ಯಾಕಿಷ್ಟು ನಿರ್ಲಕ್ಷ್ಯ; ಬಸವಕಲ್ಯಾಣ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪರದಾಟ ಒಂದೆರೆಡಲ್ಲ

ಬಸವಕಲ್ಯಾಣ ಪಟ್ಟಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯಿಲ್ಲದೆ ನಡೆದುಕೊಂಡೇ ಶಿಕ್ಷಣ ಕಲಿಯಬೇಕಾದ ಗಭೀರವಾದ ಸ್ಥಿತಿ ಎದುರಾಗಿದೆ. 5 ಕಿ.ಮೀನಷ್ಟು ನಡೆದು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದರೂ ಬಸ್​ ವ್ಯವಸ್ಥೆ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.

  • TV9 Web Team
  • Published On - 7:12 AM, 11 Jan 2021
ಯಾಕಿಷ್ಟು ನಿರ್ಲಕ್ಷ್ಯ; ಬಸವಕಲ್ಯಾಣ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪರದಾಟ ಒಂದೆರೆಡಲ್ಲ
ಬಸವಕಲ್ಯಾಣದ ಸರಕಾರಿ ಪ್ರಥಮ ದರ್ಜೆ ಕಾಲೇಜು

ಬೀದರ್: ಬಸವಕಲ್ಯಾಣ ಪಟ್ಟಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ವಿದ್ಯಾರ್ಥಿಗಳನ್ನು ಹೈರಾಣಾಗಿಸಿದೆ. ಬಸ್ ವ್ಯವಸ್ಥೆಯಿಲ್ಲದೆ ನಡೆದುಕೊಂಡೇ ಶಿಕ್ಷಣ ಕಲಿಯಬೇಕಾದ ಗಭೀರ ಸ್ಥಿತಿ ಕಾಲೇಜು ವಿದ್ಯಾರ್ಥಿಗಳಿಗೆ ಎದುರಾಗಿದೆ. 500 ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜಿಗೆ ಸ್ವಂತದಾದ ಕಟ್ಟಡವಿದ್ದರೂ ಕೊಠಡಿಗಳ ಸಮಸ್ಯೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಕೈಗೊಂಡರೂ ಯಾವುದೇ ಏಳಿಗೆ ಕಂಡಿಲ್ಲ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಮಾಡಿಕೊಂಡರೂ ಏನು ಪ್ರಯೋಜನವಾಗುತ್ತಿಲ್ಲ.

ಬಸವಕಲ್ಯಾಣ ಪಟ್ಟಣದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿದೆ ಕಾಲೇಜು. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಒಟ್ಟು 550ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಗ್ರಾಮೀಣ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಈ ಕಾಲೇಜು ಬಸವಕಲ್ಯಾಣ ಪಟ್ಟಣದಿಂದ ಸುಮಾರು 5 ಕಿಲೋ ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿದೆ. ಆದರೆ ಇಲ್ಲಿಗೆ ಯಾವುದೇ ಬಸ್ ವ್ಯವಸ್ಥೆಯಿಲ್ಲದ ಕಾರಣ ವಿದ್ಯಾರ್ಥಿಗಳು ನಡೆದುಕೊಂಡೇ ಕಾಲೇಜಿಗೆ ಹೋಗಬೇಕಾದ ಸ್ಥಿತಿಯಿದೆ.

ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆಯಿಲ್ಲ ಮತ್ತು ಜನದಟ್ಟಣೆ ಇಲ್ಲದ ಪ್ರದೇಶದವಾದ್ದರಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುವುದೂ ಸಹ ಕಷ್ಟವಾಗಿದೆ. ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನದ ವ್ಯವಸ್ಥೆಯೂ ಸರಿಯಾಗಿಲ್ಲ.

ಬೀದರ್: ಪಂಚತಾರಾ ವಿಶ್ವ ವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ; ಬರೋಬ್ಬರಿ 1269 ಹುದ್ದೆಗಳು ಖಾಲಿ!