ಜ್ವರ, ಕೆಮ್ಮು, ನೆಗಡಿಯಿಂದ ಅಸ್ವಸ್ಥಗೊಂಡ ಕೋತಿಗಳು; ಚಿಕ್ಕಬಳ್ಳಾಪುರದ ಜನತೆಗೆ ಹೆಚ್ಚಾದ ಕೊರೊನಾ ಆತಂಕ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಕೋತಿಗಳು ಕಾಯಿಲೆಯಿಂದ ಬಳಲುತ್ತಿವೆ. ಜ್ವರ, ಕೆಮ್ಮು, ನೆಗಡಿಯಿಂದ ಕೋತಿಗಳು ಸುಸ್ತಾಗಿವೆ. ಕೋತಿಗಳ ಅಸ್ವಸ್ಥತೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಜಂಗಮಶೀಗೆಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಜ್ವರ, ಕೆಮ್ಮು, ನೆಗಡಿಯಿಂದ ಅಸ್ವಸ್ಥಗೊಂಡ ಕೋತಿಗಳು; ಚಿಕ್ಕಬಳ್ಳಾಪುರದ ಜನತೆಗೆ ಹೆಚ್ಚಾದ ಕೊರೊನಾ ಆತಂಕ
ಅಸ್ವಸ್ಥಗೊಂಡಿರುವ ಮಂಗಗಳು

ಚಿಕ್ಕಬಳ್ಳಾಪುರ: ಕಣ್ಣಿಗೆ ಕಾಣದ ಸೋಂಕಿನಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಸಾವು, ನೋವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಮನೆ ಮಂದಿಯನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮುಂದೆ ನಮಗ್ಯಾರು ದಿಕ್ಕು ಅಂತ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಕೋತಿಗಳಿಗೂ ಕೊರೊನಾ ಸೋಂಕು ತಗುಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಜಂಗಮಶೀಗೆಹಳ್ಳಿ ಗ್ರಾಮದಲ್ಲಿ ಇದ್ದಕ್ಕಿದ್ದ ಹಾಗೆ ಕೋತಿಗಳು ಕಾಯಿಲೆಯಿಂದ ಬಳಲುತ್ತಿವೆ. ಜ್ವರ, ಕೆಮ್ಮು, ನೆಗಡಿಯಾಗಿ ಕೋತಿಗಳು ಅಸ್ವಸ್ಥಗೊಂಡಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಕೋತಿಗಳು ಕಾಯಿಲೆಯಿಂದ ಬಳಲುತ್ತಿವೆ. ಜ್ವರ, ಕೆಮ್ಮು, ನೆಗಡಿಯಿಂದ ಕೋತಿಗಳು ಸುಸ್ತಾಗಿವೆ. ಕೋತಿಗಳ ಅಸ್ವಸ್ಥತೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಜಂಗಮಶೀಗೆಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸಾಮಾಜಿಕ ಅಂತರ ಕಾಪಾಡದ ಹೋಟೆಲ್​ಗಳಿಗೆ ದಂಡ
ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಸುಖಾಸುಮ್ಮನೆ ಅನಗತ್ಯವಾಗಿ ಬೈಕ್, ಕಾರುಗಳಲ್ಲಿ ಓಡಾಡುತ್ತಿದ್ದಾರೆ. 10 ಗಂಟೆವರೆಗೂ ಅವಕಾಶವಿದೆ ಎಂದು ಪೊಲೀಸರು ಯಾವ ಕ್ರಮಕ್ಕೂ ಮುಂದಾಗದೆ ಸುಮ್ಮನಾಗಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡದ ಹೋಟೆಲ್​ಗಳಿಗೆ ದಂಡ ಹಾಕಲಾಗಿದೆ. ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ನಗರದ ಬಸವೇಶ್ವರ ಹೋಟೆಲ್ ಸೇರಿದಂತೆ ಹಲವು ಹೋಟೆಲ್ಗಳಿಗೆ ದಂಡ ವಿಧಿಸಿ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಕಟ್ಟಿದ ಬಟ್ಲರ್; ಭಾರತೀಯರದ್ದೇ ಸಿಂಹಪಾಲು! ರೈನಾ, ಗೇಲ್, ವಾರ್ನರ್​ಗಿಲ್ಲ ಸ್ಥಾನ

ಚಿತ್ರದುರ್ಗ: ನಡು ರಸ್ತೆಗೆ ಬಂದ ಕೌಟುಂಬಿಕ ಕಲಹ: ಪತ್ನಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್

(monkeys are sick with fever cough and cold in Chikballapur)