ಕೊವಿಡ್-19 ಸಮರ: ಸರ್ಕಾರದೊಂದಿಗೆ ಕೈಜೋಡಿಸಿದ ಜೀ ಕನ್ನಡ ಸಂಸ್ಥೆ
ಕೊವಿಡ್-19 ಪಿಡುಗನ್ನು ನಿಯಂತ್ರಿಸಲು ಹೋರಾಡುತ್ತಿರುವ ಕರ್ನಾಟಕ ಸರ್ಕಾರದ ಜೊತೆ ಕೈ ಜೋಡಿಸಿರುವ ಜೀ ಕನ್ನಡ ಮತ್ತು ಜೀ ಪಿಕ್ಚರ್ ಸಂಸ್ಥೆಯು ಇಂದು ಎಂಟು ಆ್ಯಂಬುಲೆನ್ಸ್ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿತು. ವಿಧಾನ ಸಭೆ ಆವರಣದಲ್ಲಿ ನಡೆದ ಒಂದು ಸರಳ ಸಮಾರಂಭದಲ್ಲಿ ಜೀ ಸಂಸ್ಥೆಯ ಅಧಿಕಾರಿಗಳು ವಾಹನಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್ ಅಶೋಕ, ಡಾ. ಕೆ ಸುಧಾಕರ್, ಬಿ ಶ್ರೀರಾಮುಲು, ಎಸ್ ಟಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯೆ […]

ಕೊವಿಡ್-19 ಪಿಡುಗನ್ನು ನಿಯಂತ್ರಿಸಲು ಹೋರಾಡುತ್ತಿರುವ ಕರ್ನಾಟಕ ಸರ್ಕಾರದ ಜೊತೆ ಕೈ ಜೋಡಿಸಿರುವ ಜೀ ಕನ್ನಡ ಮತ್ತು ಜೀ ಪಿಕ್ಚರ್ ಸಂಸ್ಥೆಯು ಇಂದು ಎಂಟು ಆ್ಯಂಬುಲೆನ್ಸ್ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿತು.
ವಿಧಾನ ಸಭೆ ಆವರಣದಲ್ಲಿ ನಡೆದ ಒಂದು ಸರಳ ಸಮಾರಂಭದಲ್ಲಿ ಜೀ ಸಂಸ್ಥೆಯ ಅಧಿಕಾರಿಗಳು ವಾಹನಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್ ಅಶೋಕ, ಡಾ. ಕೆ ಸುಧಾಕರ್, ಬಿ ಶ್ರೀರಾಮುಲು, ಎಸ್ ಟಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯೆ ತಾರಾ ಮೊದಲಾದವರು ಹಾಜರಿದ್ದರು.