ವಾಟದಹೊಸಹಳ್ಳಿ: ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ ಪವರ್​ ಮ್ಯಾನ್ ಸ್ಥಳದಲ್ಲಿಯೇ ಸಾವು

ಹೈಟೆನ್ಷನ್​ ವೈರ್ ದುರಸ್ತಿ ಮಾಡಲು KPTCL ಸಿಬ್ಬಂದಿ ನಾಗರಾಜ್​ ಕಂಬವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಂಬದಲ್ಲಿ ವಿದ್ಯುತ್​ ಪ್ರವಹಿಸಿದ್ದರಿಂದ ಲೈನ್‌ಮನ್ ನಾಗರಾಜ್ ಕಂಬದ ಮೇಲೆಯೇ ಸಾವನ್ನಪ್ಪಿದ್ದಾರೆ.

  • TV9 Web Team
  • Published On - 11:09 AM, 27 Jan 2021
ವಾಟದಹೊಸಹಳ್ಳಿ: ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ ಪವರ್​ ಮ್ಯಾನ್ ಸ್ಥಳದಲ್ಲಿಯೇ ಸಾವು
KPTCL ಲೈನ್ ಮ್ಯಾನ್ ನಾಗರಾಜ್

ಚಿಕ್ಕಬಳ್ಳಾಪುರ: ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್​ ಪ್ರವಹಿಸಿದ ಪರಿಣಾಮದಿಂದಾಗಿ ಕಂಬದ ಮೇಲೆಯೇ ಪವರ್​ಮನ್ ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ.

KPTCL ಲೈನ್ ಮ್ಯಾನ್ ನಾಗರಾಜ್ ಸ್ಥಳದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಹೈಟೆನ್ಷನ್​ ವೈರ್ ದುರಸ್ತಿ ಮಾಡಲು KPTCL ಸಿಬ್ಬಂದಿ ನಾಗರಾಜ್​ ಕಂಬವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಂಬದಲ್ಲಿ ವಿದ್ಯುತ್​ ಪ್ರವಹಿಸಿದ್ದರಿಂದ ಲೈನ್‌ಮನ್ ನಾಗರಾಜ್ ಕಂಬದ ಮೇಲೆಯೇ ಸಾವನ್ನಪ್ಪಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಲೈನ್ ರಿಪೇರಿ ವೇಳೆ ಪವರ್ On ಮಾಡಿಸಿದ ಅಧಿಕಾರಿಗಳು, ಪವರ್​ಮನ್​ಗೆ shock​