ಕೆರೆಗೆ ಹಾರಿ ಬಾಲಕಿ ಸಾವು; ಯುವಕನಿಂದ ಕಿರುಕುಳ ಆರೋಪ

ಯುವಕನ ಕಿರುಕುಳ ತಾಳಲಾರದೇ ಕೆರೆಗೆ ಹಾರಿ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವಗುಟ್ಟಹಳ್ಳಿಯಲ್ಲಿ ನಡೆದಿದೆ. ಪ್ರೀತಿಸುವಂತೆ ಬಾಲಕಿಗೆ ಯುವಕ ಗಂಗರಾಜ ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

  • TV9 Web Team
  • Published On - 12:55 PM, 15 Feb 2021
ಕೆರೆಗೆ ಹಾರಿ ಬಾಲಕಿ ಸಾವು; ಯುವಕನಿಂದ ಕಿರುಕುಳ ಆರೋಪ
ಕೆರೆಗೆ ಹಾರಿ ಸಾವನ್ನಪ್ಪಿರುವ ಬಾಲಕಿ

ಚಿಕ್ಕಬಳ್ಳಾಪುರ: ಯುವಕನ ಕಿರುಕುಳ ತಾಳಲಾರದೇ ಕೆರೆಗೆ ಹಾರಿ ಅಪ್ರಾಪ್ತ ವಯಸ್ಸಿನ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವಗುಟ್ಟಹಳ್ಳಿಯಲ್ಲಿ ನಡೆದಿದೆ. ಪ್ರೀತಿಸುವಂತೆ ಬಾಲಕಿಗೆ ಯುವಕ ಗಂಗರಾಜು ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಎಸ್.ಎಂ. ಕೊಂಡರಾಜಹಳ್ಳಿ ರೆಡ್ಡಿ ಗ್ರಾಮದ ಬಾಲಕಿ ಸಾವನ್ನಪ್ಪಿದ್ದಾಳೆ.

ಮೂರು ದಿನಗಳಿಂದ ಬಾಲಕಿ ನಾಪತ್ತೆಯಾಗಿದ್ದಳು. ಮಗಳ ನಾಪತ್ತೆ ವಿಷಯ ತಿಳಿದ ಪೋಷಕರು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು (ಫೆಬ್ರವರಿ 15) ರೆಡ್ಡಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

love Harassment of youth

ಯುವಕ ಗಂಗರಾಜು

ಇದನ್ನೂ ಓದಿ:  ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ