ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಭೀಕರ ಅಪಘಾತ; ಕೆಎಸ್ಆರ್‌ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಭೀಕರ ಅಪಘಾತ; ಕೆಎಸ್ಆರ್‌ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು
ಸಾಂಕೇತಿಕ ಚಿತ್ರ

ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಕ್ರದ ಅಡಿಗೆ ಸಿಲುಕಿ ಲಕ್ಷ್ಮೀದೇವಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಸದಾಶಿವನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.

TV9kannada Web Team

| Edited By: Ayesha Banu

Apr 18, 2022 | 9:47 AM

ಬೆಂಗಳೂರು: ಕೆಎಸ್ಆರ್‌ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಸಂಭವಿಸಿದೆ. ಬಸ್ ಹರಿದು ಲಕ್ಷ್ಮೀದೇವಿ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹೋದರನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಹಿಂಬದಿಯಿಂದ ಬಸ್ ಡಿಕ್ಕಿಯಾಗಿ ತಲೆ ಮೇಲೆ ಹರಿದಿದೆ. ಸದಾಶಿವನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಕ್ರದ ಅಡಿಗೆ ಸಿಲುಕಿ ಲಕ್ಷ್ಮೀದೇವಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಸದಾಶಿವನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ. ಚಿಂತಾಮಣಿ ನಿವಾಸಿಯಾದ ಮೃತ ಲಕ್ಷ್ಮಿ, ಆರೋಗ್ಯ ತಪಾಸಣೆಗೆಂದು ಬೆಂಗಳೂರಿಗೆ ಬಂದಿದ್ರು. ಕೊಡಿಗೆಹಳ್ಳಿ ನಿವಾಸದ ಸಹೋದರ ರಘುನಾಥ್ ಮನೆಯಿಂದ ಮಲ್ಲಿಗೆ ಆಸ್ಪತ್ರೆಗೆ ತೆರಳುತಿದ್ದಾಗ ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕೆಳಗೆ ಬಿದ್ದ ಲಕ್ಷ್ಮಿದೇವಿ ತಲೆ ಮೇಲೆ ಬಸ್ ಚಕ್ರ ಹರಿದಿದೆ. ಸ್ಥಳದಲ್ಲೇ ಲಕ್ಷ್ಮಿದೇವಿ ಮೃತಪಟ್ಟಿದ್ದಾರೆ.

ವಾರ ಪತ್ರಿಕೆ ವರದಿಗಾರ ಅನುಮಾನಾಸ್ಪದ ಸಾವು ವಾರಪತ್ರಿಕೆಯ ವರದಿಗಾರ ಸಿ.ಎಲ್.ಸ್ವಾಮಿ(42) ಅನುಮಾನಾಸ್ಪದ ಸಾವಾಗಿದೆ. ಮೈಸೂರಿನ ಹುಣಸೂರು ಹೊರವಲಯದಲ್ಲಿ ಬೈಕ್ ಬಳಿ ಸ್ವಾಮಿ ಮೃತದೇಹ ಪತ್ತೆಯಾಗಿದೆ. ಬೈಕ್ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿದೆ. ಇದು ಅಪಘಾತವಲ್ಲ, ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಮೈಸೂರು ಎಸ್‌ಪಿ ಆರ್.ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನದ ಕುಲಕಸುಬು ಮುಂದುವರಿಸಿದ್ದ ಆರೋಪಿ ಬಂಧನ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸರು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಅಪ್ಪ, ಅಮ್ಮನ ಹಾದಿಯಲ್ಲೇ ಸಾಗಿದ್ದ ಅಕ್ಬರ್​(36) ಅರೆಸ್ಟ್ ಆಗಿದ್ದಾನೆ. ಅಪ್ಪ ಕಳ್ಳ, ಅಮ್ಮ ಕೂಡ ಕಳ್ಳತನ ಮಾಡುತ್ತಿದ್ದರು. ಅಪ್ಪ, ಅಮ್ಮ ತೀರಿಹೋದ ಬಳಿಕ ಮಗ ಅಕ್ಬರ್​ ಕೂಡ ಕಳ್ಳತನಕ್ಕಿಳಿದಿದ್ದ. 2004ರಿಂದ ಈವರೆಗೂ 8 ಬಾರಿ ಜೈಲಿಗೆ ಹೋಗಿ ಬಂದಿರುವ ಅಕ್ಬರ್, ಯಲಹಂಕ ನಿವಾಸಿಯ ಮನೆಗೆ ಕನ್ನ ಹಾಕಿ ಕಳವು ಮಾಡಿದ್ದ. 400 ಗ್ರಾಂ ಚಿನ್ನ , 2 ಲಕ್ಷ ನಗದು ಕಳ್ಳತನ ಮಾಡಿದ್ದ. ಸದ್ಯ ಅಕ್ಬರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ಮೌಲ್ಯದ 180 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಐವರು ಸಾವು

Follow us on

Related Stories

Most Read Stories

Click on your DTH Provider to Add TV9 Kannada