ನಿಜಾಮರು ಗಿಫ್ಟ್ ಕೊಟ್ಟಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು, ಅದನ್ನೀಗ ಪುರಾತತ್ವ ಇಲಾಖೆ ತನ್ನದು ಅನ್ನುತ್ತಿದೆ! ರೈತರ ಗತಿಯೇನು?
ಬೀದರ್ ಕೋಟೆ ಇಡೀ ಏಷ್ಯಾಖಂಡದಲ್ಲಿಯೇ ಅತೀ ದೊಡ್ಡ ಕೋಟೆ ಎಂಬ ಹೆಗ್ಗಳಿಗೆ ಇಲ್ಲಿನ ಕೋಟೆಗಿದ್ದು ಇದೇ ಕೋಟೆಯ ಆವರಣದಲ್ಲಿ ಎರಡು ಪುಟ್ಟದಾದ ಗ್ರಾಮಗಳಿವೆ. ನೂರಾರು ವರ್ಷದ ಹಿಂದೆ ನಿಜಾಮರು ಗಿಫ್ಟ್ ಆಗಿ ಕೊಟ್ಟಿದ್ದ ಅಲ್ಲಿನ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು. ಈಗ ಆ ಜಮೀನಿನ ಮೇಲೆ ಪುರಾತತ್ವ ಇಲಾಖೆಯ ಕಣ್ಣು ಬಿದ್ದಿದ್ದು ಯಾರಿಗೂ ಗೊತ್ತಾಗದಂತೆ ಸರಕಾರ ಫಲವತ್ತಾದ ಈ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಹಾಗಾದರೆ ಆ ರೈತರ ಗತಿಯೇನು?
ಅವರು ಸ್ವಾಂತತ್ರ್ಯ ಪೂರ್ವದಿಂದಲೂ ಆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ನಾಲ್ಕೈದು ತಲೆಮಾರುಗಳಿಂದ ಆ ಊರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲಿರುವ ಅಲ್ಪಸ್ವಲ್ಪ ಜಮೀನಿನಿನಲ್ಲೇ ವ್ಯವಸಾಯ ಮಾಡಿಕೊಂಡು ಸುಂದರ ಬಂದುಕುಕಟ್ಟಿಕೊಂಡಿದ್ದಾರೆ. ಆದರೀಗ ಇಷ್ಟು ವರ್ಷಗಳ ಅವರ ಹೆಸರಿಗಿದ್ದ ಜಮೀನು ಏಕಾಏಕಿ ಪುರಾತತ್ವ ಇಲಾಖೆಯ (Archeology Department) ಹೆಸರಿಗೆ ವರ್ಗಾವಣೆಯಾಗಿದ್ದು ಗ್ರಾಮಸ್ಥರ (Farmers) ಆತಂಕ ಹೆಚ್ಚಿಸುವಂತೆ ಮಾಡಿದೆ… ಐತಿಹಾಸಿಕ ಬೀದರ್ ಕೋಟಿಯೊಳಗಿದೆ (Bidar Fort) ಒಂದು ಪುಟ್ಟ ಗ್ರಾಮ… ಇಲ್ಲಿ ಬೆಳೆಸಲಾಗುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ….. 25 ಕುಟುಂಬಗಳು ವಾಸ ಮಾಡುವ ಈ ಊರಿನ ಜನರ ಬದುಕನ್ನ ಹಸನಾಗಿಸಿದೆ ತರಕಾರಿ ಬೆಳೆ… ನಾಲ್ಕೈದು ತಲೆಮಾರುಗಳಿಂದ ಕೃಷಿ ಮಾಡಿಕೊಂಡಿದ್ದ ಜಮೀನೀಗ ಏಕಾಏಕಿ ಪುರಾತತ್ವ ಇಲಾಖೆ ಹೆಸರಿಗೆ ವರ್ಗಾವಣೆ…
ಹೌದು ಬೀದರ್ ಕೋಟೆ ಇಡೀ ಏಷ್ಯಾಖಂಡದಲ್ಲಿಯೇ ಅತೀ ದೊಡ್ಡ ಕೋಟೆ ಎಂಬ ಹೆಗ್ಗಳಿಗೆ ಇಲ್ಲಿನ ಕೋಟೆಗಿದ್ದು ಇದೇ ಕೋಟೆಯ ಆವರಣದಲ್ಲಿ ಎರಡು ಪುಟ್ಟದಾದ ಗ್ರಾಮಗಳಿವೆ. ಆ ಗ್ರಾಮದ ಹೆಸರು ಒಳಕೋಟೆ ಅಂತಾ ಇಲ್ಲಿ ಗ್ರಾಮದಲ್ಲಿ ತಲಾ 25 ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದಾರೆ. ಇವರ ಪ್ರಮುಖವಾದ ಬೇಸಾಯ ವೆಂದರೆ ತರಕಾರಿ ಬೆಳೆಯುವುದು. ಕೇವಲ 25 ಎಕರೆ ಜಮೀನು ಈ ಗ್ರಾಮದಲ್ಲಿದ್ದು ತರಕಾರಿ ಬೆಳೆಯೇ ಇವರ ಜೀವನಾಧಾರವಾಗಿದೆ.
ಇದ್ದಷ್ಟು ಜಮೀನಿನಲ್ಲಿ ಕೃಷಿ ಮಾಡಿಕೊಂಡು ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದ ಇಲ್ಲಿನ ರೈತರಿಗೆ ಪುರಾತತ್ವ ಇಲಾಖೆ ಶಾಕ್ ಕೊಟ್ಟಿದೆ. ನೂರಾರು ವರ್ಷಗಳಿಂದ ಇಲ್ಲಿನ ಜಮೀನು ಇಲ್ಲಿನ 25 ಕುಟುಂಬದ ಹೆಸರಿನಲ್ಲಿತ್ತು. ಆದರೆ ಈಗ ಏಕಾಏಕಿ ಜಮೀನಿನ ಪಹಣಿಯಲ್ಲಿ ಇವರ ಹೆಸರಿನ ಬದಲಾಗಿ ಭಾರತ ಸರಕಾರ ಭಾರತೀಯ ಪುರಾತತ್ವ ಇಲಾಖೆ ಹೆಸರಿಗೆ ವಾರ್ಗವಣೆ ಆಗಿದೆ.
ನೂರಾರು ವರ್ಷದಿಂದ ಈ ಜಮೀನು ನಮ್ಮ ಹೆಸರಿನಲ್ಲಿತ್ತು ಆದರೆ ಈಗ ಏಕಾಏಕಿ ಒಂದು ನೋಟೀಸ್ ಅನ್ನೂ ಕೊಡದೆ ನಮ್ಮ ಜಮೀನು ಸರಕಾರ ಪಾಲಾಗಿದ್ದು ಹೇಗೆ ಎಂದು ಇಲ್ಲಿನ ವಾಸಗಿಗಳು ಪ್ರಶ್ನಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ತಹಶೀಲ್ದಾರ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನ ಕೇಳಿದರೆ ಅವರು ಸರಿಯಾದ ಉತ್ತರವನ್ನ ಕೊಡುತ್ತಿಲ್ಲ ಎಂದು ಹೇಳುತ್ತಿದ್ದು ನಮಗೆ ನೀವೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಇನ್ನು ಇಲ್ಲಿನ ಜಮೀನನ್ನ ಗ್ರಾಮದ ಯಾರೊಬ್ಬರಿಗೂ ನೋಟೀಸ್ ಕೊಡದೆ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಲ್ಲಿನ ಜಮೀನಿನಲ್ಲಿ ತರಕಾರಿ ಬೆಳೆಸಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ನಮ್ಮ ಜಮೀನನ್ನ ಯಾರಿಗೂ ಹೇಳದೆ ಕೇಳದೆ ಭಾರತ ಸರಕಾರ ತಮ್ಮ ಹೆಸರಿಗೆ ಮಾಡಿಕೊಂಡಿದೆ. ಮುಂದೆ ನಮ್ಮನ್ನ ಇಲ್ಲಿಂದ ಒಕ್ಕಕೆಬ್ಬಿಸುವುದಿಲ್ಲ ಎಂದು ಯಾವ ಗ್ಯಾರಂಟಿ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಇದರ ಜೊತೆಗೆ ಇಲ್ಲಿ ವಾಸಿಸುವ ಗ್ರಾಮಸ್ಥರಿಗೆ ಕಳೆದ ಕೆಲವು ವರ್ಷದಿಂದ ಪುರಾತತ್ವ ಇಲಾಖೆಯ ಅಧಿಕಾರಿಗಳ ಕಿರುಕುಳ ಜಾಸ್ತಿಗಾಗಿದ್ದು ಇಲ್ಲಿ ನೂರಾರು ವರ್ಷದಿಂದ ನೆಲೆ ಕಂಡುಕೊಂಡವರಿಗೆ ಇಲ್ಲಿನ ಬದುಕು ನರಕವಾಗತೊಡಗಿದೆ. ಹತ್ತಾರು ವರ್ಷದಷ್ಟು ಹಳೆದಾದ ಮನೆಗಳು ಇಲ್ಲಿದ್ದು ಈಗ ಕೆಲವು ಮನೆಗಳು ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗಾದಲ್ಲಿ ಎಲ್ಲಾ ಮನೆಗಳು ಸೋರುತ್ತಿದ್ದು ಇಲ್ಲಿನ ಮನೆಯಲ್ಲಿ ವಾಸ ಮಾಡದಂತಾ ಸ್ಥಿತಿ ಇಲ್ಲಿನವರಿಗೆ ಬಂದೊದಗಿದೆ.
ಈ ಮನೆಗಳನ್ನ ರೀಪೇರಿ ಮಾಡಿಕೊಳ್ಳಲೂ ಸಹ ಅಧಿಕಾರಿಗಳು ಬಿಡುತ್ತಿಲ್ಲ. ಇದು ಸಹಜವಾಗಿಯೇ ಇಲ್ಲಿನ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಇನ್ನು ಕೋಟೆಯ ಆವರಣದಲ್ಲಿ ಈ ಗ್ರಾಮಗಳಿರುವುದರಿಂದ ಇಲ್ಲಿನ ಜನರನ್ನ ನೋಡಲು ಸಂಬಂಧಿಕರನ್ನ ಸಹ ಬಿಡುತ್ತಿಲ್ಲ. ಸಂಜೆಯಾದರೆ ಕೋಟೆಯ ಬಾಗಿಲು ಬಂದ್ ಮಾಡೋದರಿಂದ ಗ್ರಾಮಸ್ಥರು ರಾತ್ರಿಯ ಹೊತ್ತಿನಲ್ಲಿ ಆರೋಗ್ಯ ಸಮಸ್ಯೆಯುಂಟಾದರೆ ಹೊರಗಡೆಗೆ ಹೋಗೋದು ಕಷ್ಟವಾಗುತ್ತಿದೆ.
ಇನ್ನು ಇಲ್ಲಿನ ಜನರ ಪ್ರಮುಖ ಉದ್ಯೋಗವೆಂದರೆ ಅದು ವ್ಯವಸಾಯವಾಗಿದೆ. ತಮ್ಮ ಹೊಲವನ್ನ ಹದ ಮಾಡಲು ಯಾವುದೇ ಉಳುಮೆ ಮಾಡುವ ಯಂತ್ರಗಳನ್ನ ಈ ಊರಿನ ಒಳಗಡೆಗೆ ಬಿಡುವುದಕ್ಕೆ ಪುರಾತತ್ವ ಇಲಾಖೆ ನೀಷೇಧ ಹೇರಿದೆ. ಇದರ ಜೊತೆಗೆ ಹೊಲಕ್ಕೆ ಗೊಬ್ಬರ ಹಾಕಲಿಕ್ಕೂ ಕೂಡಾ ಗೊಬ್ಬರವನ್ನ ಈ ಊರಿನ ಒಳಗಡೆಗೆ ಬಿಡದಿರುವುದು ಇಲ್ಲಿನ ರೈತರಿಗೆ ತರಕಾರಿ ಬೆಳೆಯಲಿಕ್ಕೆ ಸಮಸ್ಯೆಯುಂಟಾಗಿದೆ. ಈ ಕಷ್ಟದ ನಡುವೆಯೂ ಇದ್ದಷ್ಟು ಜಮೀನಿನಲ್ಲಿ ಕೃಷಿ ಮಾಡಿಕೊಂಡು, ಬಂದ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಚನ್ನಾಗಿದ್ದೇವೆ. ಈಗ ನಮ್ಮ ಜಮೀನನ್ನ ಸರಕಾರ ತನ್ನ ಹೆಸರಿಗೆ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡಿದೆ ಎಂದು ಹೇಳುತ್ತಿದ್ದಾರೆ ಸಿದ್ರಾಮಪ್ಪ ಪಾಟೀಲ್, ಒಳಕೋಟೆ ನಿವಾಸಿ ರೈತರು.