ಆನೆಗಳೇ ಹೆಚ್ಚಿರುವ ಚಾಮರಾಜನಗರಕ್ಕಿಲ್ಲ ಟಾಸ್ಕ್​ಪೋರ್ಸ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಆನೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನ ಪರಿಹರಿಸಲು ಸರ್ಕಾರ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಿದೆ.‌ ಆದರೆ ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರ ಜಿಲ್ಲೆಯನ್ನೆ ಟಾಸ್ಕ್ ಪೋರ್ಸ್​​ನಿಂದ ಕೈಬಿಡಲಾಗಿದೆ.

ಆನೆಗಳೇ ಹೆಚ್ಚಿರುವ ಚಾಮರಾಜನಗರಕ್ಕಿಲ್ಲ ಟಾಸ್ಕ್​ಪೋರ್ಸ್
ಟಾಸ್ಕ್​ ಪೋರ್ಸ್​ನಿಂದ ಆನೆಗಳು ಹೆಚ್ಚಿರುವ ಚಾಮರಾಜನಗರ ಜಿಲ್ಲೆಯ ಹೆಸರು ಹೊರಕ್ಕೆ
Follow us
TV9 Web
| Updated By: Rakesh Nayak Manchi

Updated on:Nov 28, 2022 | 5:09 PM

ಚಾಮರಾಜನಗರ: ಜಿಲ್ಲೆಯ ಶೇ 50 ರಷ್ಟು ಅರಣ್ಯದಿಂದಲೇ ಕೂಡಿರುವ ಜಿಲ್ಲೆಯಾಗಿದೆ. ಅದರಲ್ಲೂ ಸುಮಾರು 2ಸಾವಿರಕ್ಕೂ ಹೆಚ್ಚು ಆನೆಗಳು ವಾಸಿಸುವ ಅರಣ್ಯ ಪ್ರದೇಶವನ್ನು ಹೊಂದಿದೆ. ಇದರಿಂದಲ್ಲೆ ಜಿಲ್ಲೆಯಲ್ಲಿ‌ ನಿರಂತರವಾಗಿ ವನ್ಯಜೀವಿ ಮಾನವ ಸಂಘರ್ಷ ಉಂಟಾಗುತ್ತಿದೆ. ಅದರಲ್ಲೂ ಆನೆಗಳ ಹಾವಳಿ (Elephant menace)ಯಿಂದ ಜನರ ಜೀವಗಳೂ ಹೋಗಿವೆ. ಇದೇ ರೀತಿಯ ಸಮಸ್ಯೆ ಬೇರೆ ಜಿಲ್ಲೆಗಳಲ್ಲು ಇದೆ. ಇದನ್ನ ಮನಗಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನೆಗಳ ಹಾವಳಿ ಪರಿಹಾರಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನ ರಚಿಸಿದ್ದಾರೆ. ಇದರಲ್ಲಿ ಮೈಸೂರು, ಕೊಡುಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಒಳಗೊಂಡಿದೆ. ಆದರೆ ಸರ್ಕಾರ ಈ ಟಾಸ್ಕ್ ಪೋರ್ಸ್ (Task Force)​​ನಲ್ಲಿ ಚಾಮರಾಜನಗರ ಜಿಲ್ಲೆ (Chamarajanagar District)ಯನ್ನೇ ಕೈಬಿಟ್ಟಿರುವುದು ಆಶ್ವರ್ಯವಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ಶಾಸಕರು ಈ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪ್ರಮುಖವಾಗಿ ಚಾಮರಾಜನಗರ ಜಿಲ್ಲೆಯ ಹನೂರು ಮಹದೇಶ್ವರ ಬೆಟ್ಟದ ಭಾಗದಲ್ಲಿ ಸಾಕಷ್ಟು ಆನೆ ಹಾವಳಿ ಇದೆ. ಆನೆ ಹಾವಳಿಯಿಂದ ಜೀವ ಹಾನಿ, ಜಮೀನಿನಲ್ಲಿ ಬೆಳೆ ಹಾನಿಯಂತ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ.‌ ಹಾನಿ ಹಾವಳಿ ಇರುವ ಕಾರಣ ಆನೆಗಳಿಗೆ ರೇಡಿಯೋ ಕಾಲರ್​ಗಳನ್ನು ಮಹದೇಶ್ವರ ಬೆಟ್ಟಭಾಗದಲ್ಲಿ ಹಾಕಲಾಗಿದೆ.‌ ಹೀಗಿದ್ದರೂ ಸರ್ಕಾರ ಜಿಲ್ಲೆಯನ್ನ ಟಾಸ್ಕ್ ಪೋರ್ಸ್​​ನಿಂದ ಕೈಬಿಟ್ಟಿರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಎಚ್ಚರ…ಎಚ್ಚರ… ಚಾಮರಾಜನಗರದಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸಿ ಸರ್ಕಾರಿ ಜಾಗವನ್ನೇ ಮಾರಾಟ ಮಾಡುವ ಜಾಲ ಬೆಳಕಿಗೆ

“ಕರ್ನಾಟಕದಲ್ಲೇ ಅತಿಹೆಚ್ಚು ಆನೆಗಳಿರುವ ಜಿಲ್ಲೆ ಚಾಮರಾಜನಗರವಾಗಿದೆ. ಸಾಕಷ್ಟು ಸಾವುನೋವು ಸಂಭವಿಸಿದೆ. ಈ ಬಾರಿ ಇಬ್ಬರು ಮೂವರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ ಕೆಲವೊಂದು ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿ ಬೆಳೆ ನಾಶಗೊಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಜಿಲ್ಲೆಗೂ ಒಂದು ಟಾಸ್ಕ್​ ಪೋರ್ಸ್ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸುತ್ತೇನೆ.” -ನರೇಂದ್ರ, ಹನೂರು ಶಾಸಕ

ಇದು ಒಂದು ಕಡೆಯಾದರೆ, ಟಾಸ್ಕ್ ಪೋರ್ಸ್​​ನಲ್ಲಿರುವ ಅಧಿಕಾರಿಗಳ ಬಗ್ಗೆಯು ವನ್ಯಜೀವಿ ತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಎಂಟು ಜನರ ಆನೆ ಕಾರ್ಯಪಡೆಯಲ್ಲಿರುವ ಅಧಿಕಾರಿಗಳಿಗೆ ಆನೆ ಮಾನವ ಸಂಘರ್ಷ ತಡೆಗಟ್ಟಬೇಕಾದ ಅನುಭವವೇ ಇಲ್ಲವಂತೆ. “ಇಲ್ಲಿರುವ ಅರ್ಧಕ್ಕಿಂತ ಹೆಚ್ಚು ಅಧಿಕಾರಿಗಳು ಸಾಮಾಜಿಕ ಅರಣ್ಯದಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಆದರೆ ಸಂಘರ್ಷ ತಡೆಗಟ್ಟಲು ಏನು ಮಾಡಬೇಕು ಎಂಬ ಅನುಭವ ಇಲ್ಲ. ಟಾಸ್ಕ್ ಪೋರ್ಸ್ ಮಾಡಿರುವುದು ಒಳ್ಳೆಯ ನಿರ್ಧಾರ‌, ಆದರೆ ಅದನ್ನ ಸರಿಯಾಗಿ ಮಾಡಿದರೆ ಒಳ್ಳೆಯದಾಗುತ್ತದೆ” ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸರ್ಕಾರ ಜನರು ಒಳಿತಿಗೆ ಒಂದೊಂದಏ ಯೋಜನೆ ರೂಪಿಸುತ್ತಿದೆ. ಒಂದು ಕಡೆ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರ ಸಿಗುತ್ತಿಲ್ಲ ಎನ್ನುವ ಕೂಗು ಇದ್ದರೆ, ಯೋಜನೆಯನ್ನೆ ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ ಎಂಬ ಆರೋಪವೂ ಇದರ ಬೆನ್ನಲ್ಲೇ ಇದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಲಿ ಎಂಬುದೆ ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Mon, 28 November 22

ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?