ಬೆಂಗಳೂರು ನಗರದ ಜನ ಬೆಂಗಳೂರಿನಲ್ಲೇ ಲಸಿಕೆ ಪಡೆಯಿರಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಲಸಿಕೆಗಾಗಿ ನೆರೆಯ ಜಿಲ್ಲೆಗಳಿಗೆ ಹೋಗಿ ಗೊಂದಲ ಸೃಷ್ಟಿಸಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು ನಗರದ ಜನ ಬೆಂಗಳೂರಿನಲ್ಲೇ ಲಸಿಕೆ ಪಡೆಯಿರಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)

ಚಿಕ್ಕಬಳ್ಳಾಪುರ: ಕೊರೊನಾ ಲಸಿಕೆ ಪಡೆಯಲು ಬೆಂಗಳೂರಿನವರು ನೆರೆಯ ಜಿಲ್ಲೆಗಳಿಗೆ ವಲಸೆ ಹೋಗುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಬೆಂಗಳೂರು ನಗರದ ಜನ ಬೆಂಗಳೂರಿನಲ್ಲೇ ಲಸಿಕೆ ಪಡೆಯಿರಿ. ಲಸಿಕೆಗಾಗಿ ನೆರೆಯ ಜಿಲ್ಲೆಗಳಿಗೆ ಹೋಗಿ ಗೊಂದಲ ಸೃಷ್ಟಿಸಬೇಡಿ. ಮನವಿ ಮಾಡಿಕೊಂಡಿದ್ದಾರೆ.

ನಂತರದಲ್ಲಿ ಲಸಿಕೆ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲಸಿಕೆ
ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ 2 ಲಸಿಕೆಗಳು ಗುಣಮಟ್ಟದ್ದಾಗಿವೆ. ಸಕಾಲಕ್ಕೆ ಯಾವುದು ಸಿಗುತ್ತೋ ಅದನ್ನು ಹಾಕಿಸಿಕೊಳ್ಳಿ ಆದರೆ ಮೊದಲ ಡೋಸ್ ಯಾವುದನ್ನು ಪಡೆಯುತ್ತೀರೋ, ಎರಡನೇ ಡೋಸ್ ಕೂಡ ಅದನ್ನೇ ಹಾಕಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಬಳಿಕ ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕೀತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.

ಶವಸಂಸ್ಕಾರಕ್ಕೆ ಕಂಟ್ರೋಲ್ ರೂಂ ಓಪನ್: ಸಚಿವ ಅಶೋಕ್
ಕೋವಿಡ್ ಸೊಂಕಿನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಶವಸಂಸ್ಕಾರ ಆಗಬೇಕು ಎಂದು ರಾಜ್ಯ ಸರ್ಕಾರ ಬೆಂಗಳೂರಿಗೆ ಅನ್ವಯವಾಗುವಂತೆ ಕಂಟ್ರೋಲ್ ರೂಂ ಸ್ಥಾಪಿಸಿದೆ. 19 ಮಂದಿ, ಮೂರು ಶಿಫ್ಟ್ ನಲ್ಲಿ ಇಲ್ಲಿ ಕೆಲಸ ಮಾಡುತ್ತಾರೆ. 84959 98495 ಇದು ಕಾಲ್ ಸೆಂಟರ್ ನಂಬರ್. ಗಿಡ್ಡೇನಹಳ್ಳಿಯಲ್ಲಿ ಪ್ರಾರಂಭ ಆಗಿದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

ಇದು ಬೆಂಗಳೂರಿಗೆ ಮಾತ್ರ ಸಂಬಂಧಿಸಿದ್ದು. ಶವ ಸಾಗಣೆಗೆ ನಾವೇ ಟೈಂ ಫಿಕ್ಸ್ ಮಾಡುತ್ತೇವೆ. ಸಂಬಂಧಿಕರು ಎಷ್ಟು ಗಂಟೆಗೆ ಹೋಗಬೇಕು ಎಂದು ನಾವೇ ಹೇಳುತ್ತೇವೆ ಎಂದು ತಿಳಿಸಿರುವ ಸಚಿವ ಅಶೋಕ್, ಶವ ಸಂಸ್ಕಾರಕ್ಕೆ ಆಂಬುಲೆನ್ಸ್​  ಬದಲು ಬೇರೆ ವಾಹನದಲ್ಲಿ ಶವವನ್ನು ತೆಗೆದುಕೊಂಡು ಹೋಗಬಹುದು. ಕೋವಿಡ್ ನಿಂದ ಮೃತ ಪಟ್ಟವರ ಸಂಬಂಧಿಕರ ಬಳಿ ಯಾವುದೇ ಸುಲಿಗೆ ಮಾಡಬಾರದು. ಎಲ್ಲವೂ ಫ್ರೀಯಾಗಿ ನೆರವೇರಬೇಕು. ಯಾವುದಕ್ಕೂ ಹಣ ಕೊಡುವ ಹಾಗಿಲ್ಲ. ಕೊನೆಗೆ ಬೂದಿ (ಅಸ್ಥಿ) ತೆಗೆದುಕೊಳ್ಳುವ ಮಡಿಕೆ ಕೂಡ ಫ್ರೀ ಇರುತ್ತೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.

 

ಇದನ್ನೂ ಓದಿ:

ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ಯಾವುದೇ ರೋಗ ಲಕ್ಷಣಗಳಿಲ್ಲದೆ, ಸುಳಿವೂ ನೀಡದೆ ಯುವಕರನ್ನು ಬಲಿ ಪಡೆಯುತ್ತಿದೆ ಕೊರೊನಾ; ಏನಿದು ಹ್ಯಾಪಿ ಹೈಪೋಕ್ಸಿಯಾ?