ಕಠಿಣ ಕೊರೊನಾ ಮಾರ್ಗಸೂಚಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕ್ಷೇತ್ರದಲ್ಲಿ ಹೂಬೆಳೆಗಾರರ ತೀವ್ರ ಆಕ್ರೋಶ

ಕೊರೊನಾ ಎರಡನೆ ಅಲೆ ನಿಯಂತ್ರಿಸಲು ಕಠಿಣ ನಿಯಮಗಳ ಜಾರಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಫ್ಲವರ್ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲವೆಂದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಸರ್ಕಾರದ ಈ ನಡೆಯಿಂದ ರೈತರು ಹೂ ಬೆಳೆಗೆ ಬೆಲೆಯಿಲ್ಲವೆಂದು ಆಕ್ರೋಶಗೊಂಡಿದ್ದಾರೆ.

  • TV9 Web Team
  • Published On - 12:09 PM, 3 Apr 2021
ಕಠಿಣ ಕೊರೊನಾ ಮಾರ್ಗಸೂಚಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕ್ಷೇತ್ರದಲ್ಲಿ ಹೂಬೆಳೆಗಾರರ ತೀವ್ರ ಆಕ್ರೋಶ
ಇತ್ತ ಕೊರೊನಾ ಮಾರ್ಗಸೂಚಿ ಮುರಿದರೆ ಜೈಲು ಶಿಕ್ಷೆ ಅನ್ನುತ್ತಿದ್ದರೆ ಅತ್ತ ಆರೋಗ್ಯ ಸಚಿವ ಸುಧಾಕರ್ ಕ್ಷೇತ್ರದಲ್ಲೇ ಹೂಬೆಳೆಗಾರರು ತೀವ್ರ ಆಕ್ರೋಶ

ಚಿಕ್ಕಬಳ್ಳಾಪುರ: ಇತ್ತ ಕೊರೊನಾ ಮಾರ್ಗಸೂಚಿ ಮುರಿದರೆ ಜೈಲು ಶಿಕ್ಷೆ ಗ್ಯಾರಂಟಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಬೆಂಗಳೂರಿನಲ್ಲಿ ಹೇಳುತ್ತಿದ್ದರೆ ಅತ್ತ ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಹೂಬೆಳೆಗಾರರು ಕಠಿಣ ಮಾರ್ಗಸೂಚಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ 2ನೇ ಅಲೆ ತಡೆಗೆ ಕಠಿಣ ನಿಯಮ ಜಾರಿಯಾಗಿರುವ ಬೆನ್ನಿಗೆ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಕ್ಷೇತ್ರದಲ್ಲಿ ರೈತರು ತೀವ್ರ ಆಕ್ರೋಶಗೊಂಡಿದ್ದಾರೆ. ಸರ್ಕಾರದ ನಿರ್ಧಾರದಿಂದ ರೈತರ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ ಎಂದು ಚಿಕ್ಕಬಳ್ಳಾಪುರದ ಫ್ಲವರ್ ಮಾರ್ಕೆಟ್​ನಲ್ಲಿ ರೈತರು, ವರ್ತಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Coronavirus guidelines vigilant farmers merchants angry at flower market in chikkaballapur 33

ಚಿಕ್ಕಬಳ್ಳಾಪುರ ನಗರದ ಫ್ಲವರ್ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ

ಕೊರೊನಾ ಎರಡನೆ ಅಲೆ ನಿಯಂತ್ರಿಸಲು ಕಠಿಣ ನಿಯಮಗಳ ಜಾರಿ ಹಿನ್ನೆಲೆಯಲ್ಲಿ ನಗರದ ಫ್ಲವರ್ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಸರ್ಕಾರದ ಈ ನಡೆಯಿಂದ ರೈತರು ಹೂ ಬೆಳೆಗೆ ಬೆಲೆಯಿಲ್ಲವೆಂದು ಆಕ್ರೋಶಗೊಂಡಿದ್ದಾರೆ.

ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಕ್ಷೇತ್ರದಲ್ಲಿ ರೈತರು ತೀವ್ರ ಆಕ್ರೋಶ