ರಾಜ್ಯ ಸರ್ಕಾರ ಕುರಿ, ಮೇಕೆ ಸಾಕಾಣಿಕೆದಾರರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಗರಂ

ನಾನು ಸಿಎಂ ಆದ್ರೆ ಕುರಿ, ಮೇಕೆ ಮೃತಪಟ್ಟರೆ 10 ಸಾವಿರ ಪರಿಹಾರ ನೀಡುತ್ತೇನೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಮಾತನಾಡುತ್ತೇನೆ. ನೀವು ಬರೀ ಕುರಿಗಾಹಿಗಳಾಗೇ ಇರಬಾರದು. ನಿಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

  • TV9 Web Team
  • Published On - 15:16 PM, 1 Mar 2021
ರಾಜ್ಯ ಸರ್ಕಾರ ಕುರಿ, ಮೇಕೆ ಸಾಕಾಣಿಕೆದಾರರ  ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಗರಂ
ಕುರಿ, ಮೇಕೆ ಸಾಕಾಣಿಕೆದಾರರ ಸಂಘದ ಪ್ರತಿಭಟನೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕುರಿ, ಮೇಕೆ ಸಾಕಾಣಿಕೆದಾರರ ಸಂಘದಿಂದ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಗೆ ಆಗಮಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನಾಕಾರರಿಗೆ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೂಡ ಭಾಗಿಯಾಗಿದ್ದಾರೆ. ಸಾವಿರಾರು ಕುರಿ, ಮೇಕೆ ಸಾಕಾಣಿಕೆದಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಕುರಿ, ಮೇಕೆ ಸಾಕಾಣಿಕೆದಾರರ ಬೇಡಿಕೆ
-ಕುರಿ, ಮೇಕೆ ಮಹಾಮಂಡಲಕ್ಕೆ ಅನುದಾನ ಮೀಸಲಿಡಬೇಕು.
-ಅರಣ್ಯ ಭಾಗದಲ್ಲಿ ಕುರಿ ಮೇಯಿಸಲು ಅವಕಾಶ ಕಲ್ಪಿಸಬೇಕು.
-ಕುರಿಗಳಿಗಾಗಿ ಗೋಮಾಳವನ್ನು ರಕ್ಷಣೆ ಮಾಡಬೇಕು.
-ಕುರಿ ಸಾಕಾಣಿಕೆದಾರರಿಗೆ ವಸತಿ ಸೌಲಭ್ಯವನ್ನ ಕಲ್ಪಿಸಬೇಕು.
-ಆರೋಗ್ಯ ಸಂಜೀವಿ ಮೇಕೆ ಹಾಲು ಉತ್ಪಾದನೆ ಯೋಜನೆ ತರಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾನು ಸಿಎಂ ಆದ್ರೆ 10 ಸಾವಿರ ರೂ. ಪರಿಹಾರ ನೀಡುತ್ತೇನೆ
ನಾನು ಸಿಎಂ ಆದ್ರೆ ಕುರಿ, ಮೇಕೆ ಮೃತಪಟ್ಟರೆ 10 ಸಾವಿರ ಪರಿಹಾರ ನೀಡುತ್ತೇನೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಮಾತನಾಡುತ್ತೇನೆ. ನೀವು ಬರೀ ಕುರಿಗಾಹಿಗಳಾಗೇ ಇರಬಾರದು. ನಿಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜೊತೆಗೆ ನಾನು ಚಿಕ್ಕ ಹುಡುಗ ಇದ್ದಾಗ ನಮ್ಮ ಮನೆಯಲ್ಲೂ ಕುರಿ ಸಾಕ್ತಿದ್ರು. ಹಿಂದೆ ಒಂದು ಕುರಿಯನ್ನ 80 ರೂಪಾಯಿಗೆ ಮಾರಿ ಬಟ್ಟೆ ತಗೊಂಡು ಮೆರೆಯುತ್ತಿದ್ವಿ ಅಂತಾ ಸಿದ್ದರಾಮಯ್ಯ ಬಾಲ್ಯವನ್ನ ನೆನಪಿಸಿಕೊಂಡಿದ್ದಾರೆ.

ಪಂಡಿತ್ ಚಿದ್ರಿಯವರ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ಕುರಿ, ಮೇಕೆ ಸಾಕಾಣಿಕೆದಾರರಿಗೆ ಹಲವು ಸಮಸ್ಯೆಗಳು ಇವೆ. ಅವರ ಬೇಡಿಕೆ ಈಡೇರಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಮೈಸೂರಿಗೆ ಹೋಗೋದನ್ನ ಕ್ಯಾನ್ಸಲ್ ಮಾಡಿ ಇವತ್ತು ಇಲ್ಲಿಗೆ ಬಂದಿದ್ದೇನೆ. ಕುರಿ ಸಾಕುವವರಿಗೆ ಇದ್ದ ಸಮಸ್ಯೆಗಳನ್ನ ಆಲಿಸಿ ಪರಿಹಾರ ಕೊಡೋ ಯೋಜನೆ ರೂಪಿಸಿದ್ದೆ. ಆದ್ರೆ ಇವತ್ತು ಅದನ್ನೆಲ್ಲ ನಿಲ್ಲಿಸಿದ್ದಾರೆ. ರೋಗ ಬರದಂತೆ ಕುರಿಗಳಿಗೆ ಲಸಿಕೆಗಳನ್ನು ನೀಡಬೇಕು.

ಕೂಡಲೇ ಕುರಿಗಾಹಿಗಳಿಗಾಗಿ ಇದ್ದಂತಹ ಕಾರ್ಯಕ್ರಮಗಳನ್ನ ಮತ್ತೆ ಜಾರಿ ಮಾಡಬೇಕು. ಈ ಕಾರ್ಯಕ್ರಮವನ್ನ ಯಡಿಯೂರಪ್ಪ ನಿಲ್ಲಿಸಿದ್ದಾರೆ. ಅನುಗ್ರಹ ಕಾರ್ಯಕ್ರಮದ ಬಗ್ಗೆಯೇ ಯಡಿಯೂರಪ್ಪಗೇ ಗೊತ್ತೇ ಇಲ್ಲ. ನಾನು ಕೇಳ್ಕೊಂಡ್ರು ಅವರು ಕೊಡಲಿಲ್ಲ. ಕುರಿಗಾರರು ಅಂದ್ರೆ ಬರೀ ಕುರುಬರೇ ಅಲ್ಲ. ಎಲ್ಲಾ ಸಮುದಾಯದವರು ಸಾಕ್ತಿದ್ದಾರೆ. ನಮ್ಮ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬ್ರಾಹ್ಮಣ. ಆದ್ರೆ ಅವ್ರು ಕೂಡ ಸುಮಾರು 500 ಕುರಿ ಸಾಕ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.

ಇದನ್ನೂ ಓದಿ: ಯಾರ ಕೋಟೆ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯಗೆ ತನ್ವೀರ್ ಟಾಂಗ್