Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ರೈತ ಸಂಜು ಪ್ರಭಾ ಅವರು ಎರಡು ಎಕರೆಯಲ್ಲೇ ಸೀತಾಫಲ ಬೆಳೆಸಿ ವರ್ಷಕ್ಕೆ ಸುಮಾರು 5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ದತ್ತಿಯನ್ನ ಅಳವಡಿಸಿಕೊಂಡು ಆದಾಯವನ್ನ ಹೇಗೆ ಗಳಿಸಬುದೆಂದು ಸಾಧಿಸಿ ತೋರಿಸುತ್ತಿರುವ ಈ ರೈತ, ಜಿಲ್ಲೆಗೆ ಮಾದರಿಯಾಗಿ ನಿಂತಿದ್ದಾರೆ.

ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!
ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಸಂಜು ಪ್ರಭಾ
Follow us
ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on: Dec 02, 2023 | 11:46 AM

ಆ ರೈತ ಕಬ್ಬು, ಸೋಯಾಬಿನ್ ಬೆಳೆಸಿ ಕೈ ಸುಟ್ಟುಕೊಂಡಿದ್ದ. ಕೃಷಿ ಸಹವಾಸವೇ ಬೇಡಾ ಅಂತಾ ನಿರ್ದರಿಸಿದ್ದ ಆದರೆ ಆತ ಕೊನೆಗೊಮ್ಮೆ ತೋಟಗಾರಿಕೆ ಬೆಳೆಯನ್ನು ಬೆಳೆಸೋಣ ಎಂದು ನಿರ್ಧಸಿದ. ಅದರಂತೆ ಗೋಲ್ಡನ್ ತಳಿಯ ಸೀತಾಫಲ ಬೆಳೆಸಿ ಕೈ ತುಂಬಾ ಆದಾಯ ಗಳಿಸುತ್ತಿದ್ದಾನೆ ಈಗ. ಸೀತಾಫಲ ಬೆಳೆಸಿ ಕೈತುಂಬಾ ಆದಾಯ ಗಳಿಸುತ್ತಿರುವ ರೈತ ( farmer)… ವೈಜ್ಜಾನಿಕ ಪದ್ದತಿಯಲ್ಲಿ ಬೆಳೆಸಿದ ಸೀತಾಫಲ ತಂದಿದೆ ಬಂಪರ್ ಇಳುವರಿ… ಸೀತಾಫಲ (custard apple) ಬೆಳೆಸಿ ಬದುಕು ಕಟ್ಟಿಕೊಂಡ ಸಂಜು ಪ್ರಭು… ಹೌದು ಬೀದರ್ ಜಿಲ್ಲೆ (Bhalki, Bidar) ಅಂದರೆ ನಮಗೆ ನೆನಪಿಗೆ ಬರೋದು ಬರ..ಬರ.. ಬರ… ಪ್ರತಿ ವರ್ಷ ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ರೈತ ತೊಂದರೆ ಅನುಭವಿಸೋದು ಜಿಲ್ಲೆಯಲ್ಲಿ ಮಾಲೂಲಿ. ಆದರೇ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಇಲ್ಲೊಬ್ಬ ರೈತ ಸೀತಾಫಲ ಬೆಳೆಯುವುದರ ಮೂಲಕ ಅನಾವೃಷ್ಠಿ-ಅತಿವೃಷ್ಠಿಗೆ ಸೆಡ್ಡು ಹೊಡೆದು ನಿಂತಿದ್ದು ಸರಕಾರಿ ನೌಕರರ ಸಂಬಳಕ್ಕಿಂತ ಹೆಚ್ಚಿಗೆ ಗಳಿಸುತ್ತಿದ್ದಾರೆ (success story).

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ರೈತ ಸಂಜು ಪ್ರಭಾ ಅವರು ಎರಡು ಎಕರೆಯಲ್ಲೇ ಸೀತಾಫಲ ಬೆಳೆಸಿ ವರ್ಷಕ್ಕೆ ಸುಮಾರು 5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕಠಿಣ ಪರಿಶ್ರಮದಿಂದ ಎರಡು ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ ಆರ್ಥಿಕತೆ ಬಲಪಡಿಸಿಕೊಂಡು ಇತರೆ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.

ತೋಟಗಾರಿಕೆ ಅಧಿಕಾರಿಗಳ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿ, ತೆಲಂಗಾಣ ರಾಜ್ಯದ ಸಂಗಾರೆಡ್ಡಿಯಿಂದ 2020ರಲ್ಲಿ ಗೋಲ್ಡನ್ ತಳಿಯ 800 ಸೀತಾಫಲ ಸಸಿಗಳನ್ನು ತಂದು ಎರಡು ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 12×12 ಅಡಿ ಅಂತರದಲ್ಲಿ ಗಿಡಗಳನ್ನ ನಾಟಿ ಮಾಡಿದ್ದಾರೆ. ಈ ಗಿಡಗಳು ಹುಲುಸಾಗಿ ಬೆಳೆದು ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭಿಸಿದ್ದರಿಂದ ಮೊದಲನೇ ಫಸಲಿನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಆದಾಯ ಗಳಿಸಿರುವೆ ಎಂದು ರೈತ ಸಂಜು ಪ್ರಭ ಹೇಳುತ್ತಿದ್ದಾರೆ.

ನೀರಾವರಿಗಾಗಿ ಒಂದು ಕೊಳವೆ ಬಾವಿಯಿದ್ದು, ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಸೀತಾಫಲ ಪ್ರತಿ ಗಿಡಕ್ಕೆ ವರ್ಷಕ್ಕೊಮ್ಮೆ ತಿಪ್ಪೆಗೊಬ್ಬರ, ಹಸುವಿನ ಸಗಣಿಯಿಂದ ತಯಾರಿಸಿದ ಜೀವಾಮೃತ ಹಾಕುತ್ತಾರಂತೆ. ಈ ಬೆಳೆಗೆ ಬೇಸಿಗೆಯಲ್ಲಿ ಐದಾರು ದಿನಕ್ಕೊಮ್ಮೆ, ಮಳೆಗಾಲದಲ್ಲಿ 15 ದಿನಕ್ಕೊಮ್ಮೆ ನೀರುಣಿಸುತ್ತಾರೆ. ನವೆಂಬರ್ ನಿಂದ ಆರಂಭವಾಗುವ ಸೀತಾ ಫಲ ಸೀಸನ್ ಜನವರಿ ವರೆಗೆ ಕಾಯಿ ಬಿಡುತ್ತದೆ. ಒಂದು ಗಿಡಕ್ಕೆ ಕನಿಷ್ಠವೆಂದರೂ ಹತ್ತಕ್ಕೂ ಹೆಚ್ಚು ಕಾಯಿ ಬಿಡುತ್ತದೆ. ಸುಮಾರು ಮೂರರಿಂದ ನಾಲ್ಕು ಕೆಜಿ ವರೆಗೆ ಒಂದು ಗಿಡಕ್ಕೆ ಸೀತಾಫಲ ಸಿಗುತ್ತದೆ.

Also Read: ಸೀತಾಫಲ ಹಣ್ಣಿನ ತವರು ಜಿಲ್ಲೆ ಯಾದಗಿರಿಯಲ್ಲಿ 2 ತಿಂಗಳ ಕಾಲ ಗ್ರಾಹಕರು-ಮಾರಾಟಗಾರರಿಗೆ ಸುಗ್ಗಿ ಸಂಭ್ರಮ, ಒಂದು ನೋಟ ಇಲ್ಲಿದೆ

ಕೆಜಿಗೆ 50 ರೂಪಾಯಿ ದರ ಸಿಕ್ಕರೂ ಕೂಡಾ ಎಕರೆಗೆ ಎರಡುವರೆ ಲಕ್ಷ ರೂಪಾಯಿ ಆದಾಯ ಪಡೆಯಬಹುದೆಂದು ರೈತ ಹೇಳುತ್ತಿದ್ದಾರೆ. ಇನ್ನು ಒಕ್ಕಲುತನ ಮಾಡುವುದೆಂದರೇ ಮೂಗು ಮುರಿಯುವಂಥ ಜನರೇ ಹೆಚ್ಚು. ಭೂತಾಯಿಯನ್ನು ನಂಬಿ ಶ್ರದ್ಧಾಭಕ್ತಿಯಿಂದ ಹಗಲಿರುಳು ದುಡಿಯುತ್ತಿದ್ದುದರಿಂದ ಭೂತಾಯಿ ಒಲಿದು ನನ್ನ ಆರ್ಥಿಕಮಟ್ಟ ಗಣನೀಯವಾಗಿ ಸುಧಾರಿಸಿದೆ.

ನನ್ನ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳು ಕೃಷಿಕಾರ್ಯಗಳಲ್ಲಿ ನೆರವಾಗುತ್ತಿರುವುದರಿಂದ ಕೂಲಿಯಾಳು ಖರ್ಚಿಲ್ಲ. ಸರ್ಕಾರದ ಸಹಾಯ ಸೌಲಭ್ಯ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಮೈಮುರಿದು ದುಡಿದರೆ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು. ಇದಕ್ಕೂ ಮುನ್ನ ಮಳೆಯಾಧಾರಿತ ಕೃಷಿಯಿಂದ ತೀವ್ರ ಬಡತನ ಕಾಡುತ್ತಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು ಆದರೆ ತೋಟಗಾರಿಕೆ ಬೆಳೆ ಬೆಳೆಯಲು ಶುರು ಮಾಡಿದಾಗಿನಿಂದ ಸುಖವಾಗಿದ್ದೇನೆ ಎಂದು ರೈತ ಸಂಜು ಪ್ರಭ ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ