ಆಕ್ಸಿಜನ್ ಸಪೋರ್ಟ್​ ಇಲ್ಲದೆ ಪರದಾಡುತ್ತಿದ್ದಾರೆ. ಈಗಲೇ ಕ್ರಮಕೈಗೊಳ್ಳದಿದ್ದರೆ ಮೆಡಿಕಲ್ ಡಿಸಾಸ್ಟರ್ ಆಗಲಿದೆ ಎಂದು ಎಚ್ಚರಿಸಿದೆ.

ಅಷ್ಟೇ ಅಲ್ಲ ಆಕ್ಸಿಜನ್ ಸಿಲಿಂಡರ್​ ಇಲ್ಲದಿದ್ದರೆ ರೋಗಿಗಳ ಪ್ರಾಣಕ್ಕೆ ಹಾನಿಯಾಗಲಿದೆ. ಹಾಗಾಗಿ ಕೂಡಲೇ ಕ್ರಮಕೈಗೊಳ್ಳುವಂತೆ ಫನಾ ಅಧ್ಯಕ್ಷ ಡಾ.ಪ್ರಸನ್ನ ಸಚಿವ ಡಾ.ಕೆ.ಸುಧಾಕರ್​ಗೆ ಪತ್ರ ಬರೆದಿದ್ದಾರೆ. ಆದ್ರೆ ಆಕ್ಸಿಜನ್ ಸಿಲಿಂಡರ್ ಸಮಸ್ಯೆ ಕುರಿತಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕೇಂದ್ರ ಸರ್ಕಾರದಿಂದ ಜಂಬೋ ಸಿಲಿಂಡರ್‌ಗಳು ಬರುತ್ತವೆ ಎಂಬ ಆಶ್ವಾಸನೆ ನೀಡಿದ್ದಾರೆ.

ಉಸಿರಾಡಲು ತೊಂದರೆ ಅನುಭವಿಸುವವರಿಗೆ ಆಕ್ಸಿಜನ್‌ ಕೊಡಿಸುವುದು ಕೊರೊನಾ ಚಿಕಿತ್ಸೆಯ ಸಂದರ್ಭದಲ್ಲಿ ಅನಿವಾರ್ಯ. ಆದ್ರೆ ಸರಿಯಾದ ಸಮಯಕ್ಕೆ ಆಕ್ಸಿಜನ್‌ ಪೂರೈಕೆಯಲ್ಲಾಗಿರುವ ತೊಂದರೆಯನ್ನು ಸರ್ಕಾರ ಸರಿಪಡಿಸದಿದ್ದರೆ ಸಾವಿನ ಪ್ರಮಾಣ ಇನ್ನಷ್ಟು ಜಾಸ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಯಾವುದಕ್ಕೂ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದು, ಕೊರೊನಾದಿಂದ ದೂರ ಉಳಿಯುುವುದೇ ಈಗಿರುವ ಏಕೈಕ ಪರಿಹಾರ.

ಇದನ್ನೂ ಓದಿ: ಕೇರಳ ಸರ್ಕಾರಿ ಆಸ್ಪತ್ರೆಗಳಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆಯಿಂದ ದಿನಕ್ಕೆ 1.5 ಟನ್ ಮೆಡಿಕಲ್​​ ಆಕ್ಸಿಜನ್​ ಪೂರೈಕೆ