ಬಳಕೆ ಅನುಕೂಲ ಮಾಡದೆ ಐತಿಹಾಸಿಕ ಬಾವಿಗಳ ನಿರ್ಲಕ್ಷ್ಯ: ಅಧಿಕಾರಿಗಳು ಮತ್ತು ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಬೇಸರ

Bidar News: ಶತ ಶತಮಾನಗಳಿಂದ ಎಂದೂ ಕೂಡ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಆದರೇ ಇಂತಹ ಅಪರೂಪದ ಬಾವಿಗಳ ನೀರನ್ನ ಬಳಸಿಕೊಳ್ಳುವುದರಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮುಂದಾಗದಿರುವುದು ದುರಂತವೇ ಸರಿ.

ಬಳಕೆ ಅನುಕೂಲ ಮಾಡದೆ ಐತಿಹಾಸಿಕ ಬಾವಿಗಳ ನಿರ್ಲಕ್ಷ್ಯ: ಅಧಿಕಾರಿಗಳು ಮತ್ತು ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಬೇಸರ
ಐತಿಹಾಸಿಕ ಬಾವಿ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 19, 2023 | 11:04 PM

ಬೀದರ್​, ಆಗಸ್ಟ್​ 19: ಶತಮಾನಗಳಷ್ಟೂ ಪುರಾತನವಾದ ಬಾವಿಗಳು (historical wells) ಆ ಜಿಲ್ಲೆಯಲ್ಲಿ ಸಾಕಷ್ಟಿವೆ. ಎಂತಹ ಭೀಕರ ಬರಗಾದಲ್ಲಿಯೂ ಆ ಬಾವಿಯಲ್ಲಿ ನೀರು ಖಾಲಿಯಾಗೋದೆ ಇಲ್ಲ. ಅಪರೂಪದಲ್ಲಿ ಅಪರೂಪದಂತಿರುವ ಇಂತಹ ಐತಿಹಾಸಿಕ ಬಾವಿಗಳ ಸುತ್ತಮುತ್ತಲೂ ಗಿಡಗಂಟೆಗಳು ಬೆಳೆದು ಹಾಳಾಗುತ್ತಿವೆ. ತನ್ನ ಕಲಾ ವೈಭವದಿಂದ ಜನರನ್ನ ತನ್ನತ್ತ ಸೆಳೆಯುವ ಬಾವಿಗಳ ನೀರನ್ನ ಜಿಲ್ಲಾಢಳಿತ ಬಳಕೆ ಮಾಡದೆ ನಿರ್ಲಕ್ಷ ಮಾಡುತ್ತಿವೆ.

ಜಿಲ್ಲೆಯಲ್ಲಿ ಬಹುಮನಿ ಸುಲ್ತಾನರ ಕಾಲದ ಸುಮಾರು ಐದು ಶತಮಾನಗಳಷ್ಟೂ ಹಳೆದಾದ ನೂರಾರು ಬಾವಿಗಳು ಜಿಲ್ಲೆಯಲ್ಲಿದ್ದು ಎಂಥಹ ಭೀಕರವಾದ ಬರಗಾದಲ್ಲಿಯೂ ಕೂಡಾ ಈ ಬಾವಿಗಳು ಬತ್ತಿದ ಉದಾಹರಣೆಯಿಲ್ಲ. ಇಲ್ಲಿನ ಬಾವಿಗಳನ್ನ ಆಗಿನ ಕಾಲದಲ್ಲಿ ವೈಜ್ಜಾನಿಕವಾಗಿ ಎಲ್ಲಿ ನೀರಿನ ಶೆಲೆ ಜಾಸ್ತಿಯಿದೆಯೋ ಅಲ್ಲಯೇ ಬಾವಿಗಳನ್ನ ನಿರ್ಮಾಣ ಮಾಡಿ ಸುತ್ತಮುತ್ತಲಿ ಗ್ರಾಮಗಳಿಗೆ ಇದೇ ಬಾವಿಗಳನ್ನ ನೀರನ್ನ ಉಪಯೋಗಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪುಷ್ಟು ನೀಡುವಂತೆ ಇಂದು ಕೂಡಾ ಇಲ್ಲಿನ ಬಾವಿಯಲ್ಲಿ ನೀರು ತುಂಬಿತುಳುಕುತ್ತಿವೆ.

ಇದನ್ನೂ ಓದಿ: ಬೀದರ್​: ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಕಂಡ ರೈತ; ಹೇಗೆ, ಯಾವ ತಳಿ? ಇಲ್ಲಿದೆ

ಗ್ರಾಮದ ಅಕ್ಕ ಪಕ್ಕದಲ್ಲಿಯೇ ಇಂಥಹ ಬಾವಿಗಳಿದ್ದು, ನೀರನ್ನ ಗ್ರಾಮಗಳ ಜನರ ಬಳಕೆಗೆ ಜಾಣುವಾರಗಳಿಗೆ ಕುಡಿಯಲು ಬಳಸಿದರೂ ಕೂಡಾ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗಿನ ನೀರಿನ ದಾಹ ಇಂಗಿದಂತಾಗುತ್ತದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಇನ್ನೂ ಜಿಲ್ಲಾಳಿತದ ನಿರ್ಲಕ್ಷ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ನೀರಿನ ಮೂಲ ಸಾಕಷ್ಟಿದ್ದರೂ ಅದು ಜನರ ಬಳಕೆಗೆ ಮಾತ್ರ ಬರುತ್ತಿಲ್ಲ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಕೆಲವೂ ಬಾವಿಗಳಲ್ಲಿ ಹೋಳು ತುಂಬಿಕೊಂಡಿದ್ದು, ಬಾವಿಯಲ್ಲಿ ನೀರು ಕಡೆಮೆಯಾಗಿದೆ. ಹೋಳು ತೆಗೆಸಿ ಎಂದು ಇಲ್ಲಿನ ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ನಗರದ ಅಷ್ಟೂರು, ಪತ್ತೆಪುರ, ಹಾಗೂ ನಗರದ ಇನ್ನಿತರ ಪ್ರದೇಶದಲ್ಲಿರುವ ಸಿಹಿ ನೀರಿನ ಬಾವಿಗಳು ಸ್ಥಳೀಯ ನಗರಸಭೆ ಆಡಳಿತದ ನಿರ್ಲಕ್ಷ್ಯಕ್ಕೊಳಗಾಗಿ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಇಲ್ಲಿನ ಬಾವಿಗಳಲ್ಲಿ ಇಂದಿಗೂ ಸಾಕಷ್ಟು ಪ್ರಮಾಣದ ಜಲವನ್ನು ತುಂಬಿಕೊಂಡಿವೆ. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ‌ ಕೆಲ ಬಾವಿಗಳ ನೀರು ಪಾಚಿಗಟ್ಟಿಕೊಂಡು ಹಾಳಾಗಿವೆ.

ನಗರದಲ್ಲಿನ ಪುರಾತನ ಕಾಲದ ಅನೇಕ ಬಾವಿಗಳನ್ನು ಅಭಿವೃದ್ಧಿ ನೆಪದಲ್ಲಿ ನಗರಸಭೆ ಮುಚ್ಚಿ ಕೈತೊಳೆದುಕೊಂಡಿದೆ. ಪ್ರತಿವರ್ಷವೂ ಕೂಡಾ ಬೆಸಿಗೆಕಾಲದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ, ಹೀಗಿದ್ದರೂ ಸಹ ಪುರಾತನ ಕಾಲದ ಜಲಮೂಲಗಳನ್ನು ಸಂರಕ್ಷಣೆ ಮಾಡಿ ಸರಿಯಾಗಿ ನಿರ್ವಹಣೆ‌ ಮಾಡುವ ಗೋಜಿಗೆ ಹೋಗದೆ ಇರೋದು ವಿಪರ್ಯಾಸ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯಕ್ಕೆ ಬೀದರ್ ನಂಬರ್ ಒನ್​: ರೈತರ ಆಸಕ್ತಿಗೆ ಪ್ರಧಾನಿ ಮೋದಿ ಶ್ಲಾಘನೆ

ಪ್ರತಿ ಬೇಸಿಗೆಯಲ್ಲಿಯೂ ಕೂಡಾ ಜಿಲ್ಲೆಯ ಜನರು ನೀರಿನ ಸಮಸ್ಯೆಯಿಂದ ಪ್ರತಿ ವರ್ಷವೂ ಕೂಡಾ ಜನರು ಪರದಾಡುತ್ತಾರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಪ್ರತಿವೂ ಕೂಡಾ ಕೋಟ್ಯಾಂತರ ರೂಪಾಯಿ ಹಣವನ್ನ ಖುರ್ಚಮಾಡುತ್ತಲೇ ಬರುತ್ತಿದ್ದಾರೆಯೇ ಹೊರತು ಶಾಶ್ವತ ಕುಡಿಯು ನೀರಿನ ಸಮಸ್ಯೆಗೆ ಪರಿಹಾರ ಮಾತ್ರ ಇಂದಿಗೂ ಸಿಕ್ಕಿಲ್ಲ. ಆದರೇ ಇದೇ ಹಣವನ್ನ ಪುರಾತನ ಬಾವಿಯ ಹೋಳನ್ನ ತೆಗೆಸಿ ಇದೇ ಬಾವಿಯಿಂದ ಗ್ರಾಮಕ್ಕೆ ಪೈಪ್ ಲೈನ ಮಾಡಿಸಿ ಬಳಸಿಕೊಂಡರೇ ಎಂತಹ ಬೆಸಿಗೆಯಲ್ಲಿಯೂ ಕೂಡಾ ಕೆಲವೂ ಗ್ರಾಮದ ಜನರ ನೀರಿನ ದಾಹ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಜಿಲ್ಲೆಯ ಸುಪ್ರದಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನದ ಸುತ್ತಮುತ್ತಲೂ ಕೂಡಾ ಸಾಕಷ್ಟು ಐತಿಹಾಸಿಕ ಬಾವಿಗಳಿದ್ದು ಈ ದೆವಸ್ಥಾನಕ್ಕೆ ಪ್ರತಿ ವರ್ಷವೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಆದರೆ ಇಲ್ಲಿನ ಬಾವಿಗಳನ್ನ ಸ್ಚಚ್ಚಗೊಳಿಸಿ ಅವುಗಳ ಹೂಳು ತೆಗೆಸಿ ಆ ನೀರಿನ್ನ ಭಕ್ತರು ಬಳಕೆಗೆ ಅನೂಕೂಲ ಕಲ್ಪಿಸಿದರೆ ಭಕ್ತರಿಗೂ ಕೂಡಾ ಅನೂಕೂಲವಾಗುತ್ತದೆ.

ಶತ ಶತಮಾನಗಳಿಂದ ಎಂದೂ ಕೂಡಾ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಆದರೇ ಇಂತಹ ಅಪರೂಪದಲ್ಲಿ ಅಪರೂಪವಾದ ಬಾವಿಗಳ ನೀರನ್ನ ಬಳಸಿಕೊಳ್ಳುವುದರಲ್ಲಿ ನಮ್ಮ ಜಿಲ್ಲಾಢಳಿತ, ಜನಪ್ರತಿನಿಧಿಗಳು ಮುಂದಾಗದಿರುವುದು ದುರಂತವೇ ಸರಿ.

ಒಂದು ಕಾಲದಲ್ಲಿ ಸಾವಿರಗಟ್ಟಲೇ ಇದ್ದ ಬಾವಿಗಳು ಇಂದು ಬೆರಳೇನೀಕೆಯಷ್ಟಕ್ಕೆ ಬಂದಿರುವುದಕ್ಕೆ ನಾವು ಪುರತನ ಬಾವಿಗಳನ್ನ ರಕ್ಷಣೆ ಮಾಡದೇ ಇರುವುದೇ ಇದಕ್ಕೆ ಒಂದು ಪ್ರಮುಖವಾದ ಕಾರಣವಾಗಿದ್ದು ಈಗ ಇರುವ ಬಾವಿಯನ್ನಾದರೂ ಜಿಲ್ಲಾಢಳಿತ ಸಂರಕ್ಷಣೆ ಮಾಡಿ ಅಲ್ಲಿನ ನೀರನ್ನ ಸಾರ್ವಜನಿಕರಿಗೆ ಬಳಕೆಗೆ ಅನೂಕುಲ ಕಲ್ಪಿಸಿಕೊಡಿ ಎಂದು ಇಲ್ಲಿನ ಜನರ ಆಸೆಯಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:03 pm, Sat, 19 August 23