Garje Gram Panchayat: ಪದವೀಧರೆ ಯುವತಿಗೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲ, ಈಗ ಅಮ್ಮ-ಮಗಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷೆಯಾದರು!

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮದಲ್ಲಿ ಪದವೀಧರೆ ಯುವತಿಗೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲ, ಈಗ ಅಮ್ಮ-ಮಗಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷೆಯಾದರು! ಇನ್ನು ಇವರು ಸದಸ್ಯರ ಆ ನಂಬಿಕೆಯನ್ನ ಹೇಗೆ ಉಳಿಸಿಕೊಂಡು ಬೆಳೆಸಿಕೊಳ್ಳುತ್ತಾರೆ ಅನ್ನೋದು ಸದ್ಯದ ಪ್ರಶ್ನೆ.

Garje Gram Panchayat: ಪದವೀಧರೆ ಯುವತಿಗೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲ, ಈಗ ಅಮ್ಮ-ಮಗಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷೆಯಾದರು!
ನೇತ್ರಾವತಿ-ಸ್ನೇಹ: ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Aug 09, 2023 | 11:01 AM

ದಿಲ್ಲಿ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಕಷ್ಟ. ಪಕ್ಷದ ಬ್ಯಾನರ್ ಅಡಿ ಎಂ.ಪಿ-ಎಂಎಲ್‍ಎ ಬೇಕಾದ್ರು ಆಗ್ಬೋದು. ಆದ್ರೆ, ಹಳ್ಳಿ ರಾಜಕೀಯದಲ್ಲಿ ಸದಸ್ಯ ಆಗೋದು ಕಷ್ಟ. ಅದ್ರಲ್ಲು ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರಾಗೋದು ಇನ್ನೂ ಕಷ್ಟ. ಹೀಗಿರುವಾಗ ಅಮ್ಮ-ಮಗಳು (mother, daughter) ಒಂದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದ್ರೆ ಹೇಗಿರುತ್ತೆ ಅಲ್ವಾ? ಅಂತಹಾ ಒಂದು ಅಪರೂಪದ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ. 20ರ ಹರೆಯದ ಮಗಳು ಅಧ್ಯಕ್ಷೆ. ಆಕೆಯ ತಾಯಿ ಉಪಾಧ್ಯಕ್ಷೆ. ಆದ್ರೆ, 20ರ ಯುವತಿ ಅಧ್ಯಕ್ಷೆ ಒತ್ತಟ್ಟಿಗಿರಲಿ, ಸದಸ್ಯೆಯಾಗಿದ್ದೇ ರಣರೋಚಕ. ಅಂತದ್ರಲ್ಲಿ ಈಗ ಅಧ್ಯಕ್ಷೆ! ಆ ಅದೃಷ್ಟವಂತ ಅಮ್ಮ…ಮಗಳು ಯಾರು ಅಂತೀರಾ… ಈ ಸ್ಟೋರಿ ನೋಡಿ. ಇವ್ರೆ ನೋಡಿ ಆ ಅದೃಷ್ಟವಂತ ಅಮ್ಮ….ಮಗಳು. ಈಕೆಯ ಹೆಸ್ರು ಸ್ನೇಹ. ವಯಸ್ಸು 20ರ ಆಸುಪಾಸು. ಇನ್ನು ಈ ಮಹಿಳೆ ಸ್ನೇಹ ಅವರ ತಾಯಿ ನೇತ್ರಾವತಿ. ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮದವರು. ಗರ್ಜೆ ಗ್ರಾಮ ಪಂಚಾಯಿತಿಗೆ (Garje Gram Panchayat) ಸ್ನೇಹ ಅಧ್ಯಕ್ಷೆ. ಆಕೆ ತಾಯಿ ನೇತ್ರಾವತಿ ಉಪಾಧ್ಯಕ್ಷೆ. ಗರ್ಜೆ-ಜಿ.ಮಾದಾಪುರ ಎರಡು ಗ್ರಾಮ ಸೇರಿ ಒಂದು ಪಂಚಾಯಿತಿ. ಒಟ್ಟು ಏಳು ಜನ ಸದಸ್ಯರು. ಕಳೆದ ಅವಧಿಗೆ ಬೇರೆಯವರು ಅಧ್ಯಕ್ಷರು-ಉಪಾಧ್ಯಕ್ಷರಾಗಿದ್ದರು.

ಈ ಬಾರಿ ಅಧ್ಯಕ್ಷೆ ಸ್ಥಾನ ಜನರಲ್ ಲೇಡಿಗೆ ಬಂದಿತ್ತು. ಉಪಾಧ್ಯಕ್ಷೆ ಸ್ಥಾನ ಬಿಸಿಎಂ ಲೇಡಿಗೆ ಬಂದಿತ್ತು. ಏಳು ಜನ ಸದಸ್ಯರಲ್ಲಿ ಕೆಲ ವಿರೋಧ ಇದ್ದೇ ಇರುತ್ತೆ. ಇಲ್ಲು ಇತ್ತು. ಏರಡಲ್ಲಿ 3 ಜನರ ಗುಂಪು ಒಂದು. 4 ಜನರ ಗುಂಪು ಮತ್ತೊಂದು. ಆ ವಿರೋಧದ ಮಧ್ಯೆಯೂ ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿರೋದ್ರಿಂದ ತಾಯಿ-ಮಗಳು ಇಬ್ಬರು ಖುಷಿಯಾಗಿದ್ದಾರೆ. ನಾವು ಗೆಲ್ತೀವಿ ಅನ್ನೋದೆ ಕನಸಾಗಿತ್ತು. ಅದೃಷ್ಟದಿಂದ ಗೆದ್ವಿ. ಆದ್ರೆ, ಅಧ್ಯಕ್ಷರು-ಉಪಾಧ್ಯಕ್ಷರು ಆಗ್ತೀವಿ ಅಂತ ಕನಸಲ್ಲೂ ಕಂಡಿರಲಿಲ್ಲ. ಈಗ ಆಗಿದ್ದೇವೆ. ಜನ ನಂಬಿಕೆ ಉಳಿಸಿಕೊಂಡು ಒಳ್ಳೆ ಕೆಲಸ ಮಾಡ್ಬೇಕು ಅಂತಾರೆ ಉಪಾಧ್ಯಕ್ಷೆ ನೇತ್ರಾವತಿ.

45ರ ಅಮ್ಮ ನೇತ್ರಾವತಿ ಉಪಾಧ್ಯಕ್ಷೆಯಾಗಿದ್ದು ದೊಡ್ಡ ವಿಚಾರವಿಲ್ಲ. ಆದ್ರೆ, 20ರ ಮಗಳು ಅಧ್ಯಕ್ಷೆಯಾಗಿದ್ದೇ ರಣರೋಚಕ. ಪದವಿ ಓದಿರೋ ಆಕೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲ. ಜಿ.ಮಾದಾಪುರ ಹಾಗೂ ಗರ್ಜೆ ಎರಡೂ ಗ್ರಾಮದಲ್ಲೂ ನೇತ್ರಾವತಿಯನ್ನ ನಿಲ್ಲಿಸೋಕೆ ಬಂಬೆಲಿಗರು ತೀರ್ಮಾನಿಸಿದ್ದರು. ಎರಡೂ ಕಡೆ ಗೆದ್ರೆ ಮತ್ತೆ ಉಪಚುನಾವಣೆ ನಡೆಯುತ್ತೆ ಎಂದು ನಾಮಪತ್ರ ಸಲ್ಲಿಕೆಯ ಕಡೇ ದಿನದ ಕೊನೆ ಐದು ನಿಮಿಷದಲ್ಲಿ ಆಮೇಲೆ ನೋಡೋಣ ಎಂದು ಸ್ನೇಹ ತಂದೆ ಸ್ನೇಹಿತರು ಸ್ನೇಹಾಳ ಹೆಸರು ಸೇರಿಸಿ ನಾಮಪತ್ರ ಸಲ್ಲಿಸಿದ್ದರು. ಅಮ್ಮ-ಮಗಳು ಇಬ್ಬರು ಗೆದ್ದೇಬಿಟ್ರು. ಗೆದ್ದಿದ್ದೇ ಪುಣ್ಯ ಎಂದುಕೊಂಡಿದ್ದ ಅಮ್ಮ-ಮಗಳು ಇಂದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿರೋದ್ನ ನೆನೆದು ಇಬ್ಬರೂ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದು, ಊರಿನ ಜನ ಹಾಗೂ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಒಳ್ಳೆ ಕೆಲಸ ಮಾಡಬೇಕೆಂದು ಕನಸ ಕಟ್ಟಿದ್ದಾರೆ.

ಒಟ್ಟಾರೆ, ಕಾಫಿನಾಡ ಚಿಕ್ಕಮಗಳೂರು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ, ಒಂದೇ ಮನೆಯಲ್ಲಿ ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಮಂತ್ರಿಗಳಾಗಿದ್ದಾರೆ. ಆದ್ರೆ, ಹಳ್ಳಿಯ ಜಾತಿ ರಾಜಕೀಯದಲ್ಲಿ ಸದಸ್ಯರಾಗೋದೆ ಕಷ್ಟಸಾಧ್ಯ. ಹೀಗಿರುವಾಗ ಆಧುನಿಕ ರಾಜಕೀಯ ಕುರುಕ್ಷೇತ್ರದಲ್ಲಿ ಒಂದೇ ಮನೆಯ ತಾಯಿ-ಮಗಳು ಇಬ್ಬರು ಅಧ್ಯಕ್ಷರು-ಉಪಾಧ್ಯಕ್ಷರಾಗಿರೋದು ನಿಜಕ್ಕೂ ಸಾಧನೆಯೇ ಸರಿ. ಆದ್ರೆ, ಅವರು ಸದಸ್ಯರ ಆ ನಂಬಿಕೆಯನ್ನ ಹೇಗೆ ಉಳಿಸಿಕೊಂಡು ಬೆಳೆಸಿಕೊಳ್ಳುತ್ತಾರೆ ಅನ್ನೋದು ಸದ್ಯದ ಪ್ರಶ್ನೆ.

 ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ