Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಓಗೊಟ್ಟು ಮೈಸೂರು ಮೃಗಾಲಯದಿಂದ ಮೂರು ಹಕ್ಕಿಗಳನ್ನು ದತ್ತು ಪಡೆದ ದಂಪತಿ

ಕೊರೋನಾದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹೀಗಾಗಿ ನಾವು ಕೆಲ ಪಕ್ಷಿಗಳನ್ನು ದತ್ತು ಪಡೆದಿದ್ದೇವೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತೇವೆ ಎಂದು ಪಕ್ಷಿಗಳನ್ನು ದತ್ತು ಪಡೆದ ಸಂದೀಪ್ ತಿಳಿಸಿದ್ದಾರೆ.

Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಓಗೊಟ್ಟು ಮೈಸೂರು ಮೃಗಾಲಯದಿಂದ ಮೂರು ಹಕ್ಕಿಗಳನ್ನು ದತ್ತು ಪಡೆದ ದಂಪತಿ
ಪಕ್ಷಿಗಳನ್ನು ದತ್ತು ಪಡೆದ ದಂಪತಿ

ಚಿಕ್ಕಮಗಳೂರು: ಪ್ರಾಣಿ ಪ್ರೀಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮದೇ ಆದ ಮಿನಿ ಜೂ ಹೊಂದಿದ್ದಾರೆ ಮತ್ತು ಅಲ್ಲಿ ಅನೇಕ ತರನಾದ ಪ್ರಾಣಿ -ಪಕ್ಷಿಗಳಿವೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದರೆ ಸದ್ಯ ನಟ ದರ್ಶನ್ ಕೊರೊನಾ ಕಾಲಘಟ್ಟದಲ್ಲಿ ಜನರಂತೆ ಪ್ರಾಣಿ-ಪಕ್ಷಿಗಳು ಕೂಡ ಸಂಕಷ್ಟದಲ್ಲಿವೆ ಅವುಗಳನ್ನು ಸಾಧ್ಯವಾದಷ್ಟು ದತ್ತು ಪಡೆಯಿರಿ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸೆಲೆಬ್ರಿಟಿಗಳು ಏನಾದರೂ ಒಂದು ಉತ್ತಮ ಕಾರ್ಯ ಮಾಡಿದಾಗ ಅದನ್ನು ಅನುಕರಣೆ ಮಾಡುವವರು ಮತ್ತು ಅವರಂತೆ ನಡೆದುಕೊಳ್ಳುವವರು ಇತ್ತಿಚೇಗೆ ತುಂಬಾ ಮಂದಿ ಇದ್ದಾರೆ. ಅದರಂತೆ ನಟ ದರ್ಶನ್ ಅವರ ಪ್ರಾಣಿ ಪ್ರೀತಿ ಮತ್ತು ಪರಿಸರ ಕಾಳಜಿಯಿಂದ ಪ್ರೇರಣೆಗೊಳಗಾದ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಜೊತೆಗೂಡಿ ಮೈಸೂರಿನ ಮೃಗಾಲಯದ ಪಕ್ಷಿಗಳನ್ನು ದತ್ತು ಪಡೆದು ಮಾನವೀಯತೆಯನ್ನು ಮೆರೆದಿದ್ದಾರೆ.

ಚಿಕ್ಕಮಗಳೂರಿನ ಸಂದೀಪ್ ವಸಿಷ್ಠ ಅವರಿಗೆ ಚಿಕ್ಕಂದಿನಿಂದಲೂ ಪ್ರಾಣಿ ಪಕ್ಷಿಗಳ ಮೇಲೆ ಎಲ್ಲಿದ್ದ ಪ್ರೀತಿ ಅದರಂತೆ ನಡ ದರ್ಶನ್ ಮೇಲೂ ಕೂಡ ಅತಿ ಹೆಚ್ಚು ಅಭಿಮಾನ . ಹೀಗಾಗಿ ಸಂದೀಪ್ ತಮ್ಮ ಪತ್ನಿ ಜತೆಗೂಡಿ ಮೈಸೂರಿನ ಮೃಗಾಲಯದಲ್ಲಿನ ಮೂರು ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಸಂದೀಪ್ ವರ್ಷಕ್ಕೆ 10 ಸಾವಿರದಂತೆ ಎರಡು ಎಮೋಗಳನ್ನು ದತ್ತು ಪಡೆದಿದ್ದಾರೆ, ಇನ್ನು ಅವರ ಪತ್ನಿ ಕೂಡ ವರ್ಷಕ್ಕೆ 4300 ರೂಪಾಯಿಯಂತೆ ಒಂದು ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ.

ದರ್ಶನ್ ಅವರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದರು. ಈ ಮಾತಿಗೆ ಈಗಾಗಲೇ ರಾಜ್ಯಾದ್ಯಂತ ಲಕ್ಷಾಂತರ ಜನ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಅವರ ಅಭಿಮಾನಿಯಾಗಿ ಪ್ರಾಣಿ ಪಕ್ಷಿಗಳಿಗೆ ನಮ್ಮದೊಂದು ಕಿರುಕಾಣಿಕೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಮೈಸೂರು ಮೃಗಾಲಯಕ್ಕೆ ಹೋಗಿ ಬರುತ್ತೇವೆ. ನಾವೇ ನೋಡಿ ಬಂದಿರುವ ಪ್ರಾಣಿಗಳು ಈಗ ಸಂಕಷ್ಟದಲ್ಲಿದೆ. ಕೊರೋನಾದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹೀಗಾಗಿ ನಾವು ಕೆಲ ಪಕ್ಷಿಗಳನ್ನು ದತ್ತು ಪಡೆದಿದ್ದೇವೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತೇವೆ ಎಂದು ಪಕ್ಷಿಗಳನ್ನು ದತ್ತು ಪಡೆದ ಸಂದೀಪ್ ತಿಳಿಸಿದ್ದಾರೆ.

ಈ ವರ್ಷ ಮೂರು ಪಕ್ಷಿಗಳನ್ನು ದತ್ತು ಪಡೆದಿರುವ ಸಂದೀಪ್ ಕುಟುಂಬ. ಮುಂದಿನ ವರ್ಷ ಹುಲಿ, ಆನೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ. ಒಂದು ಹುಲಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಂದು ಆನೆಗೆ ಒಂದು ವರ್ಷಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಬೇಕು. ಹೀಗೆ ದತ್ತು ಪಡೆಯುವುದರಿಂದ ಟ್ಯಾಕ್ಸ್ ಕೂಡ ಕಡಿಮೆಯಾಗಲಿದ್ದು, ವರ್ಷಕ್ಕೆ ಐದು ಜನಕ್ಕೆ ಎರಡು ಬಾರಿ ಫ್ರೀ ಪಾಸ್ ಕೂಡ ಸಿಗಲಿದೆ. ಜತೆಗೆ ಸರ್ಟಿಫಿಕೇಟ್ ನೀಡುತ್ತಾರೆ. ಅದಕ್ಕೆಲ್ಲಾಕ್ಕಿಂತ ಮಿಗಿಲಾಗಿ ಸಂಕಷ್ಟದ ಸಮಯದಲ್ಲಿ ಹೀಗೆ ಪ್ರಾಣಿಗಳನ್ನು ದತ್ತು ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಎಂದು ಪಕ್ಷಿಗಳನ್ನು ದತ್ತು ಪಡೆದ ಸಂದೀಪ್ ಹೇಳಿದ್ದಾರೆ.

ಸಂದೀಪ್ ಅವರ ಈ ಸಹಾಯ ಹಸ್ತಕ್ಕೆ ಇವರ ಸ್ನೇಹಿತರಾದ ಅನಂತ್ ರಾಮ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾವು ಕೂಡ ಯಾವುದಾದರೂ ಪ್ರಾಣಿಯನ್ನು ದತ್ತು ಪಡೆಯುತ್ತೇವೆ ಅಥವಾ ಮುಂದಿನ ವರ್ಷ ಹುಲಿ ಮತ್ತು ಆನೆಯನ್ನು ದತ್ತು ಪಡೆಯುವಾಗ ನಾವು ಅವರ ನೆರವಿಗೆ ನಿಲ್ಲುತ್ತೇವೆ ಎಂದು ಸಂತಸ ತೋರಿದ್ದಾರೆ.

ಒಟ್ಟಾರೆ ಕೊರೊನಾ ಅಬ್ಬರದಲ್ಲಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಜನಸಾಮಾನ್ಯರಿಗೆ ಉಳ್ಳವರು ಕಿಟ್ ನೀಡಿ ಬದುಕಿನ ಭಾರವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಆದರೆ, ಪ್ರವಾಸಿಗರನ್ನು ನಂಬಿಕೊಂಡು ಬದುಕುತ್ತಿದ್ದ ಪ್ರಾಣಿ-ಪಕ್ಷಿಗಳ ಸ್ಥಿತಿಯೂ ಕಷ್ಟವಾಗಿದೆ. ಹಾಗಾಗಿ ನಟ ದರ್ಶನ್ ರಾಜ್ಯದಲ್ಲಿರುವ 9 ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿಗಳ ದತ್ತು ಪಡೆಯಲು ಸೂಚಿಸಿದ್ದರು. ಅದರಂತೆ ಜನಸಾಮಾನ್ಯರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

Darshan: ದರ್ಶನ್​ ಕೊಟ್ಟ ಆ ಒಂದು ಕರೆಗೆ ಅಭಿಮಾನಿಗಳಿಂದ ಬಂತು ಅಭೂತಪೂರ್ವ ಪ್ರತಿಕ್ರಿಯೆ; ಸಾಕ್ಷಿ ತೋರಿಸಿದ ಡಿ ಬಾಸ್

Darshan: ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ? ದರ್ಶನ್ ವಿಶೇಷ ಮನವಿಯಲ್ಲಿದೆ ಸಂಪೂರ್ಣ ಮಾಹಿತಿ