ಸಕ್ಕರೆ ಕಾರ್ಖಾನೆಗಳಿಂದ ಬೆಂಬಲ ಬೆಲೆ ಸಿಗದೆ ಆಲೆಮನೆಗಳತ್ತ ಹೆಜ್ಜೆ ಹಾಕಿದ ರೈತರು – ಕೃಷಿ ಇಲಾಖೆ ಇವರಿಗೆ ನೆರವು ನೀಡುತ್ತದಾ?
Sugarcane growers: ಬೀದರ್ ಜಿಲ್ಲೆಯ ಕೆಲ ರೈತರು ತಾವು ಬೆಳೆದ ಕಬ್ಬನ್ನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸದೇ, ತಾವೇ ತಮ್ಮ ಹೊಲದಲ್ಲಿ ಅಲ್ಪಪ್ರಮಾಣದ ಬಂಡವಾಳ ಹೂಡಿಕೆ ಮಾಡಿ, ಬೆಲ್ಲ ತಯಾರಿಸಿ, ಮಾರಾಟ ಮಾಡಿ, ತಮ್ಮ ಬದುಕಿನ ಬಂಡಿಯನ್ನ ಸಾಗಿಸುತ್ತಿದ್ದಾರೆ.
ವರ್ಷವಿಡಿ ಬೆವರು ಹರಸಿ ದುಡಿದು ಬೆಳೆಸಿದ ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆ ಕೊಡಿ ಎಂದು ರೈತರು ಹೋರಾಡಿದರೂ ಸಕ್ಕರೆ ಕಾರ್ಖಾನೆಗಳು ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲ ಕೊಡ್ತಾ ಇಲ್ಲ. ಕಬ್ಬು ಬೆಳೆ ರೈತರು (Sugarcane growers) ಹೋರಾಟ, ಪ್ರತಿಭಟನೆಗಳನ್ನ ಮಾಡಿದರೂ ಸಹದ ಅದು ಅವರ ಕೈ ಹಿಡಿಯಲಿಲ್ಲ. ಆದ್ರೆ ಈಗ ಕಬ್ಬು ಬೆಳೆಗಾರರಿಗೆ ಕೈ ಹಿಡಿದಿರುವುದು ಅಲೆಮನೆಗಳು (Jaggery making unit). ಕಾರ್ಖಾನೆಗೆ ಸಾಗಿಸೋ ಬದಲು ಪುಟ್ಟದಾಗಿ ತಮ್ಮ ಹೊಲದಲ್ಲೆ ಆಲೆಮನೆಗಳನ್ನ (Aalemane) ಮಾಡಿಕೊಂಡು ರೈತರು ಲಾಭ ಪಡೆಯೋ ನಿಟ್ಟಿನಲ್ಲಿ ಸಾಗಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ……
ಸಕ್ಕರೆ ಕಾರ್ಖಾನೆಗಳಿಗೆ ಸೆಡ್ಡು ಹೊಡೆದು ಬೆಲ್ಲ ತಯಾರಿಸುತ್ತಿರುವ ಬೀದರ್ (Bidar) ರೈತರು. ನೈಸರ್ಗಿಕ ಬೆಲ್ಲ ತಯಾರಿಸಿ, ವಾರಕ್ಕೆ ಸಾವಿರ ಸಾವಿರ ಹಣ ಗಳಿಸುತ್ತಿದ್ದಾರೆ, ದೊಡ್ಡ ಪ್ರಮಾಣದಲ್ಲಿ ಆಲೆಮನೆಗಳನ್ನ ನಿರ್ಮಿಸಿಕೊಂಡು ಜಿಲ್ಲೆಯ ರೈತರು ಬೆಲ್ಲ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೌದು, ಬೀದರ್ ಜಿಲ್ಲೆಯ ಕೆಲ ರೈತರು ತಾವು ಬೆಳೆದ ಕಬ್ಬನ್ನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸದೇ, ತಾವೇ ತಮ್ಮ ಹೊಲದಲ್ಲಿ ಅಲ್ಪಪ್ರಮಾಣದ ಬಂಡವಾಳ ಹೂಡಿಕೆ ಮಾಡಿ, ಬೆಲ್ಲ ತಯಾರಿಸಿ, ಮಾರಾಟ ಮಾಡಿ, ತಮ್ಮ ಬದುಕಿನ ಬಂಡಿಯನ್ನ ಸಾಗಿಸುತ್ತಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ರೈತ ಓಂಪ್ರಕಾಶ್ ಪಾಟೀಲ್ ತಮ್ಮ ಜಮೀನಿನಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಲ್ಲ ತಯಾರಿಕಾ ಘಟಕವನ್ನ ಸ್ಥಾಪಿಸಿದ್ದು, 24 ಗಂಟೆಯೂ ಕೂಡಾ ಬೆಲ್ಲ ತಯಾರು ಮಾಡಲಾಗುತ್ತಿದೆ.
ಪ್ರತಿದಿನವೂ 50 ಟನ್ ರಷ್ಟು ಕಬ್ಬು ನುರಿಸಿ ಬೆಲ್ಲ ತಯಾರಿಸಲಾಗುತ್ತಿದ್ದು 50 ಜನರಿಗೆ ಕೆಲಸಕ್ಕೆ ಇಟ್ಟುಕೊಂಡು ಬೆಲ್ಲ ತಯಾರಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಸೇರಿದಂತೆ ರೈತರ ಕಬ್ಬನ್ನ ಸಕ್ಕರೆ ಕಾರ್ಖಾನೆಯ ಮಾಲೀಕರು ಕೊಡುವ ಬೆಲೆಗಿಂತಲೂ ಇನ್ನೂರು ರೂಪಾಯಿ ಹೆಚ್ಚಿಗೆ ದರ ಕೊಟ್ಟು ಕಬ್ಬು ಖರೀದಿಸಿ ಬೆಲ್ಲ ತಯಾರಿಸುವ ಮೂಲಕ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಡ್ಡು ಹೊಡೆದು ನಿಂತಿದ್ದಾರೆ. ಇದರಿಂದ ರೈತರಿಗೆ ಪ್ರತಿ ವಾರವೂ ಬೆಲ್ಲ ಮಾರಾಟ ಮಾಡಿದ ಹಣ ಕೈಸೇರುತ್ತಿದ್ದು ಸುಃಖ ಜೀವನ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಿ ಆ ಹಣಕ್ಕಾಗಿ ವರ್ಷಗಟ್ಟಲೇ ಕಬ್ಬು ಮಾರಾಟ ಮಾಡಿದ ಹಣಕ್ಕಾಗಿ ಅಲೇಯೋ ಬದಲು ತಾವೇ ಬೆಲ್ಲ ತಯಾರಿಸಿ ಲಾಭ ಪಡೆಯೋ ಪ್ಲಾನ್ ಮಾಡಿದ ರೈತ ಈಗ ಯಶ ಕಂಡಿದ್ದಾರೆ. ಇಂದು ಕಬ್ಬನ್ನ ಕಾರ್ಖಾನೆಗಳಿಗೆ ಸಾಗಿಸೋ ಬದಲು ರೈತರು ತಾವೆ ಬೆಲ್ಲವನ್ನ ತಯಾರಿಸಿ ಮಾರಾಟ ಮಾಡಿ ಲಾಭವನ್ನ ಪಡೆಯುತ್ತಿದ್ದಾರೆ ಎನ್ನುತ್ತಾರೆ ಬೆಲ್ಲ ತಯಾರಿಸುವ ರೈತ ಓಂಪ್ರಕಾಶ್ ಪಾಟೀಲ್.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾಕಂದ್ರೆ ಕಬ್ಬಿಗೆ ಬೆಂಬಲ ಬೆಲೆ ಕೊಡದೆ ಸಕ್ಕರೆ ಕಾರ್ಖಾನೆಗಳು ರೈತರನ್ನ ಹಿಂಡಿ ಹಿಪ್ಪೆ ಮಾಡಿವೆ. ಇತ್ತ ಕಬ್ಬು ಕಾರ್ಖಾನೆಗಳಿಗೆ ಸಾಗಣೆಯಾಗದೆ ಒಣಗಿ ಹೋಗುತ್ತಿದೆ. ಇದೆಲ್ಲದರಿಂದ ಮುಕ್ತಿ ಹೊಂದಿ ಲಾಭ ಪಡೆಯೋ ದೃಷ್ಟಿಯಿಂದ ಈಗ ರೈತರು ಆಲೆಮನೆಗಳತ್ತ ವಾಲುತ್ತಿದ್ದಾರೆ. ಇನ್ನೂ ಇಲ್ಲಿನ ರೈತರು ತಯಾರಿಸುವ ಬೆಲ್ಲ ಕೆಮಿಕಲ್ ಮಿಶ್ರಣ ವಲ್ಲದ ಬೆಲ್ಲವಾಗಿದೆ. ಹೀಗಾಗಿ ಈ ಬೆಲ್ಲ ತಿಂದರೆ ಆರೋಗ್ಯವಂತರಾಗಿರುವುದು ಎನ್ನುತ್ತಾರೆ ಇಲ್ಲಿನ ರೈತರು. ಇನ್ನು ಓಂಪ್ರಕಾಶ್ ಪಾಟೀಲ್ ಅನ್ನೋ ರೈತ ಬೆಲ್ಲ ತಯಾರಿಸುತ್ತಿದ್ದು ತಮ್ಮ ಹೊಲದ ಕಬ್ಬನ್ನಷ್ಟೇ ಅಲ್ಲದೇ ರೈತರಿಂದ ಕಾರ್ಖಾನೆಯವರು ಕೊಡುವ ಬೆಲೆಗಿಂತ ಜಾಸ್ತಿ ಹಣಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೂ ಕೂಡಾ ಲಾಭವಾಗುತ್ತಿದೆ ಎನ್ನುತ್ತಾರೆ ಓಂಪ್ರಕಾಶ್.
ಇನ್ನು ಬೀದರ್ ಜಿಲ್ಲೆಯಲ್ಲಿ ಮಳೆ ಕಡಿಮೆ, ಕಡಿಮೆ ಮಳೆಯಲ್ಲಿಯೇ ಇಲ್ಲಿನ ರೈತರು ಕಬ್ಬು ಬೆಳೆದು ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿದರೆ ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ರೈತರ ಕಬ್ಬನ್ನ ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಬ್ಬು ಒಣಗಿ ಹೋಗಿ ರೈತರು ಸಂಕಷ್ಟ ಎಣಿಸಬೇಕಾದ ಸ್ಥಿತಿ ಸಾಕಷ್ಟು ಸಲ ಇಲ್ಲಿನ ರೈತರಿಗೆ ಬಂದಿತ್ತು.
ಕಾರ್ಖಾನೆಯವರು ಕಬ್ಬನ್ನ ಸಮಯಕ್ಕೆ ಸರಿಯಾಗಿ ತೆಗದುಕೊಂಡು ಹೋಗದಿದ್ದರೇ ಕಬ್ಬನ ತೂಕದಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿ ರೈತರು ನಷ್ಟ ಅನುಭವಸುತ್ತಾಗಿತ್ತು ಹೀಗಾಗಿ ಇದರಿಂದ ಮನನೊಂದಿರುವ ಕೆಲವೂ ರೈತರು ತಾವೇ ಬೆಲ್ಲವನ್ನ ತಯ್ಯಾರಿಸಿ ಮಾರಾಟ ಮಾಡಿ ಲಾಭ ಪಡೆಯುದ್ದಾರೆ. ಇನ್ನೂ ರೈತರು ತಯ್ಯಾರಿಸುವ ಬೆಲ್ಲವನ್ನ ರೈತರ ಹೊಲಗಳಿಗೆ ಬಂದು ಹೋಲ್ ಬೆಲ್ಲ ಮಾರಾಟಗಾರರು ಖರೀಧಿಸಿಕೊಂಡು ಹೋಗುತ್ತಿದ್ದು ರೈತರಿಗೆ ಇದರಿಂದ ಲಾಭವಾಗುತ್ತಿದೆ ಅಂತಾರೆ ಯುವ ರೈತ ರಾಹುಲ್.
ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ಸಿಗಲಿ:
ಮುಖ್ಯವಾದ ವಿಷಯ ಅಂದ್ರೆ ಕೃಷಿ ಇಲಾಖೆಯಿಂದ ಎಲ್ಲದಕ್ಕೂ ರೈತರಿಗೆ ರಿಯಾಯಿತಿ ಸಿಗುತ್ತೆ. ಆದ್ರೆ ಆಲೆಮನೆಗಳಿಗೆ ಮಾತ್ರ ರಿಯಾಯಿತಿ ಹಣ ಇಲ್ಲ! ಈ ಬಗ್ಗೆ ರೈತರು ಕೃಷಿ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಆಲೆಮನೆಗಳಿಗೂ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಾಮಗ್ರಿಗಳು ಸಿಕ್ಕರೆ ಇನ್ನೂ ಕೂಡ ರೈತರು ಹೆಚ್ಚಿನ ಆದಾಯ ಗಳಿಸಿ ಸಕ್ಕರೆ ಕಾರ್ಖಾನೆಗಳ ಕಾಟದಿಂದ ಮುಕ್ತರಾಗಬಹುದು. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)
Also Read: ಖತರ್ನಾಕ್ ಮರ್ಡರ್ ಸ್ಟೋರಿ! ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೆಸಿಕೊಂಡಿದ್ದ ಪ್ರೇಯಸಿ ಮಾಡಿದ್ದು ಏನು ಗೊತ್ತಾ?
Also Read: ಜನರಲ್ಲಿ ಹೆಚ್ಚಾಗ್ತಿದೆ ಶ್ವಾನ ಪ್ರೀತಿ, ಅದಕ್ಕೆ ಹಾಸನದಲ್ಲಿ ನಡೆದ ಈ ಡಾಗ್ ಷೋ ಸಾಕ್ಷಿ! ಫೋಟೊ ಗ್ಯಾಲರಿ