ಡ್ರಗ್ಸ್ ದಂಧೆ: ನಟಿ ಸಂಜನಾ ಆಪ್ತ ರಾಹುಲ್​ನನ್ನು ವಶಕ್ಕೆ ಪಡೆದ CCB

ಡ್ರಗ್ಸ್ ದಂಧೆ: ನಟಿ ಸಂಜನಾ ಆಪ್ತ ರಾಹುಲ್​ನನ್ನು ವಶಕ್ಕೆ ಪಡೆದ  CCB

[lazy-load-videos-and-sticky-control id=”ta7s0aAz0NM”]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣ ದಿನೇ ದಿನೇ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿಸಿಬಿ ಪೊಲೀಸರು ಚಿತ್ರನಟಿಯ ಆಪ್ತರಿಗೆ ಬಲೆ ಬೀಸುತ್ತಿದ್ದಾರೆ.

ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬೆನ್ನಲ್ಲೇ ನಟಿ ಸಂಜನಾ ಆಪ್ತ ರಾಹುಲ್​ ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ ಕಾರು ಸಮೇತ ರಾಹುಲ್​ನನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನಂತೆ.

ಡ್ರಗ್​ ಪೆಡ್ಲರ್​​ ಆಗಿರುವ ಹಿನ್ನೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ಜೊತೆಗೆ ರಾಹುಲ್​ಗೆ ಸೇರಿದ ಇನೋವಾ ಕಾರು ಕೂಡ ವಶಕ್ಕೆ ಪಡೆಯಲಾಗಿದೆ.

Published On - 10:02 am, Thu, 3 September 20

Click on your DTH Provider to Add TV9 Kannada